ಅಧಿಕಾರದ ಹಿಂದೆ ಬಿದ್ದ ನಾಯಕನೊಬ್ಬ ರಾಜಕೀಯ ವಲಯದಲ್ಲಿ ಸುಧೀರ್ಘ ವರ್ಷಗಳಿಂದ ಗಳಿಸಿಕೊಂಡು ಬಂದಿದ್ದ ವರ್ಚಸ್ಸನ್ನು ಇಷ್ಟು ಹೀನಾಯವಾಗಿ ಕಳೆದುಕೊಂಡ ಪರಿ ಜನತೆಯಲ್ಲಿ ಅಚ್ಚರಿ ಮೂಡಿಸಿದೆ.
2008ರಲ್ಲಿ ರಾಜ್ಯಾದ್ಯಂತ ಬಿಜೆಪಿ ಜಯಭೇರಿ ಬಾರಿಸಿ ಎರಡನೇ ಬಾರಿಗೆ ಪದವಿಗೇರುವ ಮೂಲಕ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ಏರಿಸಿದ ಕೀರ್ತಿಗೆ ಪಾತ್ರರಾದ ನಾಯಕ ಬಿ.ಎಸ್ ಯಡಿಯೂರಪ್ಪ.
ಆದರೆ ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಶತಾಯಗತಾಯ ಅಧಿಕಾರಕ್ಕೆ ತರಲೇಬೇಕೆಂಬ ಹಠಕ್ಕೆ ಬಿದ್ದುಆಪರೇಷನ್ ಕಮಲ ಮಾಡುವ ಮೂಲಕ ತಾವೇ ಹಳ್ಳಕ್ಕೆ ಬಿದ್ದು ರಾಜ್ಯದ ಜನತೆಯ ಮುಂದೆ ಪೇಚಿಗೆ ಸಿಲುಕಿದ್ದಾರೆ.
ಯಾದಗಿರಿಯ ಗುರುಮಿಠಕಲ್ ಶಾಸಕ ನಾಗನಗೌಡ ಅವರ ಮಗ ಶರಣಗೌಡ ಅವರಿಗೆ ಒಡ್ಡಿದ್ದಆಮಿಷಗಳ ಆಡಿಯೋವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಫೋಟಿಸಿದ ನಂತರ ದಿನೇ ದಿನೇ ನಡೆಯುತ್ತಿರುವ ವಿದ್ಯಾಮಾನಗಳು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸುತ್ತಿದೆ.
ಆಪರೇಷನ್ ಕಮಲ ಆಡಿಯೋ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ಆರೋಪ ಸಾಬೀತಾದರೆ ತಾನು ರಾಜೀನಾಮೆ ನೀಡುವುದಾಗಿ ಸವಾಲು ಹಾಕಿದ ಯಡಿಯೂರಪ್ಪ ನಂತರ ತಾನೇ ರಾಜ್ಯದ ಜನತೆಯ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.
ಶಾಸಕರ ಪುತ್ರ ಶಂಕರಗೌಡ ನನ್ನ ಬಳಿ ಬಂದಿದ್ದು ನಿಜ. ನಾನು ಅವರ ಜೊತೆ ಮಾತನಾಡಿದ್ದು ನಿಜ ಎಂದು ಬಿಎಸ್ ವೈ ತಪ್ಪೊಪ್ಪಿಕೊಂಡಿರುವುದರಿಂದ ಬಿಜೆಪಿ ಮುಜುಗರಕ್ಕೊಳಗಾಗಿದೆ.
ಆಪರೇಷನ್ ಕಮಲ ಆಡಿಯೋ ಪ್ರಕರಣ ಬಯಲಿಗೆ ಬಂದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿ-ಧಾರವಾಡದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮೋದಿ ಅವರು ಯಡಿಯೂರಪ್ಪನವರ ಜತೆ
ಮಾತನಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಸ್ಥಳೀಯ ಶಾಸಕ ಸೇರಿದಂತೆ ಕೆಲವುನಾಯಕರಿಗೆ ಧನ್ಯ ವಾದ ತಿಳಿಸಿದ್ದರು. ಆದರೆ,
ಯಡಿಯೂರಪ್ಪಅವರು ಕೈ ಮುಗಿದುಕೊಂಡು ನಿಂತಿದ್ದರೂ ಅದನ್ನು ಲೆಕ್ಕಿಸದೇ ವೇದಿಕೆಯಿಂದ ನಿರ್ಗಮಿಸಿರುವುದು ಸ್ಥಳೀಯ ನಾಯಕರು ಹಾಗೂ ಜನತೆಯಲ್ಲಿ ಅಚ್ಚರಿ ಮೂಡಿಸಿದೆ.
ಈ ಎಲ್ಲ ಬೆಳವಣಿಗೆಗಳಿಂದಾಗಿ ಯಡಿಯೂರಪ್ಪ ಪಕ್ಷದಲ್ಲೇ ನೇಪಥ್ಯಕ್ಕೆ ಸರಿದರೇ ಎಂಬ
ಅನುಮಾನ ಬಿಜೆಪಿ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿದೆ.