ಲಕ್ನೋ: ಉತ್ತರ ಪ್ರದೇಶದ ಲಕ್ನೋ ನಗರದಲ್ಲಿ ಸೋದರ ರಾಹುಲ್ ಗಾಂಧಿಯೊಂದಿಗೆ ರೋಡ್ ಶೋ ಆರಂಭಿಸುವ ಮೂಲಕ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕಾಂಗ್ರೆಸ್ ಪಾಳಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. 2019ರ ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹೊರತುಪಡಿಸಿದ ಚುನಾವಣಾ ಹೊಂದಾಣಿಕೆಗಳು ನಡೆಯುತ್ತಿದ್ದಂತೆ ಚ್ಚೆತ್ತುಕೊಂಡಿರುವ
ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಇದೀಗ ಪ್ರಿಯಾಂಕಾ ಗಾಂಧಿಯನ್ನು ಆಖಾಡಕ್ಕಿಳಿಸಿದ್ದಾರೆ. ಇಂದು ಲಕ್ನೋ ನಗರದ ಮುಖ್ಯ ರಸ್ತೆಗಳಲ್ಲಿ ಸಾವಿರಾರು ಬೆಂಬಲಿಗರ ನಡುವೆ ತೆರೆದ ವಾಹನದಲ್ಲಿ ಪ್ರಿಯಾಂಕಾ ಗಾಂಧಿ ರೋಡ್ ಶೋ ನಡೆಸಿದರು.
ಪ್ರಿಯಾಂಕಾ ರಾಹುಲ್ ರೋಡ್ ಶೋ ತಂದ ಹೊಸ ಹವಾ
Post navigation
Posted in: