ಇದೇ ಬರುವ ಫೆ. 15 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಅತ್ಯಂತ ವೇಗದ ರೈಲಾಗಿರುವ ‘ಟ್ರೇನ್ 18’ ಅಥವಾ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲನ್ನು ಉದ್ಘಾಟಿಸಲಿದ್ದಾರೆ. ವಾರಣಾಸಿ ಮತ್ತು ನವದೆಹಲಿಯ ಮಧ್ಯೆ ಓಡಾಡುವ ಈ ರೈಲಿನ ವೇಗ ಗಂಟೆಗೆ 165- 180 ಕಿಲೋಮೀಟರ್ ಆಗಿದೆ.
ಇದು ಬುಲೆಟ್ ರೈಲೇನೂ ಅಲ್ಲ. ಆದರೆ ಹಾಲಿ ಭಾರತದಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ರೈಲುಗಳಿಗಿಂತ ವೇಗದ ರೈಲಾಗಿದೆ. ತಮಾಷೆ ಏನೆಂದರೆ ಈ ರೈಲಿನ ಕುರಿತ ಅತಿರಂಜಿತ ಪ್ರಚಾರದಲ್ಲಿ ತೊಡಗಿರುವುದು ಕೇವಲ ಮೋದಿ ಭಕ್ತರಲ್ಲ.
ಸ್ವತಃ ಕೇಂದ್ರ ರೈಲ್ವೆ ಮಂತ್ರಿ ಪಿಯೂಶ್ ಗೋಯಲ್ ಅವರೇ ಇಂತಹ ಒಂದು ಸುಳ್ಳು ಪ್ರಚಾರದಲ್ಲಿ ತೊಡಗಿದ್ದಾರೆ. ಅವರು ಈ ರೈಲಿನ ಕುರಿತು ಪ್ರಚಾರ ನಡೆಸಲು ಚಲಿಸುತ್ತಿರುವ ಟ್ರೇನ್ 18 ರ ಎಡಿಟ್ ಮಾಡಿರುವ ನಕಲಿ ವಿಡಿಯೊ ಬಳಸಿಕೊಂಡಿದ್ದಾರೆ. ಆ ಟ್ವೀಟ್ ನಲ್ಲಿ ಅವರು it’s a bird, it’s a plane… ಎಂದೆಲ್ಲಾ ಬಣ್ಣಿಸಿದ್ದಾರೆ.
ರೈಲಿನ ಮೂಲ ವಿಡಿಯೋ ಇಲ್ಲಿದೆ. ಯಾರಾದರೂ ಎರಡೂ ವಿಡಿಯೋಗಳಲ್ಲಿನ ರೈಲಿನ ವೇಗವನ್ನು ಗಮನಿಸಬಹುದಾಗಿದೆ.
ಮಾತ್ರವಲ್ಲ ಸಚಿವರು ಟ್ವೀಟ್ ಮಾಡಿರುವ ವಿಡಿಯೋ ಫೇಕ್ ಎಂಬುದನ್ನು ಸುಲಭವಾಗಿ ಹೇಳಬಹುದಾಗಿದೆ.
ಯಾರಾದರೂ ಎರಡೂ ವಿಡಿಯೋಗಳಲ್ಲಿನ ರೈಲಿನ ವೇಗವನ್ನು ಗಮನಿಸಬಹುದಾಗಿದೆ. ಮಾತ್ರವಲ್ಲ ಸಚಿವರು ಟ್ವೀಟ್ ಮಾಡಿರುವ ವಿಡಿಯೋ ಫೇಕ್ ಎಂಬುದನ್ನು ಸುಲಭವಾಗಿ ಹೇಳಬಹುದಾಗಿದೆ. ನರೇಂದ್ರ ಮೋದಿ ಸರ್ಕಾರದ ಸಾಧನೆಗಳನ್ನು ಸಚಿವರು ಸಾರ್ವಜನಿಕರಿಗೆ ತಿಳಿಸಬೇಕು ನಿಜ.
ಆದರೆ ಸತ್ಯವನ್ನು ತಿರುಚಿ ತಿಳಿಸಬೇಕೆ?
ಈ ಅತಿ ವೇಗದ ಟ್ರೇನ್ 18 ಕುರಿತು ಕೆಲವು ತಪ್ಪು ತಿಳುವಳಿಕೆಗಳನ್ನು ಸಹ ಮೋದಿ ಭಕ್ತರು ಜನರಲ್ಲಿ
ಮೂಡಿಸುತ್ತಿದ್ದಾರೆ. ಮೂಲತಃ ಟ್ರೇನ್ 18 ಎಂದಿದ್ದ ಇದರ ಹೆಸರನ್ನು ‘ವಂದೇ ಭಾರತ್’ ಎಂದು ಸ್ವತಃ ರೈಲ್ವೆ
ಮಂತ್ರಿಗಳು ಮರು ನಾಮಕರಣ ಮಾಡಿದ್ದಾರೆ. ಆದರೆ ಭಕ್ತರ ವಲಯದಲ್ಲಿ ಇದನ್ನು “ವಂದೇ ಮಾತರಂ ರೈಲು”
ಎಂದು ಪ್ರಚುರಪಡಿಸಲಾಗಿದೆ.
ಈ ರೈಲಿನ ಕುರಿತು ಕೆಲ ವಾಸ್ತವಾಂಶಗಳು ಹೀಗಿವೆ.
- ಈ ರೈಲಿನ ಹೆಸರು ಟ್ರೇನ್ 18. ಇದನ್ನು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಎಂದು ಮರುನಾಮಕರಣ
ಮಾಡಲಾಗಿದೆ. ಇದರ ಹೆಸರು ವಂದೇ ಮಾತರಂ ರೈಲು ಎಂಬುದು ಸುಳ್ಳು ಮಾಹಿತಿ. - ವಂದೇ ಭಾರತ್ ರೈಲಿನ ವೇಗ ಗರಿಷ್ಠ ಗಂಟೆಗೆ 165 ಕಿಲೋಮೀಟಿನಿಂದ 180 ಕಿಲೋಮೀಟರ್ ಆಗಿದೆ. ಬುಲೆಟ್
ರೈಲುಗಳ ವೇಗ ಗರಿಷ್ಠ ಗಂಟೆಗೆ 250 ರಿಂದ 325 ಕಿಲೋಮೀಟರ್. ವಂದೇ ಭಾರತ್ ರೈಲು ಬುಲೆಟ್ ರೈಲಲ್ಲ. - ಟ್ರೇನ್ 18 ಈಗಿರುವ ಶತಾಬ್ದಿ ರೈಲನ್ನು ಸ್ಥಳಾಂತರಗೊಳಿಸುತ್ತದೆ ಎನ್ನಲಾಗಿದೆ.
- ಟ್ರೇನ್ 18 ದೆಹಲಿ ಮತ್ತು ವಾರಣಾಸಿ ಮಧ್ಯೆ ಚಲಿಸಲಿದೆ.
- ಟ್ರೇನ್ 18 ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಯೋಜನೆಯ ಅಡಿಯಲ್ಲಿ ಚೆನ್ನೈನಲ್ಲಿ
ತಯಾರಿಸಲಾಗಿರುವ ನೂತನ ರೈಲಾಗಿದೆ. - ಟ್ರೇನ್ 18 ನಲ್ಲಿ ಒಂದು ಸಲಕ್ಕೆ ಒಟ್ಟು 1,128 ಪ್ರಯಾಣಿಕರು ಪ್ರಯಾಣಿಸಬಹುದಾಗಿದೆ.