ಮನುಷ್ಯರ ಸಾವನ್ನು ಬಯಸುವುದು, ಮನುಷ್ಯರು ಸತ್ತಾಗ ಸಂಭ್ರಮಿಸುವುದು ಬಿಜಿಪಿ ನಾಯಕರ ಮತ್ತು ಬಿಜೆಪಿ ಬೆಂಬಲಿಗರ ರಕ್ತದಲ್ಲೇ ಇದೆಯೇ? ಹೌದು ಎನ್ನುತ್ತವೆ ಕಳೆದ ಕೆಲವು ವರ್ಷಗಳಲ್ಲಿ ಬಿಜೆಪಿ ಸಿದ್ದಾಂತವನ್ನು ಬೆಂಬಲಿಸುವವರ ನಡವಳಿಕೆಗಳು. ಸಾವಿನ ಸಂಭ್ರಮ ಎಂಬುದು ಬಿಜೆಪಿಯ ಯಾರೋ ಕೆಲವರಲ್ಲಿ ಮಾತ್ರ ಕಂಡುಬರದೇ ಇಡೀ ಬಿಜೆಪಿ ಬೆಂಬಲಿಗರ ಸಮೂಹದಲ್ಲಿ ಹಲವಾರು ವರ್ಷಗಳಿಂದಲೂ ಕಂಡುಬರುವ ಒಂದು ಪೃವೃತ್ತಿಯೇ ಆಗಿರುವುದನ್ನು ಕಾಣುತ್ತೇವೆ.
ಮಾಜಿ ಪ್ರಧಾನಿ ದೇವೇಗೌಡರ ಸಾವನ್ನು ಬಯಸುವ ರೀತಿಯಲ್ಲಿ ಬಿಜೆಪಿಯ ಶಾಸಕ ಪ್ರೀತಂ ಗೌಡ ಸಂಭಾಷಣೆ ನಡೆಸಿರುವುದು ಇಂದು ಬಹಿರಂಗವಾಗುತ್ತಿದ್ದಂತೆ ‘ಅಪರೇಷನ್ ಕಮಲ’ದ ಆಡಿಯೋ ಪ್ರಕರಣ ಬೇರೆಯದೇ ತಿರುವು ಪಡೆದುಕೊಂಡಿದೆ. ಪ್ರೀತಂ ಗೌಡ ಅವರ ಹೇಳಿಕೆಗೆ ಅನೇಕ ರಾಜಕೀಯ ಮುಖಂಡರು ಖಂಡನೆ ವ್ಯಕ್ತಪಡಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಟ್ವೀಟ್ ಮೂಲಕ ತಮ್ಮ ಅಸಮಧಾನ ವ್ಯಕ್ತಪಡಿಸಿ ಇಂತಹ ಪ್ರವೃತ್ತಿ ಬಿಜೆಪಿಯ ರಕ್ತದಲ್ಲೇ ಇದೆ ಎಂದೂ ಹೇಳಿದ್ದಾರೆ.
ದೇವೇಗೌಡರಂತಹ ಒಬ್ಬ ಹಿರಿಯ ಮುತ್ಸದ್ಧಿ ರಾಜಕಾರಣಿಯ ಬಗ್ಗೆ ಇಷ್ಟು ಕೀಳಾಗಿ ಮಾತಾಡಿರುವ ಪ್ರೀತಂ ಗೌಡ ಇಂದು ಸುದ್ದಿಯಾಗಿದ್ದಾರೆ. ಆದರೆ ಇಂತಹ ‘ಸಾವಿನ ಸಂಭ್ರಮದ’ ಮನಸ್ಥಿತಿ ಬಿಜೆಪಿ ಬೆಂಬಲಿಗರಲ್ಲಿ ಎಷ್ಟು ವ್ಯಾಪಕವಾಗಿದೆ ಎನ್ನಲು ಇಲ್ಲಿ ಇನ್ನೂ ಹಲವು ನಿದರ್ಶನಗಳನ್ನು ನೋಡಿ.

ಇಲ್ಲಿರುವುದು ಶಕುಂತಲಾ ರಾಜ್ ಎಂಬ ವ್ಯಕ್ತಿ ನೆನ್ನೆಯಷ್ಟೇ ಮಾಡಿರುವ ಟ್ವೀಟ್ ನ ಸ್ಕ್ರೀನ್ ಶಾಟ್ ಮತ್ತು ಲಿಂಕ್. ಬಿಜೆಪಿ ಮತ್ತು ಮೋದಿಯ ಕಟ್ಟರ್ ಬೆಂಬಲಿಗರಾಗಿರುವ ಇವರ ಈ ಕೀಳು ಮಟ್ಟದ ಹೇಳಿಕೆಯೂ ಸಹ ಮಾಜಿ ಪ್ರಧಾನಿ ದೇವೇಗೌಡರ ಸಾವನ್ನು ಬಯಸುವುದೇ ಆಗಿದೆ. ಶಕುಂತಲಾ ರಾಜ್ ತನ್ನನ್ನು ತಾನು ‘ಕಲ್ಪತರು ನಾಡಿನ ಹೆಮ್ಮೆಯ ಹೆಣ್ಣುಮಗಳು’ ಎಂದು ತಮ್ಮ ಟ್ವಿಟರ್ ಪ್ರೊಫೈಲ್ ನಲ್ಲಿ ಹೇಳಿಕೊಂಡಿದ್ದಾರೆ. ಅವರ ಟ್ವಿಟರ್ ಕವರ್ ಪುಟದಲ್ಲಿ ನರೇಂದ್ರ ಮೋದಿಯವರ ಭಾವಚಿತ್ರವೂ ಇರುವುದನ್ನು ನೋಡಬಹುದು.



ಶಕುಂತಲಾ ರಾಜ್ ಅವರ ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಹಲವು ಬಿಜೆಪಿ ಬೆಂಬಲಿಗರು ಇದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾ ಹೋಗಿದ್ದಾರೆ. ಮೇರಾ ಭಾರತ್ ಮಹಾನ್ ಎಂಬ ಹೆಸರಿನ ಅಕೌಂಟಿನ ವ್ಯಕ್ತಿಯಂತೂ ‘ಎಂತೆಂಥ ಪುಣ್ಯಾತ್ಮರಿಗೆ ಸಾವು ಬಂತು. ಕೆಲವು ಪಾಪಿಗಳಿಗೆ ಇನ್ನು ಸಾವು ಬಂದಿಲ್ಲ. ಅಂತವರು ಸತ್ತಾಗ ಕರ್ನಾಟಕ ಜನತೆ ಸ್ವಲ್ಪ ನೆಮ್ಮದಿಯ ರಾಜಕಾರಣ ನೋಡೊದಕ್ಕೆ ಸಾಧ್ಯ ಆಗತ್ತೆ’ ಎಂದು ಪ್ರತಿಕ್ರಿಯೆ ನೀಡಿದ್ದಾನೆ/ಳೆ.
ತಮ್ಮದು ಭಾರತದ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಪಕ್ಷ ಎಂಬುದು ಬಿಜೆಪಿಯವರು ಸಾಮಾನ್ಯವಾಗಿ ಹೇಳುವ ಮಾತು. ಆದರೆ ಸಹಮಾನವರ ಸಾವನ್ನು ಬಯಸುವುದಾಗಲೀ, ಸಾವನ್ನು ಸಂಭ್ರಮಿಸುವುದಾಗಲೀ ಭಾರತದ ಸಂಸ್ಕೃತಿಯಲ್ಲಿದೆಯೇ? ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಸಿದ್ದರಾಮಯ್ಯ ಅಕಾಲಿಕ ಸಾವು ಕಂಡಾಗ ಇಡೀ ರಾಜ್ಯದ ಜನತೆ ಸಿದ್ದರಾಮಯ್ಯ ಕುಟುಂಬದ ದುಃಖದಲ್ಲಿ ಭಾಗಿಯಾಗಿದ್ದಾಗ ಮೋದಿ ಭಕ್ತರು ಮತ್ತು ಬಿಜೆಪಿ ಬೆಂಬಲಿಗರು ಅದನ್ನು ಸಂಭ್ರಮಿಸುವ ಹೀನ ಮಟ್ಟಕ್ಕೆ ಹೋಗಿದ್ದರು.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದಾಗಲಂತೂ ಸ್ವತಃ ಪ್ರಧಾನಿ ಮೋದಿಯವರ ಟ್ವಿಟರ್ ನಿಂದ ಅನುಸರಿಸಲ್ಪಡುವ ದದೀಚ್ ಎಂಬ ವ್ಯಕ್ತಿ ‘ಹೆಣ್ಣು ನಾಯಿಯೊಂದು ಸತ್ತಿತು’ ಎಂದು ಟ್ವೀಟ್ ಮಾಡಿ ವಿಕೃತಿ ಪ್ರದರ್ಶಿಸಿದ್ದ. ಈಗ ‘ಅಪರೇಷನ್ ಕಮಲ’ ಆಡಿಯೋದಲ್ಲಿ ಪ್ರೀತಂ ಗೌಡ ‘ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರ ಸ್ವಾಮಿ ಇಬ್ಬರ ಕುರಿತೂ ಆಡಿರುವ ಮಾತುಗಳನ್ನು ಇಡೀ ರಾಜ್ಯವೇ ಕೇಳಿಸಿಕೊಳ್ಳುತ್ತಿದೆ.
ರಾಜಕೀಯ ಭಿನ್ನಮತ, ಪರಸ್ಪರ ರಾಜಕೀಯ ವಿರೋಧ, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಸಹಜ. ಆದರೆ ಈ ಯಾವುದೂ ಸಹ ನಮ್ಮ ಎದುರಾಳಿಗಳ ಸಾವನ್ನು ಬಯಸುವ ಮಟ್ಟಿಗೆ ಹೋಗುವುದು ಅಮಾನವೀಯ ಮತ್ತು ನೀಚತನದ ಪರಮಾವಧಿ. ಇಂತಹ ನಡವಳಿಕೆಗಳನ್ನೆಲ್ಲಾ ಸಂಸ್ಕೃತಿ ಎಂದು ಪ್ರಜ್ಞಾವಂತರಾದವರು ಕರೆಯಲು ಸಾಧ್ಯವಿಲ್ಲ. ಇದು ಕೀಳು ಮಟ್ಟದ ವಿಕೃತಿ ಮತ್ತು ಅಮಾನವೀಯತೆಯ ಅತಿರೇಕದ ಸ್ಥಿತಿ ಎನ್ನಬಹುದು.
TruthIndia
ಸಾವು ನೋವಿನ ಬಳಿ
ಸಂತೋಷವು ಎಂದೂ ಬಾರದು..
ಸಾವು ಬಯಸುವ ಮನ ತಾನೊಮ್ಮೆ
ಆ ನೋವು ಸ್ವತಃ ಆಮಂತ್ರಣ ಬಳಿ
ಬೀಕ್ಷೆ ಕೇಳಿದಂತೆ..
ಮನುಷ್ಯ ತನ್ನ ವೈರಿಯ ಸಾವಿನ ಸುದ್ದಿ ಕೇಳಿ
ಪಕ್ಕಕ್ಕೆ ಹೋಗಿ ಕಣ್ಣು ಸವರುವ ಸುಸಂಸ್ಕೃತವೂ
ನಮ್ಮ ಹೆಮ್ಮೆಯ ಭಾರತ…
ಮನುಜನಾಗಿ ಬಂದ ಮೇಲೆ
ಹುಟ್ಟು ಸಾವು ಸಹಜ
ಬಿಟ್ಟು ಹೋಗುವ ದಿನ
ಎಷ್ಟು ಕಾಲ ಒಳತಿಗಾಗಿ ಇಟ್ಟಿ..
ನೀನು ಹೋದ ಮೇಲೆ ನಿನ್ನ ಹೆಸರು
ಬಾರದು ..
ನಿನ್ನ ಹೆತ್ತ ತಂದೆ- ತಾಯಿಗೆ ಸಿಮಿತ..
>ಆನಂದಬಸವ.