ಪುಲ್ವಾಮಾ: ‘ಉರಿ’ಯಲ್ಲಿ ಭಾರತದ ಸೇನಾ ಪಡೆಯ ಮೇಲೆ ನಡೆದ ಭಯೋತ್ಪಾದನಾ ದಾಳಿಯ ನಂತರದಲ್ಲಿ ಭೀಕರವಾದದ್ದು ಎನ್ನಲಾದ ಭಯೋತ್ಪಾದನಾ ದಾಳಿ ಕಾಶ್ಮೀರದ ಪುಲ್ವಾಮಾದಲ್ಲಿ ಇಂದು ನಡೆದಿದೆ. ಈ ದಾಳಿಯಲ್ಲಿ ಮೀಸಲು ಪೊಲೀಸ್ ತುಕಡಿಯ ಕನಿಷ್ಠ ಎಂಟು ಯೋಧರು ಸ್ಥಳದಲ್ಲೇ ಸಾವನ್ನಪ್ಪಿದ್ದು ಅನೇಕರು ಗಾಯಗೊಂಡಿದ್ದಾರೆ. 15 ಜನರ ಸ್ಥಿತಿ ಗಂಭೀರವಾಗಿದೆ. 70 ಮಂದಿ ಸಿ ಆರ್ ಪಿ ಎಫ್ ಸೈನಿಕರಿದ್ದ ವಾಹನದ ಮೇಲೆ ನಡೆದ ಕಾರ್ ಬಾಂಬ್ ದಾಳಿ ಇದಾಗಿದ್ದು ಇದರ ಹೊಣೆಯನ್ನು ಉಗ್ರಗಾಮಿ ಸಂಘಟನೆಯಾದ ಜೈಶ್ ಎ ಮಹಮೂದ್ ಘೋಷಿಸಿಕೊಂಡಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.
ಗೃಹ ಸಚಿವ ರಾಜನಾಥ ಸಂಗ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ವೆಂಕಯ್ಯ ನಾಯ್ಡು, ಅರುಣ್ ಜೈಟ್ಲಿ , ಅರವಿಂದ ಕೇಜ್ರಿವಾಲ್ ಮುಂತಾದವರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.