ಬೆಂಗಳೂರು: ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರ್ ನಲ್ಲಿ ದಲ್ಲಿ ಫೆ. 14ರಂದು ಉಗ್ರರು ನಡೆಸಿದ ಬಾಂಬ್ ದಾಳಿಯಲ್ಲಿ ಹುತಾತ್ಮರಾದ ಸಿ ಆರ್ ಪಿ ಎಫ್ ನ 49 ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಫ್ರೀಡಂ ಪಾರ್ಕ್ ಬಳಿ ತೆರಳಿದ್ದ ಪ್ರಕಾಶ್ ರಾಜ್ ಅವರಿಗೆ ಮೋದಿ ಭಕ್ತರ ಗುಂಪೊಂದು ಅಸಹ್ಯಕರ ರೀತಿಯಲ್ಲಿ ತಡೆಯೊಡ್ಡಿರುವ ಘಟನೆ ನೆನ್ನೆ (ಶುಕ್ರವಾರ) ನಡೆದಿದೆ.
ನೆನ್ನೆ ಸಂಜೆ ಕಾಶ್ಮೀರದಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವೊಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಯೋಜನೆಗೊಂಡಿತ್ತು. ಪ್ರಖ್ಯಾತ ನಟ ಹಾಗೂ ಹಾಲಿ ರಾಜಕಾರಣಿಯಾಗಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಉದ್ದೇಶಿಸಿರುವ ಪ್ರಕಾಶ್ ರಾಜ್ ಸಹ ತಮ್ಮ ಒಡನಾಡಿಗಳೊಂದಿಗೆ ಅಲ್ಲಿಗೆ ತೆರಳಿದ್ದರು. 7.30ರ ಹೊತ್ತಿಗೆ ಹುತಾತ್ಮ ಸೈನಿಕರಿಗೆ ಮೊಂಬತ್ತಿ ಹಚ್ಚುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ ಪ್ರಕಾಶ್ ರಾಜ್ ಪ್ರೇಕ್ಷಕರನ್ನು ಉದ್ದೇಶಿಸಿ ಮಾತಾಡಲು ಆರಂಭಿಸುತ್ತಿದ್ದಂತೆ ಗುಂಪೊಂದು ಅವರ ಮಾತನ್ನು ಅರ್ಧಕ್ಕೆ ತಡೆಯಿತು.
ತಮ್ಮ ಮಾತನ್ನು ಆರಂಭಿಸಿದ ಪ್ರಕಾಶ್ ರಾಜ್ ಅವರು, ‘ಈ ನೋವಿನ ವಿಷಯದಲ್ಲಿ ಒಬ್ಬರ ಮೇಲೆ ನಾವು ಬೇರೆಯಾಗುವುದು ಬೇಡ. ಶತ್ರುಗಳು ನಮ್ಮ ಮೇಲೆ ದಂಡೆತ್ತಿ ಬಂದಾಗ ಎಲ್ಲಾ ಭಾರತೀಯರ ಹೊಣೆಗಾರಿಕೆ ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ನಿಂತುಕೊಳ್ಳುವುದು, ಒಂದಾಗಿ ಯೋಚನೆ ಮಾಡುವುದು, ಒಂದಾಗಿ ನಮ್ಮ ನಾಯಕರುಗಳಿಗೆ ಒಂದು ಬೆಂಬಲವನ್ನು ಸೂಚಿಸುವುದು…” ಎಂದು ಹೇಳುತ್ತಿದ್ದಂತೆ ಗುಂಪಿನ ವ್ಯಕ್ತಿಯೊಬ್ಬ ಮಾತಿಗೆ ತಡೆಯೊಡ್ಡಿ, ‘ಇಂತಹ ಘಟನೆ ನಡೆದಾಗ ಮಾತ್ರ ಮಾತಾಡಬೇಡಿ, ದಿನಾಲೂ ಸೈನಿಕರ ಬಗ್ಗೆ ಮಾತಾಡಿ. ಈ ಘಟನೆ ನಡೆದಾಗ ಮಾತ್ರ ಬಂದಿದ್ದೀರಾ ಮಾತಾಡೋಕೆ?’ ಎಂದು ಪ್ರಶ್ನಿಸುತ್ತಿದ್ದಂತೆ ಇನ್ನೂ ಹತ್ತಾರು ಮಂದಿ ಗದ್ದಲ ಎಬ್ಬಿಸಿದ್ದರು. ಮುಂದೆ ಪ್ರಕಾಶ್ ರಾಜ್ ಅವರಿಗೆ ಮಾತಾಡಲು ಅವಕಾಶವನ್ನೇ ನೀಡದೇ ಕೂಗಾಟ ಆರಂಭಿಸಿದ್ದರು.
ಕೊನೆಯಲ್ಲಿ ಪ್ರಕಾಶ್ ರಾಜ್ ಅವರು ಗಟ್ಟಿ ಧ್ವನಿಯಲ್ಲಿ ‘ಭಾರತ’ ಎಂದು ಕೂಗಿದರೆ ಅದಕ್ಕೆ ಪ್ರತಿಯಾಗಿ ಮೋದಿ, ಮೋದಿ ಎಂದು ಗುಂಪು ಕೂಗಿದೆ. ಹೀಗೆ ಪ್ರಕಾಶ್ ರಾಜ್ ಅವರ “ಭಾರತ” ಘೋಷಣೆಗೆ ಮೋದಿ ಭಕ್ತರ “ಮೋದಿ” ಪ್ರತಿಘೋಷಣೆಯಿಂದಾಗಿ ವಾತಾವರಣ ಕಲುಷಿತಗೊಂಡಿತು. ಈ ಗುಂಪು ಪ್ರಕಾಶ್ ರಾಜ್ ಅವರಿಗೆ ತಡೆಯೊಡ್ಡುವ ದುರುದ್ದೇಶದಿಂದ ಪೂರ್ವಯೋಜಿತವಾಗಿಯೇ ಈ ಕಾರ್ಯಕ್ರಮದ ಸ್ಥಳಕ್ಕೆ ಬಂದಿರುವುದನ್ನು ಇದು ಸೂಚಿಸುತ್ತದೆ.
ದೇಶದ ಒಬ್ಬ ಪ್ರಜೆಯಾಗಿ ಹುತಾತ್ಮ ಸೈನಿಕರ ಕುರಿತು ಮಾತನಾಡಲು ಅವಕಾಶ ನೀಡದ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಪ್ರಕಾಶ್ ರಾಜ್ “When a nation mourns n talks the need to be united…SHAME on these who are politicizing a tragedy… ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಸ್ಮರಿಸುತ್ತ..ನಾವು ಭಾರತೀಯರೆಲ್ಲ ಒಂದಾಗಿರಬೇಕೆಂದು ಮಾತನಾಡುತ್ತಿದ್ದ ಸಂತಾಪ ಸಭೆಯನ್ನು ಸ್ವಾರ್ಥ ರಾಜಕೀಯಕ್ಕೆ ಬಳಸುವ ಈ ದೇಶದ್ರೋಹಿಗಳಿಗೆ ಧಿಕ್ಕಾರ..JAI HIND” ಎಂದು ಟ್ವೀಟ್ ಮಾಡಿದ್ದಾರೆ.
TruthIndia
3 Comments
ಬೇವಾರ್ಸಿ ಗಳು ಬಿಜೆಪಿ ಗುಲಾಮರು..ಇವರು ಎಷ್ಟು ಜನರನ್ನು save ಮಾಡಿದ್ದಾರೆ ಎಂದು ಆಲೋಚನೆ ಮಾಡಬೇಕಾಗಿದೆ ..ಮನಾ ಮರ್ಯಾದೆ ಇದ್ದದ್ದೇ ಆದರೆ ಇನ್ನೊಬ್ಬ ಪ್ರಮುಖ ವ್ಯಕ್ತಿಗಳ ಗೆ ಹೀಗೆ ಮಾಡುತ್ತಿರಲಿಲ್ಲ…ಆದರೆ ಇದು ದುರುದ್ದೇಶದಿಂದ ಮಾಡಿದ ಕೃತ್ಯ ಎಂದರು ತಪ್ಪಾಗಲಾರದು…
Am with we with Prakash rai.
ಇದಕ್ಕೆಲ್ಲಾ ತಲೆಕೆಡಿಸುವ ಅಗತ್ಯ ಇಲ್ಲ.ಅವರಿಗೆ ರಾಷ್ಟ್ರದ ಬಗ್ಗೆ ಗೌರವವೂ ಇಲ್ಲ, ಪ್ರೀತಿಯೂ ಇಲ್ಲ.ಬರೇ ರಾಜಕೀಯ ಮತ್ತು ಅದಿಕಾರದ ಆಸೆ.ಅಂತವರಿಂದ ರಾಷ್ಟ್ರಪ್ರೇಮ ಕೇಳುವಂತಹ ಗತಿಗೇಡು ನಿಮಗೆ ಇಲ್ಲ ಸರ್.ನೀವು ಇಟ್ಟ ಹೆಜ್ಜೆ ಮುಂದೆ ಇಡಿ ಸರ್. ನಮ್ಮಂತಹ ಯುವಕರು ಈ ರಾಷ್ಟ್ರದ ಬಗ್ಗೆ ನಿಜವಾದ ಗೌರವ ಕೊಡಲು.ಪ್ರಾಣ ಕೊಡಲು ಸಿದ್ಧವಿದ್ಧೇವೆ.ನಿಮ್ಮ ಹೋರಾಟವನ್ನು ಮುಂದುವರೆಸಿ ಸರ್.ಜೈ ಹಿಂದ್.
ಈ ಪ್ರಕಾಶ್ ರೈ ತಡೆಯೊಡ್ಡಲು ಬಂದವರಲ್ಲಿ ಹೆಚ್ಚು ಮನುವ್ಯಾದಿ ಬ್ರಾಹ್ಮಣ್ಯಯವ್ಯಾದಿ ಬಲಪಂಥೀಯ ಪಕ್ಷದ ಪ್ರಧಾನ ಸೇವಕನ ಭಕ್ತರು. ಆ ಬಿಜೆಪಿಯ ಪಕ್ಷವೇ ಅಂದು ಆರ್ ಎಸ್ ಎಸ್ ಸಂಘಟನೆಯ ಭಾತೃ ಸಂಸ್ಥೆಯೇ ಸರಿ 1925 ವಿಜಯದಶಮಿ ದಿನದಿಂದಲೇ ಅಸಹಿಷ್ಣುತೆ ಅಸೂಯೆ ಅಸೂಯೆ ಅಧರ್ಮದ ಅಂಧಾಚಾರ ಅಹಂಕಾರ ಅತ್ಯಾಚಾರ ಅಸತ್ಯ ಅನ್ಯಾಯ ಅಸಮಾನತೆ ಸೃಷ್ಟಿಸಲು ಬಂದ ಪಕ್ಷವದು ಎಂದು ಈ ಜಗತ್ತಿಗೇ ಗೊತ್ತಿರುವಾ ಸಂಗತಿಯಾಗಿದೆ.
ಹಿಂದೂ ಬಗ್ಗೆ ಏನೂ ಅರಿಯದ ಭಾರತೀಯರೇ ನೂರಕ್ಕೆ ನೂರು ಹೋಗಲಿ ಭಾರತೀಯರಲ್ಲಿ ಯಾರಿಗಾದರೂ ಸರಿ ಹಿಂದೂ ಎಂದರೇನು ಅದು ಏಲ್ಲಿ ಹುಟ್ಟಿತು. ಅದರ ಸಂಸ್ಥಾಪಕರು ಯಾರೂ ಯಾರಾದರೂ ಇದ್ದಾರೆಯೇ ಅದರ ದೇಶ ಕಾಲ ನೆಲ ತಿಳಿದಿದೆಯೇ. ಹೀಗೆ ನೂರಾರು ಪ್ರಶ್ನೆಗಳಿಗೆ ಉತ್ತರವನ್ನು ಕೊಡವಾ ಯೋಗ್ಯತೆ ಭಾರತೀಯರಲ್ಲಿ ಯಾರಿಗಾದರೂ ಇದೆಯೇ ಇದ್ದರೇ ಹೆಸರಿಸಿ.