- ಕನ್ನಡದ ಹಿರಿಯ ಸಾಹಿತಿ, ಸ್ವಾತಂತ್ರ್ಯ ಹೋರಾಟಗಾರ ನಾಡೋಜ ಕೊ. ಚನ್ನಬಸಪ್ಪ ನಿಧನ
- ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ 96 ವರ್ಷದ ಕೊ.ಚೆನ್ನಬಸಪ್ಪ ಶನಿವಾರ ಬೆಳಿಗ್ಗೆ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ನಿಧನ
- ನಿವೃತ್ತ ನ್ಯಾಯಾಧೀಶರಾಗಿದ್ದ ಕೋ.ಚನ್ನಬಸಪ್ಪ ಅವರು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಮಡುಗು ಸಮೀಪದ ಆಲೂರಿನಲ್ಲಿ 1922 ಫೆಬ್ರವರಿ 21ರಂದು ಜನಿಸಿದರು
- ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಚಳವಳಿಗೆ ಧುಮುಕಿ ಸೆರೆವಾಸ ಅನುಭವಿಸಿದ್ದ ಕೊ.ಚನ್ನಬಸಪ್ಪ
- ಬಿಡುಗಡೆ ನಂತರ ಬಿಎ ಮತ್ತು ಬೆಳಗಾವಿ ಕಾಲೇಜಿನಿಂದ ಕಾನೂನು ಪದವಿ ಪಡೆದು ನಂತರ ಚರಿತ್ರೆ ಮತ್ತು ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ಕೊ.ಚನ್ನಬಸಪ್ಪ
- ನ್ಯಾಯಾಧೀಶ ವೃತ್ತಿ ಜತೆಗೆ ಕತೆ, ಕವನ, ವಿಮರ್ಶೆ ಸೇರಿದಂತೆ ಕನ್ನಡದ ನಾನಾ ಸಾಹಿತ್ಯ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದ ಕೊ.ಚನ್ನಬಸಪ್ಪ ಕುವೆಂಪು ಸಾಹಿತ್ಯದ ಆಳವಾದ ಅಧ್ಯಯನ ಮಾಡಿದ್ದರು
- ಸ್ವಾತಂತ್ರ್ಯ ಮಹೋತ್ಸವ, ಪ್ರಾಣಪಕ್ಷಿ, ಜೀವತೀರ್ಥ ಸೇರಿದಂತೆ 5 ಕವನ ಸಂಕಲನಗಳು,ಗಡಿಪಾರು, ನಮ್ಮೂರ ದೀಪ, ಗಾಯಕನಿಲ್ಲದ ಸಂಗೀತ ಮುಂತಾದ 6 ಕಥಾ ಸಂಕಲನ
- ಖಜಾನೆ, ಶ್ರೀ ರಕ್ತತರ್ಪಣ, ಹಿಂದಿರುಗಿ ಬರಲಿಲ್ಲ, ನ್ಯಾಯಾಲಯದ ಸತ್ಯಕಥೆಗಳು, ಪ್ರಾಣಪಕ್ಷಿ, ಹೃದಯ ನೈವೇದ್ಯ, ನೊಗದ ನೇಣು ಸೇರಿ ಒಟ್ಟು 8 ಜೀವನ ಚರಿತ್ರೆ, ರಾಮಾಯಣ ದರ್ಶನಂ ಮಹಾಕಾವ್ಯ ಸಮೀಕ್ಷೆ, ದೃಢಪ್ರತಿಜ್ಞೆ, ಕುವೆಂಪು ವೈಚಾರಿಕತೆ ಭಿನ್ನವತ್ತಳೆಗಳು ಸಂಪಾದಿತ ಕೃತಿಗಳನ್ನು ರಚಿಸಿದ್ದ ಕೋ.ಚನ್ನಬಸಪ್ಪ
More Articles
By the same author