A major fire has broken out in the forest areas of the Bandipur Tiger Reserve on Saturday, 23 February 2019. Hundreds of acres of forest areas have been destroyed by the fire. -KPN ### fire at Bandipur Reserve forest
ಚಾಮರಾಜನಗರದ ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಭಾರೀ ಬೆಂಕಿಗೆ ಬರೋಬ್ಬರಿ 15 ಸಾವಿರಕ್ಕೂ ಹೆಚ್ಚು ಎಕರೆ ಅರಣ್ಯ ಭೂಮಿ ಭಸ್ಮ
ಕಳೆದ ಎರಡು ದಿನಗಳಿಂದ ಬಂಡೀಪುರದಲ್ ಸುತ್ತಮುತ್ತಲು ಕಾಣಿಸಿಕೊಂಡಿದ್ದ ಕಾಡ್ಗಿಚ್ಚು
ದಿನದಿಂದ ದಿನಕ್ಕೆ ಹೆಚ್ಚಾಗಿ ಶನಿವಾರ ಭೀಕರ ಸ್ವರೂಪ ಪಡೆದುಕೊಂಡ ಕಾಡ್ಗಿಚ್ಚು
ಬಂಡೀಪುರದ ರಾಷ್ಟ್ರೀಯ ಉದ್ಯಾನ ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳು, ಅಪರೂಪದ ಪ್ರಾಣಿ ಪಕ್ಷಿಗಳ ಸಂರಕ್ಷಿಸಿದ್ದ ಉದ್ಯಾನವಾಗಿತ್ತು
ಅರಣ್ಯ ಇಲಾಖೆ ಸಿಬ್ಬಂದಿ, ಸ್ವಯಂ ಸೇವಕರ ನೆರವಿನಿಂದ ಕಾಳ್ಗಿಚ್ಚು ನಿಯಂತ್ರಿಸಲು ಹಗಲಿರುಳು ಶ್ರಮಿಸುತ್ತಿದ್ದರೂ ನಿಯಂತ್ರಣಕ್ಕೆ ಬಾರದ ಬೆಂಕಿಯ ಕೆನ್ನಾಲಿಗೆ
ಗಾಳಿಯ ವೇಗಕ್ಕೆ ಬೆಂಕಿ ತೀವ್ರವಾಗಿ ಪಸರಿಸುತ್ತಿದ್ದು, ಬೇಸಿಗೆಯ ಬಿಸಿಲು ಕೂಡ ಕಾಡ್ಗಿಚ್ಚು ಪಸರಿಸಲು ಕಾರಣ
ಬೆಂಕಿ ನಿಯಂತ್ರಣಕ್ಕೆ ಬಾರದಿದ್ದರೆ ಕೇರಳ ವ್ಯಾಪ್ತಿಯ ಅರಣ್ಯಕ್ಕೂ ಹರಡುವ ಆತಂಕ ವ್ಯಕ್ತಪಡಿಸಿದ ಅಧಿಕಾರಿಗಳು
ಈ ಭಾಗ ದಟ್ಟವಾದ ಅರಣ್ಯ ಪ್ರದೇಶವಾಗಿದ್ದು, ಬೃಹತ್ ಮರಗಳ, ವನ್ಯಪ್ರಾಣಿಗಳೂ ಹೆಚ್ಚಿನ ಸಂಖ್ಯೆಯಲ್ಲಿವೆ; ಅಧಿಕ ಪ್ರಮಾಣದಲ್ಲಿ ಹಾನಿ ಸಂಭವಿಸಬಹುದು ಎಂಬ ಆತಂಕದಲ್ಲಿ ಅಧಿಕಾರಿಗಳು
100 ಮೀಟರ್ ದೂರದಲ್ಲಿದ್ದವರಿಗೂ ತಟ್ಟಿದ ಬೆಂಕಿಯ ಕಾವು; . ವನ್ಯಜೀವಿಗಳ ಜೀವ ಹಾನಿ ಬಗ್ಗೆ ಇನ್ನೂ ಮಾಹಿತಿ ಲಭ್ಯವಿಲ್ಲ
ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿರುವ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ವಯಂ ಸೇವಕರು ಸೇರಿದಂತೆ 500ಕ್ಕೂ ಹೆಚ್ಚು ಮಂದಿ
ಗೋಪಾಲಸ್ವಾಮಿ ವಲಯದ ಮಗುವಿನಳ್ಳಿ ಗುಡ್ಡದಲ್ಲಿ ಸಣ್ಣ ಪ್ರಮಾಣದಲ್ಲಿದ್ದ ಬೆಂಕಿಯನ್ನು ಆರಿಸಲು ಅವಕಾಶ ಇತ್ತಾದರೂ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ- ಸ್ಥಳೀಯರ ಆರೋಪ
ಹಿಮವದ್ ಗೋಪಾಲಸ್ವಾಮಿ ದೇವಾಲಯದ ಹಿಂಭಾಗದ ವನಸಿರಿಯೂ ಬೆಂಕಿಗೆ ಆಹುತಿ
ಊಟಿ-ಮೈಸೂರು ರಸ್ತೆ ಸಂಚಾರ ಅಸ್ತವ್ಯಸ್ತ: ಹೆಚ್ಚಿದ ಸಂಚಾರ ದಟ್ಟಣೆ