- ಎಂಟು ಸಾವಿರ ಎಕರೆಗೂ ಹೆಚ್ಚು ಅರಣ್ಯವನ್ನು ಆಪೋಶನ ತೆಗೆದುಕೊಂಡಿರುವ ಕಾಳ್ಗಿಚ್ಚು ನೆರೆಯ ತಮಿಳುನಾಡಿನ ಗಡಿಯನ್ನೂ ದಾಟಿದೆ.
- ಅರಣ್ಯ ಇಲಾಖೆಯ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದು ಇದಕ್ಕಾಗಿ ಹೆಲಿಕಾಪ್ಟರ್ ಬಳಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
- ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು, ರಾಮನಗರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸ್ಳಳಕ್ಕೆ ತೆರಳಲು ಮುಖ್ಯಮಂತ್ರಿ ಆದೇಶ.
- ಏರ್ ಫೋರ್ಸ್ ಅಧಿಕಾರಿಗಳ ಜತೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಮಾಲೋಚನೆ ನಡೆಸಿದ್ದು ಬೆಂಕಿ ಆರಿಸುವ ಕೆಲಸಕ್ಕೆ ವಾಯುಪಡೆಯ ಸಹಾಯವನ್ನು ಕೋರಿದ್ದಾರೆ. ವಾಯುಪಡೆಯು ಕಾಳ್ಗಿಚ್ಚು ಹಬ್ಬಿತ್ತಿರುವ ಪ್ರದೇಶದಲ್ಲಿ ಇಂದು ವೈಮಾನಿಕ ಸಮೀಕ್ಷೆ ನಡೆಸಿದೆ.
- ಎಚ್.ಡಿ ಕೋಟೆಯ ನುಗು ಜಲಾಶಯದಿಂದ ನೀರನ್ನು ಬಳಸಿ ಬೆಂಕಿ ನಂದಿಸುವ ಯತ್ನವನ್ನು ನಡೆಸಲಾಗುತ್ತಿದೆ.
ಹೆಚ್ಚುತ್ತಿರುವ ಬೆಂಕಿ- ವಾಯುಪಡೆ ಸಹಾಯ ಹಸ್ತ

Post navigation
Posted in: