• “ನಾನು ನಿಮಗೆ ಭರವಸೆ ನೀಡುತ್ತೇನೆ ದೇಶ ಸುರಕ್ಷಿತರ ಕೈಯಲ್ಲಿದೆ’’ ದೇಶದ ಜನತೆಗೆ ವಿಶ್ವಾಸ ನೀಡಿದ ಪ್ರಧಾನಿ ನರೇಂದ್ರ ಮೋದಿ
• ಪಾಕ್ ಗಡಿಯ ಮೇಲೆ ಭಾರತ ದಾಳಿ ನಡೆಸಿದೆ ಎಂದು ವಿದೇಶಾಂಗ ಕಾರ್ಯದರ್ಶಿಗಳು ಖಚಿತ ಪಡಿಸಿದ ಬೆನ್ನಲ್ಲೇ ರಾಜಸ್ತಾನದಲ್ಲಿನ ರ್ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ
• ಈ ಮಣ್ಣಿಗೆ ನನ್ನನ್ನು ಅರ್ಪಿಸಿಕೊಳ್ಳುತ್ತೇನೆ ಹೊರತು ಈ ದೇಶದ ಅಂತ್ಯಕ್ಕೆ ಅವಕಾಶ ಕೊಡುವುದಿಲ್ಲ. ಭಾರತದ ತಲೆ ಬಾಗಿಸಲು ಬಿಡುವುದಿಲ್ಲ. ಇದು ನಮ್ಮ ತಾಯ್ನಾಡಿಗೆ ನಾನು ಕೊಡುತ್ತಿರುವ ಭಾಷೆ- ಪ್ರಧಾನಿ ನರೇಂದ್ರ ಮೋದಿ
• ನಮ್ಮ ಭಾರತೀಯ ವಾಯುಪಡೆ ಹಾಗೂ ದಾಳಿ ನಡೆಸಿದ ಇಡೀ ತಂಡಕ್ಕೆ ನಿಮ್ಮ ಪ್ರಧಾನ ಸೇವಕ ತಲೆ ಬಾಗಿ ವಂದಿಸುತ್ತಾನೆ ಎಂದು ಕಾವ್ಯಾತ್ಮಕವಾಗಿ ಅಭಿನಂದಿಸಿದ ಪ್ರಧಾನಿ ಮೋದಿ
• ರಾಜಸ್ತಾನ ಹಾಗೂ ಚುರು ಪ್ರದೇಶದ ಒಬ್ಬ ರೈತನ ಖಾತೆಗೂ ಹಣ ವರ್ಗಾವಣೆ ಆಗದಿರುವುದು ವಿಷಾದನೀಯ-ಪ್ರಧಾನಿ ಮೋದಿ
• ರೈತರ ಖಾತೆಗಳಿಗೆ ಹಣ ವರ್ಗಾವಣೆ ಆಗದಿರುವುದಕ್ಕೆ ರಾಜ್ಯ ಸರ್ಕಾರ ರೈತರ ಪಟ್ಟಿಯನ್ನು ನೀಡದಿರುವುದೇ ಕಾರಣ. ಅಲ್ಲದೇ ಕೇಂದ್ರ ಸರ್ಕಾರಕ್ಕೂ ಸಹಕಾರ ನೀಡುತ್ತಿಲ್ಲ- ಪ್ರಧಾನಿ ಮೋದಿ
• ಮುಂದಿನ 10 ವರ್ಷಗಳಲ್ಲಿ ಪ್ರತಿ ರೈತನ ಖಾತೆಗೆ 7.5 ಲಕ್ಷ ರೂಪಾಯಿ ಹಣ ವರ್ಗಾವಣೆಯಾಗುತ್ತದೆ. ಇದಕ್ಕಾಗಿ ರೈತರು ಏನನ್ನೂ ಮಾಡಬೇಕಿಲ್ಲ. ನೇರವಾಗಿ ರೈತರ ಖಾತೆಗೆ ಹಣ ವರ್ಗವಾಣೆ ಆಗಿರುವ ಬಗ್ಗೆ ಮೊಬೈಲ್ ಸಂದೇಶ ಬರುತ್ತದೆ- ಪ್ರಧಾನಿ ಮೋದಿ
• ನಮ್ಮ ಸರ್ಕಾರ ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿದೆ. ಕೇಂದ್ರ ಸರ್ಕಾರ ರಾಜ್ಯದ ರೈತರಿಗೆ ನೀಡುವ ಬೆಂಬಲಕ್ಕೆ ರಾಜ್ಯ ಸರ್ಕಾರ ಅಡ್ಡಿಪಡಿಸಬಾರದು
• ಭಾರತಕ್ಕೆ ಸಮರ್ಥ ಸರ್ಕಾರ ಬೇಕಿದೆ. ನನಗೆ ನಂಬಿಕೆ ಇದೆ ಬಾರಿ ನೀವು ನಮಗೆ ನೀಡುವ ಮತ ನಮಗೆ ಇನ್ನಷ್ಟು ಶಕ್ತಿ ತುಂಬಲಿದೆ ಜತೆಗೆ ಭಾರತವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತೇವೆ- ಪ್ರಧಾನಿ ಮೋದಿ
ಮುಂದಿನ 10 ವರ್ಷಗಳಲ್ಲಿ ಪ್ರತಿ ರೈತನ ಖಾತೆಗೆ 7.5 ಲಕ್ಷ ರೂಪಾಯಿ ಹಣ ವರ್ಗಾವಣೆ-ಪ್ರಧಾನಿ ಮೋದಿ
