ಫೆಬ್ರವರಿ 14ರಂದು ಕಾಶ್ಮೀರದ ಪುಲ್ವಾಮದಲ್ಲಿ ನಡೆದಿದ್ದ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ ಇಂದು ಮುಂಜಾನೆ 30.30ರಿಂದ 3.50ರ ವೇಳೆಯಲ್ಲಿ ಬಾಂಬ್ ದಾಳಿ ನಡೆಸಿದೆ.
ಪಾಕಿಸ್ತಾನ ಗಡಿಯ ಬಾಲ್ ಕೋಟ್ , ಚಕೋತಿ ಮತ್ತು ಮುಜಾಫರ್ ಬಾದ್ ಪ್ರದೇಶಗಳಲ್ಲಿರುವ ಉಗ್ರರ ಶಿಬಿರಗಳನ್ನು ಗುರಿಪಡಿಸಿ ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ 200ರಿಂದ 300 ಉಗ್ರರು ಹತರಾಗಿದ್ದಾರೆಂದು ಹೇಳಲಾಗುತ್ತಿದೆ. ಈ ಸಂಖ್ಯೆ ಕುರಿತು ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.
ಸ್ವದೇಶಿ ನಿರ್ಮಿತ ಸುಖಾಯ್ ಸೇರಿದಂತೆ 12 ಮಿರಾಜ್ 2000 ಜೆಟ್ ಗಳ ಮೂಲಕ ಒಂದು ಸಾವಿರ ಕೆಜಿ ಬಾಂಬ್ ಬಳಸಿ ಉಗ್ರರ ಅಡಗುತಾಣಗಳ ಮೇಲೆ ದಾಳಿ ವಾಯುಪಡೆ ದಾಳಿ ನಡೆಸಲಾಗಿದೆ.
ಭಾರತದ ನಡೆಸಿದ ಈ ದಾಳಿಗೆ ಪಾಕಿಸ್ತಾನ ಸೇನೆಯು ವಿಫಲವಾಗಿದ್ದು, ಇದನ್ನು ಭಾರತೀಯ ವಾಯುಪಡೆಯ ಯಶಸ್ವಿ ಕಾರ್ಯಾಚರಣೆಯ ಎಂದು ಹೇಳಲಾಗುತ್ತಿದೆ. ದಾಳಿ ಬೆನ್ನಲ್ಲೇ ಹಿಂಡನ್ ಏರ್ ಬೇಸ್ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ.
ದೇಶದ ಬಹುತೇಕ ಗಣ್ಯರು, ರಾಜಕೀಯ ಮುಖಂಡರು ಪ್ರತೀಕಾರದ ದಾಳಿಯನ್ನು ಶ್ಕಾಘಿಸಿದ್ದಾರೆ.
ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಅರುಣ್ ಜೇಟ್ಲಿ ಸೇರಿದಂತೆ ಉನ್ನತ ಮಟ್ಟದ ತುರ್ತು ಭದ್ರತಾ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ನಂತರ ರಾಷ್ಟ್ರಪತಿ ಭವನಕ್ಕೆ ತೆರಳಿ ದಾಳಿಯ ಮಾಹಿತಿ ನೀಡಲಿದ್ದಾರೆ. ನಂತರ ಮುಂದಿನ ಜವಾಬ್ದಾರಿ ಹಾಗೂ ಮುಂದಿನ ಕಾರ್ಯತಂತ್ರದ ಬಗ್ಗೆಯೂ ಚರ್ಚಿಸಲಿದ್ದಾರೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಕಲೆ ನವದೆಹಲಿಯಲ್ಲಿ ಭಾರತ ಪಾಕ್ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿರುವ ಬಗ್ಗೆ ಖಚಿತ ಪಡಿಸಿದ್ದಾರೆ.
ದಾಳಿ ಬಗ್ಗೆ ಪ್ರತಿಕ್ರಿಯೆ
ರಾಹುಲ್ ಗಾಂಧಿ: ಐಎಎಫ್ ನ ಪೈಲಟ್ ಗಳಿಗೆ ವಂದನೆಗಳು
🇮🇳 I salute the pilots of the IAF. 🇮🇳
— Rahul Gandhi (@RahulGandhi) February 26, 2019
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್: ಪಾಕಿಸ್ತಾನದ ಉಗ್ರರ ಮೇಲೆ ದಾಳಿ ನಡೆಸಿ ನಮ್ಮ ದೇಶಕ್ಕೆ ಹೆಮ್ಮೆ ತಂದ ಕೆಚ್ಚೆದೆಯ ಭಾರತೀಯ ವಾಯುಪಡೆಯ ಪೈಲಟ್ ಅಭಿವಂದನೆಗಳು.
I salute the bravery of Indian Air Force pilots who have made us proud by striking terror targets in Pakistan
— Arvind Kejriwal (@ArvindKejriwal) February 26, 2019
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ: ಐಎಎಫ್ ಭಾರತದ ಅತ್ಯತ್ತಮ ದಾಳಿಕೋರರು. ಜೈ ಹಿಂದ್
IAF also means India's Amazing Fighters. Jai Hind
— Mamata Banerjee (@MamataOfficial) February 26, 2019
ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್: ಭಾರತೀಯ ವಾಯುಪಡೆ ಮತ್ತು ಎಲ್ಲಾ ಸಶಸ್ತ್ರ ಪಡೆಗೆ ವಂದನೆಗಳು ಹಾಗೂ ಅಭಿನಂದನೆಗಳು.
I salute the Indian Air Force and indeed all our Armed Forces. Congratulations @IAF_MCC
— Akhilesh Yadav (@yadavakhilesh) February 26, 2019
ಮಾಜಿ ಕೇಂದ್ರ ಸಚಿವ ಯಶ್ ವಂತ್ ಸಿನ್ಹಾ: ಪಾಕ್ ಗಡಿಯಲ್ಲಿ ಯಶಸ್ವೀ ಕಾರ್ಯಾಚರಣೆ ನಡೆಸಿದ ವಾಯುಪಡೆಯ ಯೋಧರಿಗೆ ಅಭಿನಂದನೆಗಳು
Congratulations to our brave air force for a brilliant operation across the LOC.
— Yashwant Sinha (@YashwantSinha) February 26, 2019