ಇಂದು ಬೆಳಗಿನ ಜಾವದಲ್ಲಿ ಭಾರತೀಯ ವಾಯುಡೆಯ ಮಿರಾಜ್ ಯುದ್ಧ ವಿಮಾನಗಳು ಪಾಕಿಸ್ತಾನ- ಭಾರತ ಗಡಿರೇಖೆಯನ್ನು ದಾಟಿ ಬಾಲಕೋಟ್ ಎಂಬಲ್ಲಿ ಬಾಂಬ್ ಗಳನ್ನು ಸಿಡಿಸಿ ಸುರಕ್ಷಿತವಾಗಿ ಮರಳಿವೆ.
ಫೆಬ್ರವರಿ 14 ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕಿಸ್ತಾನ ಬೆಂಬಲಿತ ಜೈಶ್ ಎ ಮೊಹಮದ್ ಸಿಆರ್ ಪಿಎಫ್ ನ 42 ಯೋಧರನ್ನು ಬಾಂಬ್ ದಾಳಿಯಲ್ಲಿ ಹತ್ಯೆಗೈದ ನಂತರದಲ್ಲಿ ಭಾರತದ ಸೈನ್ಯದ ಮೇಲೆ ತೀವ್ರ ಒತ್ತಡ ಉಂಟಾಗಿತ್ತು. ಪಾಕಿಸ್ತಾನದ ಕೃತ್ಯಕ್ಕೆ ಪ್ರತೀಕಾರ ಕೈಗೊಳ್ಳಬೇಕೆಂಬ ಕೂಗು ಎಲ್ಲೆಡೆಯಿಂದ ಕೇಳಿಬಂದಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಈ ವಿಷಯದಲ್ಲಿ ಸೇನೆಗೆ ನಿರ್ಧಾರ ಕೈಗೊಳ್ಳಲು ಮುಕ್ತ ಸ್ವಾತಂತ್ರ್ಯ ನೀಡಿದ್ದರು.
ಇದರಂತೆ ನೆನ್ನೆ ಸಂಜೆಯಿಂದಲೇ ತಯಾರಿ ಮಾಡಿಕೊಂಡಿದ್ದ ಭಾರತೀಯ ವಾಯುಪಡೆ ಮುಂಜಾನೆ 3.30 ರ ಸಮಯದಲ್ಲಿ 10 ಮಿರಾಜ್ ಯುದ್ಧವಿಮಾನಗಳನ್ನು ಕಳಿಸಿತ್ತು.
ಈ ದಾಳಿಯ ಹಿನ್ನೆಲೆಯಲ್ಲಿ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳನ್ನು ನೋಡೋಣ.
ಈ ದಾಳಿಯ ಕುರಿತು ಭಾರತದ ಸೈನ್ಯದ ವಕ್ತಾರರು ಯಾವುದೇ ಹೇಳಿಕೆ ನೀಡುವ ಮೊದಲು ಪಾಕಿಸ್ತಾನದ ಸೇನಾ ವಕ್ತಾರ ಆಸಿಫ್ ಗಫೂರ್ ಟ್ವೀಟ್ ಮಾಡಿ, ‘ಭಾರತದ ವಾಯುಪಡೆಯ ವಿಮಾನಗಳು ಮುಜಾಫರ್ ಬಾದ್ ಕಡೆಯಿಂದ ಪಾಕಿಸ್ತಾನದ ಗಡಿಯೊಳಗೆ ಪ್ರವೇಶಿಸಿ ತರಾತುರಿಯಲ್ಲಿ ಬಾಂಬಿಂಗ್ ನಡೆಸಿ ಹೋಗಿವೆ’ ಎಂದಿದ್ದಾರೆ.
ಸರ್ಕಾರದಿಂದ ಈ ಪ್ರತಿದಾಳಿಯ ಕುರಿತಾಗಿ ಮೊದಲ ಹೇಳಿಕೆ ಬಂದಿರುವುದು ಕೇಂದ್ರ ಕೃಷಿ ಖಾತೆಯ ರಾಜ್ಯ ಮಂತ್ರಿ ಗಜೇಂದ್ರ ಸಿಂಗ್ ಶೇಖಾವತ್ ತಮ್ಮ ಟ್ವೀಟ್ ನಲ್ಲಿ ವಾಯುಪಡೆಯ ಪ್ರತಿದಾಳಿಯನ್ನು ದೃಢಪಡಿಸಿದ್ದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ತೇಜಸ್ವಿ ಯಾದವ್, ಮಮತಾ ಬ್ಯಾನರ್ಜಿ, ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ರಾಜ್ಯ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮೊದಲಾದವರೆಲ್ಲರೂ ಟ್ವೀಟ್ ಮಾಡಿ, ಈ ಪ್ರತಿದಾಳಿ ನಡೆಸಿದ ಭಾರತೀಯ ವಾಯುಪಡೆಯ ಪೈಲಟ್ ಗಳಿಗೆ ತಮ್ಮ ಅಭಿನಂದನೆ ತಿಳಿಸಿ ಶ್ಲಾಘಿಸಿದ್ದಾರೆ.
I salute the bravery of Indian Air Force pilots who have made us proud by striking terror targets in Pakistan
— Arvind Kejriwal (@ArvindKejriwal) February 26, 2019
We salute bravery of our pilots and Air Force. We are blessed and proud of our forces. Jai Hind
— Tejashwi Yadav (@yadavtejashwi) February 26, 2019
IAF also means India's Amazing Fighters. Jai Hind
— Mamata Banerjee (@MamataOfficial) February 26, 2019
ಬಿಜೆಪಿ ಮುಖಂಡ ಸುಬ್ರಹ್ಮಣಿಯನ್ ಸ್ವಾಮಿ ತಮ್ಮ ಟ್ವೀಟ್ ನಲ್ಲಿ, “ನಾವು ತಾತ್ಕಾಲಿಕವಾಗಿ POK ಎಂದು ಕರೆಯುವ ನಮ್ಮದೇ ಭೂಭಾಗದ ಮೇಲೆ ಬಾಂಬಿಂಗ್ ನಡೆಸಿದ್ದೇವೆ. ಹೀಗಾಗಿ ಯಾವುದೇ ಅಂತರರಾಷ್ಟ್ರೀಯ ಗಡಿ ನಿಯಮದ ಉಲ್ಲಂಘನೆಯಾಗಿಲ್ಲ. ಆದರೆ ಇದು ಆತ್ಮರಕ್ಷಣೆಯ ಉದ್ದೇಶ ಹೊಂದಿದೆ” ಎಂದು ಹೇಳಿದ್ದಾರೆ.
We are bombing our own territory temporarily called PoK. So no international law broken but it is in self defence
— Subramanian Swamy (@Swamy39) February 26, 2019
My Salute to the Indian Airforce.
Jai Jawan.. Jai Hind..#IndiaStrikesBack #IndianAirForce— H D Kumaraswamy (@hd_kumaraswamy) February 26, 2019
My salute to #indianairforce for carrying out #Surgicalstrike2 on terror camps. A big lesson for Pakistan about how to handle terror groups in their own backyard.
— Siddaramaiah (@siddaramaiah) February 26, 2019
ಭಾರತೀಯ ವಾಯುಪಡೆ ಗಡಿ ನಿಯಂತ್ರಣ ರೇಖೆಯನ್ನೂ ದಾಟಿ ಪಾಕಿಸ್ತಾನದ ಭೂಪ್ರದೇಶದಲ್ಲಿ ದಾಳಿ ನಡೆಸಿರುವುದು ಬಹುತೇಕ ಖಚಿತವಾಗಿದೆ.
ಇನ್ನು ವಾಯುಪಡೆ ನಡೆಸಿರುವ ದಾಳಿಯಲ್ಲಿ ಪಾಕಿಸ್ತಾನಕ್ಕೆ ಆಗಿರವ ಹಾನಿಯ ಪ್ರಮಾಣ ಎಷ್ಟು ಎಂಬುದರ ಬಗ್ಗೆ ಸೇನಾ ಮೂಲಗಳಿಂದ ಯಾವುದೇ ಮಾಹಿತಿ ಇದುವರೆಗೂ ದೊರೆತಿಲ್ಲ. ಜೈಷ್ – ಎ- ಮೊಹಮ್ಮದ್ ಉಗ್ರರ ನೆಲೆಗಳು ಪಾಕಿಸ್ತಾನದ ಒಳಭಾಗದಲ್ಲಿದ್ದು ಗಡಿಭಾಗದಲ್ಲಿ ಇರುವ ನೆಲೆಗಳು ಬಹುತೇಕ ನಿರ್ಜನವಾಗಿವೆ ಎಂದೇ ಹೇಳಲಾಗುತ್ತಿದೆ. ಪುಲ್ವಾಮಾ ದಾಳಿಗೂ ಮೊದಲು ಗಡಿಯ ಬಳಿ ಇದ್ದ ಬಹುತೇಕ ಉಗ್ರರು ಭಾರತದ ಪ್ರತೀಕಾರದ ಸಾಧ್ಯತೆಯ ಹಿನ್ನೆಲೆಯಲ್ಲಿ ಪಾಕಿಸ್ತಾನದ ಒಳಭಾಗಕ್ಕೆ ಸರಿದಿರುವ ಸಾಧ್ಯತೆ ಹೆಚ್ಚಾಗಿದೆ.
ಇಂದು ನಡೆದ ವಾಯುಪಡೆ ದಾಳಿಯಲ್ಲಿ 200-300 ಉಗ್ರರು ಸತ್ತಿದ್ದಾರೆ ಎಂದು ಮಾಧ್ಯಮಗಳು ಹೇಳುವಂತೆ ಯಾವುದೇ ಹೇಳಿಕೆ ಇನ್ನಷ್ಟೇ ಭಾರತೀಯ ಸೇನಾ ಮೂಲಗಳಿಂದ ಬರಬೇಕಿದೆ.
ಈ ಕುರಿತು ಪಾಕಿಸ್ತಾನ ಪ್ರತಿಕ್ರಿಯಿಸಿದ್ದು ಯಾವುದೇ ನಷ್ಟವನ್ನು ಅಲ್ಲಗಳೆದಿದೆ. ಪಾಕಿಸ್ತಾನವು ಈ ಹಿಂದೆ ಭಾರತ ಸೇನೆ ನಡೆಸಿದ್ದ ನಿರ್ದಿಷ್ಟ ದಾಳಿಯ ಸಂದರ್ಭದಲ್ಲಿ ಸಹ ಯಾವುದೇ ನಷ್ಟ ಆಗಿಲ್ಲ ಎಂದೇ ಆರಂಭದಲ್ಲಿ ಹೇಳಿತ್ತು.
ಪಾಕಿಸ್ತಾನದ ಸೇನಾ ವಕ್ತಾರ ಆಸಿಫ್ ಗಫೂರ್, ‘ಭಾರತದ ಯುದ್ಧ ವಿಮಾನಗಳು ತಮ್ಮ ಗುರಿಯನ್ನು ತಲುಪುವುದರೊಳಗೇ ಬಾಂಬ್ ಬೀಳಿಸಿ ಗಡಿಬಿಡಿಯಲ್ಲಿ ಹಿಂತಿರುಗಿವೆ. ಯಾವುದೇ ಪ್ರಾಣಹಾನಿ ನಡೆದಿಲ್ಲ. ಯಾವುದೇ ಕಟ್ಟಡಕ್ಕೆ ಹಾನಿಯಾಗಿಲ್ಲ’ ಎಂದು ಟ್ವೀಟ್ ಮಾಡಿದ್ದಾರೆ. ಈ ಹೇಳಿಕೆಯೊಂದಿಗೆ ಕೆಲವು ಫೋಟೋಗಳನ್ನೂ ಇವರು ಹಾಕಿದ್ದಾರೆ.
ದಾಳಿ ನಡೆದಿರುವ ಬಾಲಾಕೋಟ್ ನ ಪೊಲೀಸ್ ಅಧಿಕಾರಿಗಳೂ ಇದೇ ರೀತಿಯ ಪ್ರತಿಕ್ರಿಯೆ ನೀಡಿದ್ದು ಮಿರಾಜ್ ಯುದ್ಧ ವಿಮಾನಗಳು ಹಾಕಿರುವ ಬಾಂಬ್ ಗಳು ಕಾಡಿನಲ್ಲಿ ಬಿದ್ದಿವೆ ಎಂದಿದ್ದಾರೆ.
ಇದು ಪಾಕಿಸ್ತಾನವು ತನ್ನ ಸೇನಾ ವೈಫಲ್ಯವನ್ನು ಮರೆಮಾಚಲು ನೀಡುತ್ತಿರುವರ ಹೇಳಿಕೆಯೂ ಆಗಿರಬಹುದು. ಆದರೆ ಯಾವುದೇ ಹಾನಿಯ ಕುರಿತು ಸೂಕ್ತ ಆಧಾರಗಳು ದೊರೆಯುವವರೆಗೂ ಈ ಬಗ್ಗೆ ಏನೂ ಹೇಳಲಾಗದು. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಬೆಳಿಗ್ಗೆ 11.30 ರ ಹೊತ್ತಿಗೆ ಸುದ್ದಿಗೋಷ್ಠಿ ನಡೆಸಿ, ನೂರಾರು ಉಗ್ರರನ್ನು ಈ ದಾಳಿಯಲ್ಲಿ ಕೊಲ್ಲಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಭಾರತವು ಇಂದು ನಡೆಸಿರುವ ದಾಳಿಯು ಯಾವುದೇ ರೀತಿಯಲ್ಲಿ ಸೇನೆಯು ಯುದ್ಧ ನಡೆಸುವ ಉದ್ದೇಶದಿಂದ ನಡೆಸಿರುವ ಸೇನಾ ದಾಳಿಯಲ್ಲ. ಆದರೆ ಇದು ಭಯೋತ್ಪಾದನಾ ವಿರೋಧಿ ಪ್ರತಿದಾಳಿ ಎಂದು ಹೇಳಲಾಗಿದ್ದು, ಭಾರತದ ಹಿತಾಸಕ್ತಿಯಿಂದ ಇಂತಹ ಪ್ರತಿದಾಳಿ ನಡೆಸುವ ಹಕ್ಕನ್ನು ಭಾರತ ಸೈನ್ಯ ಹೊಂದಿದೆ ಎಂದು ಸೇನಾ ತಜ್ಞರ ಅಭಿಪ್ರಾಯವಾಗಿದೆ.
ಈ ಪ್ರತಿ ದಾಳಿ ಹಿನ್ನೆಲೆಯಲ್ಲಿ ಕರ್ನಾಟಕದ ಬಿಜೆಪಿ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದರಾದ ಶೋಭಾ ಕರಂದ್ಲಾಜೆ, ಬಿಜೆಪಿ ಶಾಸಕ ಸಿ. ಟಿ ರವಿ ಮುಂತಾದವರು ಟ್ವೀಟ್ ಮಾಡಿದ್ದಾರೆ.
It’s a day to salute our braves. India has struck the biggest Jaish-e-Muhammad terrorist camp in Balakote. This is #NewIndia, How's the Josh ?
— B.S. Yeddyurappa (@BSYBJP) February 26, 2019
IAF intruded Muzafarabad sector and released payload near Balakot, which is way beyond LoC.
Interesting to know #Balakot has a #JeM training base
Now, How's the Josh??#Surgicalstrike2 pic.twitter.com/yH39kiZ3IJ
— Shobha Karandlaje (@ShobhaBJP) February 26, 2019
Thanks to "56" Kaamdhar", Deepavali has come very early deep inside Pakistan.
Fireworks across the Border but Celebrations in India ! ! ! Jai Hind 🇮🇳
How's The Josh @RahulGandhi? https://t.co/aSrbZtnhMK
— C T Ravi 🇮🇳 (@CTRavi_BJP) February 26, 2019
ಪ್ರಖ್ಯಾತ ನಟ ಮತ್ತು ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಪ್ರಕಾಶ್ ರಾಜ್ ಸಹ ವಾಯುಪಡೆಯ ಯೋಧರನ್ನು ಶ್ಳಾಘಿಸಿ ಟ್ವೀಟ್ ಮಾಡಿದ್ದಾರೆ.
Salute to our armed forces … we as a NATION have zero tolerance to terrorism.. JAI HIND pic.twitter.com/VbKmglQ6ZV
— Prakash Raj (@prakashraaj) February 26, 2019