ಕಳೆದ ಫೆಬ್ರವರಿ 14ರಂದು ಕಾಶ್ಮೀರದಲ್ಲಿ ಉಗ್ರರು ದಾಳಿ ನಡೆಸಿ 42 ಸಿ ಆರ್ ಪಿ ಎಫ್ ಯೋಧರನ್ನು ಕೊಂದ ಹಿನ್ನೆಲೆಯಲ್ಲಿಯೇ ಈ ಉಗ್ರರಿಗೆ ಪಾಕಿಸ್ತಾನ ಹಿಂದಿನಿಂದ ಬೆಂಬಲ ನೀಡುತ್ತಿರುವ ಬಗ್ಗೆ ಭಾರತ ಮತ್ತು ಪ್ರಪಂಚದೆಲ್ಲೆಡೆ ಆಕ್ರೋಶ ವ್ಯಕ್ತವಾಯಿತು. ಇದಾದ ನಂತರದಲ್ಲಿ ಫೆಬ್ರವರಿ 26ರಂದು ಭಾರತೀಯ ವಾಯುಪಡೆ ಪಾಕಿಸ್ತಾನ ಗಡಿಯ ಒಳಗಿರುವ ಬಾಲಕೋಟ್ ನಲ್ಲಿ ಬಾಂಬ್ ದಾಳಿ ನಡೆಸಿತು. ಇದರಲ್ಲಿ ಎಷ್ಟು ಮಂದಿ ಉಗ್ರರು ಖಚಿತವಾಗಿ ಸತ್ತಿದ್ದಾರೆ ಎಂಬ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ. ಆದರೆ ನೂರಾರು ಉಗ್ರರು ಸತ್ತಿರಬಹುದು ಎಂದು ನಂಬಲಾಗಿದೆ.
ಇದರ ಬೆನ್ನಲ್ಲೇ ಫೆ 27ರ ಮುಂಜಾನೆ ಪಾಕಿಸ್ತಾನ ಮತ್ತು ಭಾರತದ ವಾಯುಪಡೆದ ಯುದ್ಧವಿಮಾನಗಳು ಗಡಿಯಲ್ಲಿ ಹಾರಾಟ ನಡೆಸಿ ತೀವ್ರ ಉದ್ವಿಗ್ನ ಸ್ಥಿತಿ ಏರ್ಪಟ್ಟಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ಪರಸ್ಪರರ ಯುದ್ಧವಿಮಾನಗಳನ್ನು ಹೊಡೆದುರುಳಿರುವುದಾಗಿ ಹೇಳಿಕೆ ನೀಡಿವೆ. ಪಾಕಿಸ್ತಾನ ತನ್ನ ಯುದ್ಧ ವಿಮಾನ ನಷ್ಟವಾಗಿರುವುದರ ಬಗ್ಗೆ ಒಪ್ಪಿಕೊಂಡಿಲ್ಲ. ಭಾರತ ಸರ್ಕಾರದ ವಿದೇಶಾಂಗ ವಕ್ತಾರ ರವೀಶ್ ಕುಮಾರ್ ಅವರು ಭಾರತೀಯ ವಾಯುಪಡೆದ ಒಂದು ಮಿಗ್-21 ವಿಮಾನ ನಷ್ಟವಾಗಿದೆ ಹಾಗೂ ನಮ್ಮ ಒಬ್ಬ ಪೈಲಟ್ ನಾಪತ್ತೆಯಾಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ನಡುವೆ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಮಾಧ್ಯಮಗಳ ಮೂಲಕ ಸುದೀರ್ಘ ಹೇಳಿಕೆಯನ್ನು ನೀಡಿದ್ದಾರೆ. ಈ ಹೇಳಿಕೆ ಪುಲ್ವಾಮಾ ಹಿನ್ನೆಲೆಯಲ್ಲಿ ನಡೆದಿರುವ ಘಟನೆಗಳ ಕುರಿತು ಪಾಕಿಸ್ತಾನದ ಸರ್ಕಾರದ ಅಧಿಕೃತ ನಿಲುವನ್ನು ಬಿಂಬಿಸುತ್ತದೆ.
ಇಮ್ರಾನ್ ಖಾನ್ ಹೇಳಿರುವ ಅಂಶಗಳು
-
ಪಾಕಿಸ್ತಾನವು ದಾಳಿ ನಡೆಸಿ, ಭಾರತದ 40 ಸಿಪಿಆರ್ ಎಫ್ ಯೋಧರನ್ನು ಕೊಂದಿದೆ ಎಂದು ಆರೋಪಿಸಿರುವ ಪುಲ್ವಾಮದಲ್ಲಿ ಪುಲ್ವಾಮಾ ಘಟನೆ ಬಗ್ಗೆ ಯಾವುದೇ ರೀತಿಯ ತನಿಖೆ ನಡೆಸಲು ಪಾಕಿಸ್ತಾನವು ಸಿದ್ಧವಿದೆ ಎಂದು ಈಗಾಗಲೇ ಹೇಳಿದ್ದೇವೆ.
-
ಭಾರತದ 40 ಯೋಧರು ಮೃತಪಟ್ಟಿರುವ ಈ ಹೊತ್ತಿನಲ್ಲಿ ಭಾರತದ ಜನತೆಗೆ ಎಷ್ಟು ನೋವಾಗಿದೆ ಎಂಬ ಬಗ್ಗೆ ನನಗೆ ಅರಿವಿದೆ. ಯಾಕೆಂದರೆ ಕಳೆದ 10 ವರ್ಷದಲ್ಲಿ ನಮ್ಮ ದೇಶದ 70 ಸಾವಿರ ಜನರ ಸಾವು-ನೋವನ್ನು ಪಾಕಿಸ್ತಾನ ನೋಡಿದೆ. ಹಲವು ಆಸ್ಪತ್ರೆಗಳಿಗೆ ಭೇಟಿ ನೀಡಿದ್ದೇನೆ. ಕೈ, ಕಾಲು, ಕಣ್ಣುಗಳನ್ನು ಕಳೆದುಕೊಂಡವರ ನೋವು, ಅವರ ಕುಟುಂಬದ ಸ್ಥಿತಿಯ ಬಗ್ಗೆ ನನಗೆ ತಿಳಿದಿದೆ.
-
ಈ ಎಲ್ಲಾ ಕಾರಣಗಳಿಂದಲೇ ಪುಲ್ವಾಮ ದಾಳಿ ಬಗ್ಗೆ ಮುಕ್ತ ತನಿಖೆ ನಡೆಸಲು ಪಾಕಿಸ್ತಾನ ಅನುಮತಿ ನೀಡಿದೆ.
-
ಯಾಕೆ ಪಾಕಿಸ್ತಾನ ಇದಕ್ಕೆ ಅವಕಾಶ ಮಾಡಿಕೊಟ್ಟಿತು ಎಂದರೆ ಪ್ರಪಂಚದ ಎಲ್ಲೇ ದಾಳಿ ನಡೆದರೂ ನಮ್ಮ ಪಾಕಿಸ್ತಾನಿ ನೆಲವನ್ನು ಬಳಸಿಕೊಳ್ಳುವುದು ನಮ್ಮ ಹಿತವನ್ನು ಕಾಪಾಡುವುದಿಲ್ಲ. ಹೊರಗಿನ ಯಾರೂ ತಮ್ಮ ದಾಳಿಗಳಿಗೆ ಪಾಕಿಸ್ತಾನದ ನೆಲವನ್ನು ಬಳಸಿಕೊಳ್ಳಕೂಡದು. ಹೀಗಾಗಿ ನಮಗೆ ಈ ಬಗ್ಗೆ ಯಾವುದೇ ತಕಾರಾರಿಲ್ಲ.
-
ನಾವು ತನಿಖೆಗೆ ಸಿದ್ಧವಿದ್ದೇವೆ, ತನಿಖೆಗೆ ಸಹಕರಿಸುತ್ತೇವೆ ಎಂದು ಹೇಳಿದ್ದರೂ ಭಾರತ ಏಕೆ ದಾಳಿ ನಡೆಸುತ್ತಿದೆ?. ಭಾರತದ ಹೀಗೆ ದಾಳಿ ಮಾಡಿದರೆ ನಾವು ಮತ್ತೆ ದಾಳಿ ನಡೆಸಲು ಭಾರತವೇ ಒತ್ತಡ ಹೇರಿದಂತಾಗುತ್ತದೆ. ಏಕೆಂದರೆ ಯಾವುದೇ ಸಾವಭೌಮತ್ವ ದೇಶ ತನ್ನ ನೆರೆ ರಾಷ್ಟ್ರ ದಾಳಿ ನಡೆಸಲು ಪ್ರಚೋದಿಸುವುದಿಲ್ಲ.
-
ಭಾರತದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಇರುವ ಹಿನ್ನೆಲೆಯಲ್ಲಿ ಸರ್ಕಾರವೇ ಇಂತಹ ಕ್ರಮಕ್ಕೆ ದೇಶ ಮುಂದಾಗಿದೆ ಎಂಬುದು ನನ್ನ ಅನುಮಾನ.
-
ನಿನ್ನೆ ಬೆಳಗಿನ ದಾಳಿಯ ಬಗ್ಗೆ ಸೇನಾ ಮುಖ್ಯಸ್ಥರು ಹಾಗೂ ವಾಯುಪಡೆ ಮುಖ್ಯಸ್ಥರ ಜತೆ ಚರ್ಚೆ ನಡೆಸಿದ್ದೇನೆ. ಪಾಕಿಸ್ತಾನದಲ್ಲಿ ಯಾವ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ ಎಂದು ನಮಗಿನ್ನೂ ತಿಳಿದಿಲ್ಲ, ಆದ್ದರಿಂದ ನಾವು ತಕ್ಷಣದಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
-
ಭಾರತದ ದಾಳಿಯ ಪರಿಣಾಮವನ್ನು ಅವಲೋಕಿಸದೇ, ನಮ್ಮ ದೇಶದ ಯಾರೂ ಸಾಯದಿದ್ದಾಗಲೂ ನಾವು ಭಾರತದ ಮೇಲೆ ದಾಳಿ ನಡೆಸಿ ಅಲ್ಲಿನ ಜನರನ್ನು ಕೊಂದರೆ ಅದು ನಮ್ಮ ಬೇಜಾವಾಬ್ದಾರಿತನವಾಗುತ್ತದೆ.
-
ಭಾರತದ ನಡೆಸಿದ ದಾಳಿಯಲ್ಲಿ ಯಾರಿಗೂ ಹಾನಿಯಾಗಿಲ್ಲ, ಯಾವುದೇ ಪ್ರಾಣ ನಷ್ಟವಾಗಿಲ್ಲ ಎಂದು ಖಾತ್ರಿಯಾದ ಮೇಲೆ ನಾವೂ ಅಂತಹುದೇ ದಾಳಿ ನಡೆಸಲು ತೀರ್ಮಾನಿದ್ದೆವು.
-
ನಮ್ಮ ಉದ್ದೇಶ ಒಂದೇ, ಎರಡೂ ಕಡೆ ಯಾವುದೇ ಹಾನಿಯಾಗಬಾರದು, ಸಾವು ಸಂಭವಿಸಬಾರದು. ನಾವು ಭಾರತಕ್ಕೆ ಹೇಳಬೆಕೆಂದಿರುವುದು ಇಷ್ಟೇ, ನಮಗೂ ಸಾಮರ್ಥ್ಯವಿದೆ, ನೀವು ನಮ್ಮ ದೇಶಕ್ಕೆ ಬಂದರೆ, ನಾವೂ ನಿಮ್ಮ ದೇಶಕ್ಕೆ ಬಂದು ಕಾರ್ಯಾಚರಣೆ ನಡೆಸುತ್ತೇವೆ. ಇದೇ ನಮ್ಮ ಮುಖ್ಯ ಉದ್ದೇಶ.
-
ಪಾಕಿಸ್ತಾನ ಪ್ರತೀಕಾರದ ದಾಳಿಯ ವೇಳೆ ಭಾರತದ ಎರಡು ಮಿಗ್ ಜೆಟ್ಗ ಳು ಗಡಿ ನಿಯಂತ್ರಣ ರೇಖೆ ದಾಟಿತ್ತು, ಆದ್ದರಿಂದ ಅದನ್ನು ಹೊಡೆದುರುಳಿಸಿದ್ದೇವೆ, ಇಬ್ಬರು ಪೈಲಟ್ ಗಳು ಸದ್ಯ ನಮ್ಮ ವಶದಲ್ಲಿದ್ದಾರೆ. (ಈ ಹೇಳಿಕೆಯನ್ನು ನಂತರದಲ್ಲಿ ಪಾಕಿಸ್ತಾನದ ಸೇನಾ ವಕ್ತಾರರು ಹಿಂಪಡೆದು ತಮ್ಮ ಬಳಿ ಇರುವುದು ಒಬ್ಬರೇ ಪೈಲಟ್ ಎಂದು ಸ್ಪಷ್ಟನೆ ನೀಡಿದ್ದರು)
-
ನನ್ನದೊಂದೇ ಪ್ರಶ್ನೆ, ಇದು ಎಲ್ಲಿಯವರೆಗೆ ತಲುಪುತ್ತದೆ? ಇದು ಬಹಳ ಮುಖ್ಯ.
-
ವಿಶ್ವದಲ್ಲಿ ನಡೆದಿರುವ ಬಹುತೇಕ ಯುದ್ಧಗಳಲ್ಲಿ ಒಂದು ತಪ್ಪು ಗ್ರಹಿಕೆ, ತಪ್ಪಾದ ಲೆಕ್ಕಾಚಾರ ಇದ್ದೇ ಇದೆ. ಯುದ್ಧ ಆರಂಭ ಮಾಡಿದವರಿಗೆ ಇದು ಎಲ್ಲಿಗೆ ಕೊಂಡೊಯ್ಯುತ್ತದೆ ಕಲ್ಪನೆ ಇರುವುದಿಲ್ಲ.
-
ಭಾರತ ಪಾಕಿಸ್ತಾನ ಎರಡೂ ದೇಶಗಳ ಬಳಿ ಒಂದೇ ತೆರನಾದ ಯುದ್ಧ ಶಸ್ತ್ರಾಸ್ತ್ರಗಳಿವೆ. ಯುದ್ಧ ಆರಂಭವಾಗಿ ಪರಿಸ್ಥಿತಿ ಅದೇ ರೀತಿ ಮುಂದುವರೆದರೆ ಅದು ಆದರ ಪರಣಾಮದ ಬಗ್ಗೆ ಭಾರತ ಚಿಂತಿಸುವುದಿಲ್ಲವೇ? ಯಾರೇ ಒಮ್ಮೆ ಯುದ್ಧವನ್ನು ಆರಂಭಿಸಿದರೆ ನಂತರ ಅದು ನನ್ನ ಹಾಗೂ ನರೇಂದ್ರ ಮೋದಿ ಇಬ್ಬರ ಹತೋಟಿಯಲ್ಲಿಯೂ ಇರುವುದಿಲ್ಲ.
-
ಈ ಎಲ್ಲಾ ಕಾರಣಕ್ಕಾಗಿ ನಾನು ಮತ್ತೊಮ್ಮೆ ಮನವಿ ಮಾಡುತ್ತಿದ್ದೇನೆ, ಪುಲ್ವಾಮ ದಾಳಿಯಲ್ಲಿ ನಿಮಗೆ ನೋವಾಗಿದೆ ಎಂಬುದು ನನಗೆ ತಿಳಿದಿದೆ. ಎರಡೂ ದೇಶಗಳು ಕುಳಿತು ಚರ್ಚಿಸೋಣ, ಭಯೋತ್ಪಾದನೆ ಕುರಿತ ನಿಮ್ಮ ಯಾವುದೇ ಸಲಹೆಗೆ ನಾವು ಸಿದ್ಧ.
ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಇಷ್ಟು ವಿಷಯಗಳನ್ನು ಹೇಳುವ ಸಂದರ್ಭದಲ್ಲಿಯೇ ಪಾಕಿಸ್ತಾನದ ವಶದಲ್ಲಿರುವ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದ ವಶದಲ್ಲಿದ್ದಾರೆ. ಅಭಿನಂದನ್ ಅವರನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಭಾರತವು ಪಾಕಿಸ್ತಾನ ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ. ಈ ನಿಟ್ಟಿನಲ್ಲಿ ಮಾತುಕತೆಗಳೂ ನಡೆಯಬೇಕಿದೆ.
ತಕ್ಷಣದಲ್ಲಿ ಅಭಿನಂದನ್ ಅವರನ್ನು ಭಾರತಕ್ಕೆ ಕರೆತರುವ ನಿಟ್ಟಿನಲ್ಲಿ ಉಭಯ ದೇಶಗಳ ಪ್ರಧಾನಿಗಳು, ವಿದೇಶಾಂಗ ಮಂತ್ರಿಗಳು ಹಾಗೂ ಸೇನಾ ಮುಖ್ಯಸ್ಥರು ಮಾತುಕತೆ ನಡೆಸುವ ತುರ್ತಿದೆ.
TruthIndiaKannda
ಇದನ್ನೂ ಓದಿ..