ಅಧಿಕಾರಕ್ಕೆ ಬಂದರೆ ಎರಡಂಕಿ ಅಭಿವೃದ್ಧಿ ದಾಖಲಿಸುವ ಭರವಸೆ ನೀಡಿದ್ದ ನರೇಂದ್ರ ಮೋದಿ ಪ್ರಧಾನಿ ಆದ ನಂತರ ಮಾಡಿದ್ದೇ ಬೇರೆ. ಅಪ್ರಬುದ್ಧ ಆರ್ಥಿಕ ಯೋಜನೆಗಳನ್ನು ಜಾರಿಗೆ ತರುವ ಮೂಲಕ ದೇಶದ ಆರ್ಥಿಕ ಅಭಿವೃದ್ಧಿ ಕುಸಿತಕ್ಕೆ ಕಾರಣವಾಗಿದ್ದಲ್ಲದೇ ಸಾಲದ ಪ್ರಮಾಣ ತ್ವರಿತಗತಿಯಲ್ಲಿ ಏರಿಸಿದ್ದಾರೆ. ಹಿಂದಿನ ಎಲ್ಲಾ ಸರ್ಕಾರಗಳ ಸಾಲದ ಪ್ರಮಾಣಕ್ಕೆ ಹೋಲಿಸಿದರೆ ಮೋದಿ ಸರ್ಕಾರದ ಅವಧಿಯಲ್ಲಿ ಸರ್ಕಾರಿ ಸಾಲದ ಪ್ರಮಾಣ ತ್ವರಿತಗತಿಯಲ್ಲಿ ಜಿಗಿದಿದೆ. ನಾಲ್ಕುವರೆ ವರ್ಷದಲ್ಲಿ ರಾಷ್ಟ್ರದ ಸಾಲದ ಹೊರೆಯು ಶೇ.50ರಷ್ಟು ಹೆಚ್ಚಾಗಿದೆ. ಇದು ಪದೇ ಪದೇ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದ ನರೇಂದ್ರ ಮೋದಿ ಅವರ ಸರ್ಕಾರದ ಕೊಡುಗೆ.
ಸಾಲದ ಏರಿಕೆಗೆ ಪ್ರಮುಖ ಕಾರಣವಾಗಿರುವುದು ಸರ್ಕಾದ ವಿತ್ತೀಯ ಕೊರತೆಯನ್ನು ತುಂಬಿಕೊಳ್ಳಲು ದೊಡ್ಡ ಪ್ರಮಾಣದಲ್ಲಿ ಸಾಲ ಮಾಡಿರುವುದರಿಂದ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪ್ರತಿ ಬಾರಿ ಬಜೆಟ್ ನಲ್ಲಿ ಘೋಷಣೆ ಮಾಡಿದ ವಿತ್ತೀಯ ಕೊರತೆ ಮಿತಿಯನ್ನು ಕಾಯ್ದುಕೊಳ್ಳಲು ವಿಫಲವಾಗುತ್ತಿದೆ. ವಿತ್ತೀಯ ಕೊರತೆ ಮಿತಿ ಕಾಯ್ದುಕೊಳ್ಳುವಲ್ಲಿ ವಿಫಲವಾಗುವುದು ಆಯಾಸರ್ಕಾರದ ಹಣಕಾಸು ನಿರ್ವಹಣೆಯಲ್ಲಿ ಅಸಾಮರ್ಥ್ಯ ಮತ್ತು ಆರ್ಥಿಕ ಅಶಿಸ್ತಿನ ಪ್ರತಿಬಿಂಬವಾಗಿರುತ್ತದೆ. ಪ್ರಸಕ್ತ ವರ್ಷದ ವಿತ್ತೀಯ ಕೊರತೆ ಮಿತಿ ಜಿಡಿಪಿಯ ಶೇ.3.3 ರ ಮಿತಿಯನ್ನು ಕಾಯ್ದುಕೊಳ್ಳಲಾಗಿಲ್ಲ. ಇದನ್ನು ಶೇ.3.5ಕ್ಕೆ ಏರಿಸಲಾಗಿದೆ. ಏಪ್ರಿಲ್- ನವೆಂಬರ್ ಅವಧಿಯಲ್ಲೇ ವಿತ್ತೀಯ ಕೊರತೆ ಪ್ರಮಾಣವು ಶೇ.115ರಷ್ಟು ದಾಟಿ ಹೋಗಿತ್ತು. ಅಂದರೆ 2018-19ನೇ ವಿತ್ತೀಯ ವರ್ಷದಲ್ಲಿ 6.24 ಲಕ್ಷ ಕೋಟಿ ರುಪಾಯಿ ವಿತ್ತೀಯ ಕೊರತೆ ಗುರಿ ಹಾಕಿಕೊಂಡಿದ್ದ ಸರ್ಕಾರವು ನವೆಂಬರ್ ವೇಳೆಗೆ ತನ್ನ ಮಿತಿಯನ್ನು ದಾಟಿ 7.17ಲಕ್ಷ ಕೋಟಿ ರುಪಾಯಿ ವಿತ್ತೀಯ ಕೊರತೆ ಎದುರಿಸುತ್ತಿತ್ತು. ವಿತ್ತೀಯ ವರ್ಷದ ಕೊನೆಯ ವೇಳೆಗೆ ಈ ಪ್ರಮಾಣ 10 ಲಕ್ಷ ಕೋಟಿಗೆ ಏರಿದರೂ ಅಚ್ಚರಿ ಇಲ್ಲ.
ಮೋದಿ ಅಧಿಕಾರಕ್ಕೆ ಬಂದಾಗ ಅಂದರೆ 2014 ಜೂನ್ ತಿಂಗಳಲ್ಲಿ 54,90,763 ಕೋಟಿ ರುಪಾಯಿ ಸಾಲದ ಹೊರೆ ಸರ್ಕಾರದ ಮೇಲಿತ್ತು. 2018 ಸೆಪ್ಟೆಂಬರ್ ವೇಳೆಗೆ ಈ ಪ್ರಮಾಣವು 82,03,243 ಕೋಟಿ ರುಪಾಯಿಗಳಿಗೆ ಏರಿದೆ. ಆರ್ಥಿಕ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಸಾಲದ ಪ್ರಮಾಣವು ಈ ಅವಧಿಯಲ್ಲಿ ಶೇ.50ರಷ್ಟು ಏರಿದೆ. ಸಾರ್ವಜನಿಕ ಸಾಲವು ಶೇ.51.7ರಷ್ಟು ಜಿಗಿದಿದೆ. ಮೋದಿ ಅಧಿಕಾರಕ್ಕೆ ಬಂದಾಗ 48 ಲಕ್ಷ ಕೋಟಿ ರುಪಾಯಿಗಳಿದ್ದದ್ದು ಸೆಪ್ಟೆಂಬರ್ 2018ರ ವೇಳೆಗೆ 73 ಲಕ್ಷ ಕೋಟಿಗೆ ಏರಿದೆ. ಈ ಪೈಕಿ ಆಂತರಿಕ ಸಾಲದ ಪ್ರಮಾಣವು 68 ಲಕ್ಷ ಕೋಟಿ ರುಪಾಯಿಗಳಿಷ್ಟಿದ್ದು ಇದು ಶೇ.54ರಷ್ಟು ಜಿಗಿದಿದೆ.
ಒಟ್ಟು ಸಾಲದ ಪೈಕಿ ಮಾರುಕಟ್ಟೆಯಿಂದ ಎತ್ತಿದ ಸಾಲದ ಮೊತ್ತವು 52 ಲಕ್ಷ ಕೋಟಿ ರುಪಾಯಿಯಷ್ಟಿದ್ದು ಶೇ.47.5ರಷ್ಟು ಏರಿದೆ. 2014ರಲ್ಲಿ ಶೂನ್ಯವಾಗಿದ್ದ ಗೋಲ್ಡ್ ಬಾಂಡ್ ಮೇಲಿನ ಸಾಲವು 9089 ಕೋಟಿಗೆ ಏರಿದೆ.
ಫೆಬ್ರವರಿ 18 ರಂದು ಬಿಡುಗಡೆ ಮಾಡಿರುವ ಸರ್ಕಾರಿ ಸಾಲದ ವಸ್ತುಸ್ಥಿತಿ ವರದಿಯಲ್ಲಿ ವಿಸ್ತೃತ ವಿವರ ನೀಡಲಾಗಿದೆ. ಆರ್ಥಿಕ ಇಲಾಖೆಯು 2010-11ರಿಂದ ಪ್ರತಿ ವರ್ಷವೂ ಸರ್ಕಾರಿ ಸಾಲದ ವಸ್ತುಸ್ಥಿತಿ ಕುರಿತಾದ ವಿಸ್ತೃತ ವರದಿ ಪ್ರಕಟಿಸುತ್ತಾ ಬಂದಿದೆ. ಒಟ್ಟಾರೆ ದೇಶದ ಸಾಲಬಾಧ್ಯತೆಯು ಮಧ್ಯಮಾವಧಿಯಲ್ಲಿ ಇಳಿಕೆಯ ಪಥದಲ್ಲಿದ್ದು, ಸರ್ಕಾರದ ಸಾಲ ಖಾತೆಯು ವಿತ್ತೀಯ ವಿವೇಕದ ವಿತಿಯೊಳಗೆ ಇದೆ ಎಂದು ವರದಿಯಲ್ಲಿ ತಿಳಿಸಿದೆ. ವಿತ್ತೀಯ ಕೊರತೆ ನಿಭಾಯಿಸುವ ಸಲುವಾಗಿ ಸರ್ಕಾರ ಮಾರುಕಟ್ಟೆ ಆಧಾರಿತ ಸಾಲವನ್ನು ಕಾಲಕಾಲಕ್ಕೆ ಎತ್ತುತ್ತಾ ಬಂದಿರುವುದರಿಂದ ಸಾಲದ ಪ್ರಮಾಣ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ
4 Comments
Fake news.
provide ‘real’then
This report Is100% wrong, can you quote some proof documents to the public
If you unable to produce proofs, you must be a Traiter A Congress/Pakistan agent
We write only based on credible sources..if u have facts otherwise, plz mail us..we will check and update… -TruthIndia