- ಸಭಾಧ್ಯಕ್ಷರಿಗೆ ರಾಜಿನಾಮೆ ಸಲ್ಲಿಸಿದ ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ
- ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಅಡ್ಡಗಲ್ ನಲ್ಲಿರುವ ರಮೇಶ್ ಕುಮಾರ್ ನಿವಾಸದಲ್ಲಿ ಭೇಟಿಯಾಗಿ ವೈಯಕ್ತಿಕವಾಗಿ ರಾಜಿನಾಮೆ ಸಲ್ಲಿಸಿದ ಉಮೇಶ್ ಜಾದವ್
- ಬೆಂಗೂರಿನ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ ಆರಂಭ
- ಲೋಕಸಭೆ ಚುನಾವಣೆ ಹಿನ್ನೆಲೆ ಮಹತ್ವ ಪಡೆದುಕೊಂಡ ಸಭೆ
- ಸಮನ್ವಯ ಸಮಿತಿ ಸಭೆ ಅಧ್ಯಕ್ಷ ಸಿದ್ಧರಾಮಯ್ಯ ನೇತೃತ್ವದಲ್ಲಿ ಸಭೆ
- ಉಮೇಶ್ ಜಾಧವ್ ರಾಜಿನಾಮೆ, ಮಂಡ್ಯದಿಂದ ಸುಮಲತಾ ಅಂಬರೀಶ್ ಸ್ಪರ್ಧೆ ಬಗ್ಗೆಯೂ ಸಭೆಯಲ್ಲಿ ಚರ್ಚೆ
- ಉಮೇಶ್ ಜಾಧವ್ ಅನರ್ಹತೆ ಬಗ್ಗೆ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದೇವೆ: ಈಶ್ವರ್ ಖಂಡ್ರೆ
- ಶಾಸಕ ಉಮೇಶ್ ಜಾಧವ್ ಸ್ವಾರ್ಥ ರಾಜಕಾರಣದಿಂದ ಪಕ್ಷವನ್ನು ಬಿಟ್ಟು, ಬಿಖರಿಯಾಗಿದ್ದಾರೆ- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪ
- ಉಮೇಶ್ ಅವರಿಗೆ ಕಾಂಗ್ರೆಸ್ ಉತ್ತಮ ನಿಗಮವನ್ನು ಕೊಟ್ಟು ಗೌರವಯುತವಾಗಿ ನೋಡಿಕೊಂಡಿದೆ, ಅವರಿಗೆ ಕಾಂಗ್ರೆಸ್ ಎಂದೂ ಅನ್ಯಾಯ ಮಾಡಿಲ್ಲ- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪ
- ಕಾಂಗ್ರೆಸ್ ನ ಸಿದ್ಧಾಂತಗಳಿಗೆ ಅನುಗುಣವಾಗಿದ್ದ ಉಮೇಶ್ ಅವರ ವಿರುದ್ಧವಾದ ಸಿದ್ಧಾಂತಗಳನ್ನು ಹೊಂದಿರುವ ಬಿಜೆಪಿಗೆ ಸೇರ್ಪಡೆಯಾಗಿರುವುದು ಅಚ್ಚರಿ ಮೂಡಿಸಿದೆ. ಬಿಜೆಪಿ ಉಮೇಶ್ ಅವರನ್ನು ಬಳಸಿಕೊಳ್ಳುತ್ತಿದೆ, ಜನತೆ ಅವರಿಗೆ ತಕ್ಕ ಪಾಠ ಕಲಿಸಬೇಕಿದೆ- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
- ಬೇರೆ ಯಾರೂ ಪಕ್ಷ ತ್ಯಜಿಸುವ ಬಗ್ಗೆ ಮಾಹಿತಿ ಇಲ್ಲ, ತಮ್ಮನ್ನು ತಾವು ಮಾರಿಕೊಳ್ಳುವವರು ಪಕ್ಷ ತ್ಯಜಿಸಬಹುದು- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪ
- ಇಂಥಹ ಶಾಸಕರು ನಮ್ಮಲ್ಲೇ ಇದ್ದ ಬೆನ್ನಿಗೆ ಚೂರಿ ಹಾಕುವುದಕ್ಕಿಂತ ಪಕ್ಷ ತ್ಯಜಿಸುವುದೇ ಒಳಿತು- ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್
More Articles
By the same author
Related Articles
From the same category