• ವೈಮಾನಿಕ ದಾಳಿ ನಂತರ ಸುದ್ದಿಗೋಷ್ಠಿ ನಡೆಸಿದ ವಾಯುಪಡೆ ಮುಖ್ಯಸ್ಥ ಬಿ ಎಸ್ ಧನೋವಾ
• ಭಾರತೀಯ ವಾಯು ಪಡೆ ಪಾಕಿಸ್ತಾನದ ಮೇಲೆ ನಡೆಸಿದ ದಾಳಿಯಲ್ಲಿ ಎಷ್ಟು ಉಗ್ರರು ಮೃತಪಟ್ಟಿದ್ದಾರೆ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ. ಕಾರಣ ಅಲ್ಲಿ ಎಷ್ಟು ಮಂದಿ ಇದ್ದರು ಎಂಬ ಬಗ್ಗೆ ನಮಗೂ ತಿಳಿದಿಲ್ಲ
• ದಾಳಿ ನಡೆಸಲು ಉದ್ದೇಶಿಸಿದ್ದ ಸ್ಥಳದಲ್ಲಿದ್ದ ಆರರಲ್ಲಿ ನಾಲ್ಕು ಕಟ್ಟಡಗಳು ದಾಳಿಯಿಂದಾಗಿ ನಾಶವಾಗಿದೆ. ವಾಯುಪಡೆಯ ಕರ್ತವ್ಯ ದಾಳಿ ನಡೆಸುವುದಷ್ಟೇ. ಮೃತರ ಸಂಖ್ಯೆಯನ್ನು ಎಣಿಸುವುಲ್ಲ
• ದಾಳಿಯಲ್ಲಿ ಮೃತಪಟ್ಟವರ ಬಗ್ಗೆ ನಾವು ತಿಳಿಸುವುದಿಲ್ಲ. ಅದನ್ನು ಸರ್ಕಾರವೇ ತಿಳಿಸಲಿದೆ
• ಪಾಕಿಸ್ತಾನ ವಿರುದ್ಧ ವೈಮಾನಿಕ ದಾಳಿ ಈಗಲೂ ಮುಂದುವರೆದಿದೆ
• ಅವಶ್ಯವಿದ್ದರೆ, ಸಂದರ್ಭ ಬಯಸಿದರೆ ಭಾರತ ಪಾಕಿಸ್ತಾನದ ವಿರುದ್ಧ ವೈಮಾನಿಕ ದಾಳಿ ನಡೆಸಲು ಸಿದ್ಧವಿದೆ. ಪಾಕಿಸ್ತಾನ ಮತ್ತೆ ಪ್ರತಿದಾಳಿ ನಡೆಸುವವರೆಗೂ ಭಾರತದ ಸುಮ್ಮನಿರುವುದಿಲ್ಲ
• ಭಾರತ ಅಥವಾ ಪಾಕಿಸ್ತಾನ ಯಾವ ದೇಶವೇ ಆದರೂ ಭಾರತದ ವಿರುದ್ಧ ಭಯೋತ್ಪಾದನಾ ಚಟುವಟಿಕೆ ನಡೆಸುವವರು ಬೆಲೆ ತೆರಬೇಕಾಗುತ್ತದೆ
• ಅಭಿನಂದನ್ ಮತ್ತೆ ದೈಹಿಕ ಸಧೃಢರಾದ ನಂತರ ಕರ್ತವ್ಯ ಆರಂಭಿಸಬಹುದು- ಬಿ ಎಸ್ ಧನೋವಾ ಸ್ಪಷ್ಟನೆ
• ಬಾಲ್ ಕೋಟ್ ನಲ್ಲಿ ನಾವು ಉದ್ದೇಶಿಸಿದ್ದ ಗುರಿಗೆ ದಾಳಿ ನಡೆಸಿ ಯಶಸ್ವಿಯಾಗಿದ್ದೇವೆ. ಭಯೋತ್ಪಾದನೆಯನ್ನು ಹತ್ತಿಕ್ಕಲು ಭಾರತ ಸದಾ ಸಿದ್ಧವಿದೆ
• ದಾಳಿಯಲ್ಲಿ ರಫೇಲ್ ಯುದ್ಧ ವಿಮಾನದ ಪಾತ್ರವನ್ನು ವಿವರಿಸಲು ಸಾಧ್ಯವಿಲ್ಲ
ಬ್ರೇಕಿಂಗ್ ಸುದ್ದಿ: ಪಾಕಿಸ್ತಾನದಲ್ಲಿ ನಡೆಸಿದ ದಾಳಿಯಲ್ಲಿ ಎಷ್ಟು ಉಗ್ರರು ಮೃತಪಟ್ಟಿದ್ದಾರೆಂಬ ಮಾಹಿತಿ ಇಲ್ಲ: ವಾಯುಪಡೆ ಮುಖ್ಯಸ್ಥ
