ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮಾಜಿ ಬಿಜೆಪಿ ಶಾಸಕ, ಹಾಲಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಬೇಳೂರು ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಮೋದಿಯರನ್ನು ಕೊಲ್ಲಲು ಕರೆ ನೀಡಿದ್ದಾರೆ, ಅವರ ಮೇಲೆ ಕೇಸು ದಾಖಲಿಸಬೇಕು ಎಂದು ಕರ್ನಾಟದಕ ಬಿಜೆಪಿ ಮುಖಂಡರು ಆರೋಪ ಮಾಡಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಕುರಿತು ಗೋಪಾಲಕೃಷ್ಣ ಬೇಳೂರು ಅವರನ್ನು ಟ್ರೂಥ್ ಇಂಡಿಯಾ ಸಂಪರ್ಕಿಸಲಾಗಿ, ಅವರು ಬಿಜೆಪಿಯ ಆರೋಪವನ್ನು ತಳ್ಳಿ ಹಾಕಿದ್ದಾರೆ.
“ಬಿಜೆಪಿಯವರು ಈಗ ತೋರಿಸುತ್ತಿರುವ ಭಾಷಣದ ವಿಡಿಯೋ ಕಳೆದ ತಿಂಗಳು 4ನೇ ತಾರೀಖಿನಂದು ನಾನು ಮಾಡಿದ್ದ ಭಾಷಣದ ತುಣುಕು. ಕಳೆದ ಜನವರಿ 30ರಂದು, ರಾಷ್ಟ್ರಪಿತರಾದ ಮಹಾತ್ಮಾ ಗಾಂಧೀಜಿಯವರ ಹುತಾತ್ಮ ದಿನದಂದು ಗಾಂಧೀಜಿಯವರ ಫೋಟೋ ಒಂದನ್ನು ಎದುರಿಗೆ ಇಟ್ಟುಕೊಂಡು ಹಿಂದೂ ಮಹಾಸಭಾ ಸಂಘಟನೆಯ ಪೂಜಾ ಶಕುನ್ ಪಾಂಡೆ ತನ್ನ ಬೆಂಬಲಿಗರೊಂದಿಗೆ ಗುಂಡಿನಿಂದ ಹಾರಿಸಿ ಅಣುಕು ಕೊಲೆ ನಡೆಸಿದ್ದರು. ದೇಶ ರಾಷ್ಟ್ರಪಿತನಿಗೇ ಇಂತಹ ಅಪಮಾನ ಮಾಡಿದ್ದರ ಬಗ್ಗೆ ತೀವ್ರ ನೊಂದಿದ್ದ ನಾನು ಅದನ್ನು ನನ್ನ ಭಾಷಣದಲ್ಲಿ ಖಂಡಿಸಿದ್ದೆ. ಇಂತಹ ಕೃತ್ಯಗಳ ಮೂಲಕ ಪ್ರಜಾಪ್ರಭುತ್ವವನ್ನು ಕೊಲ್ಲಲು ಪ್ರಯತ್ನಿಸುವವರಿಗೆ ಎಚ್ಚರಿಕೆ ನೀಡಿದ್ದೆ. ಆಗ ನಾನು ಮಾತಾಡುತ್ತಾ ‘ಗಾಂಧೀಜಿಯ ಭಾವಚಿತ್ರಕ್ಕೆ ಗುಂಡು ಹೊಡೆದು ಕೊಲ್ಲುವ ನೀವು ಅದೇ ರೀತಿ ನಿಮ್ಮ ಮೋದಿಗೆ ಮಾಡುವ ಸಾಮರ್ಥ್ಯ ನಿಮ್ಮಲ್ಲಿದೆಯೇ’ ಎಂದು ಪ್ರಶ್ನಿಸಿದ್ದೆ. ‘ತಾಕತ್ತಿದ್ದರೆ ಹಾಗೆ ಮಾಡುತ್ತೀರಾ?’ ಎಂದು ಅವರನ್ನೇ ಪ್ರಶ್ನಿಸಿದ್ದೆ. ಈ ಮಾತಿನ ಉದ್ದೇಶ ಗಾಂಧೀಜಿಯವರ ಕೊಲೆ ನಡೆಸಿದ ನಾಥೂರಾಮ್ ಗೋಡ್ಸೆಯನ್ನು ಆರಾಧಿಸುವವರ ಮನಸ್ಥಿತಿ ಪ್ರಶ್ನಿಸುವುದಾಗಿತ್ತು, ಯಾರನ್ನೂ ಕೊಲೆ ಮಾಡಿ ಎನ್ನುವುದಾಗಿರಲಿಲ್ಲ” ಎಂದು ಸ್ಪಷ್ಟನೆ ನೀಡಿದರು. “ನಾನು ಆ ಭಾಷಣ ಮಾಡಿ ತಿಂಗಳಾದ ನಂತರದಲ್ಲಿ ಈಗ ಬೇಕೆಂದೇ ವಿವಾದ ಮಾಡಲು ಬಿಜೆಪಿ ಬಳಸಿಕೊಂಡಿದೆ” ಎಂದೂ ಬೇಳೂರು ಬಿಜೆಪಿಯನ್ನು ದೂರಿದರು.
Belur Gopalakrishna, a Congress leader in a official party function calls for assassination of democratically elected PM Sri @narendramodi ji.
Instigating for assassination of PM of a country is a nation threat & we urge @HMOIndia, @CPBlr to impose legal action immediately. pic.twitter.com/Tg9GO0FCdM
— BJP Karnataka (@BJP4Karnataka) March 5, 2019
Shocking statement from #CONgress leader Belur Gopalakrishna, he calls out to assassinate PM @narendramodi.
To appease a particular section #Congress instigating for the assassination of an elected PM.
Urge @DrParameshwara & @hd_kumaraswamy to take legal actions against him. pic.twitter.com/R0WQ69JH8h
— Shobha Karandlaje (@ShobhaBJP) March 5, 2019
ಕಾಂಗ್ರೆಸ್ ನ ನೀಚ ಸಂಸ್ಕೃತಿಯ ಅನಾವರಣ!
ವ್ಯಕ್ತಿಗೆ ಗೌರವ ಕೊಡುತ್ತಿರೋ ಇಲ್ಲವೋ, ಪ್ರಧಾನಿ ಹುದ್ಧೆಗಾದರೂ ಗೌರವ ನೀಡುವಂತಹ ಸೌಜನ್ಯ ಕೂಡ ಇಲ್ಲ ಎಂದರೆ ನಿಮ್ಮ ನೈತಿಕ ದಿವಾಳಿತನ ಎತ್ತಿ ಕಾಣುತ್ತಿದೆ. @INCKarnataka ದ ನಾಯಕರ ಈ ಅಸಂಬದ್ಧ ಹೇಳಿಕೆಯ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. @CPBlr @BJP4Karnataka#WhyTheyHateModi pic.twitter.com/O5NHpEzAqv
— Dr. Ashwathnarayan (@drashwathcn) March 5, 2019
ನಿಮ್ಮ ಮೇಲೆ ಪ್ರಕರಣ ದಾಖಲಿಸಲು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರಲ್ಲ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬೇಳೂರು ಗೋಪಾಲಕೃಷ್ಣ, “ನಾನು ಹೇಳಿರುವ ಮಾತನ್ನು ತಮಗಿಷ್ಟ ಬಂದಂತೆ ತಿರುಚಿಕೊಂಡು ಅವರು ದೂರು ದಾಖಲಿಸುವುದಾದರೆ ದಾಖಲಿಸಲಿ. ಅದರಿಂದ ನನಗೆ ತೊಂದರೆಯಿಲ್ಲ. ನಾನು ಮಾತನಾಡಿದ್ದು ನನಗೆ ಸ್ಪಷ್ಟವಿದೆ” ಎಂದರು.
ಬೇಳೂರು ಭಾಷಣದಲ್ಲಿ ಏನಿತ್ತು?
ಮೋದಿಯವರನ್ನು ಕೊಲ್ಲಲು ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲ ಕೃಷ್ಣ ಕರೆ ನೀಡಿದ್ದಾರೆ ಎನ್ನಲಾದ ಭಾಷಣದ ವಿಡಿಯೋದಲ್ಲಿ ಇರುವುದಿಷ್ಟು. “ಏನಿವತ್ತು ನಮ್ಮ ಗಾಂಧೀಜಿಯವರನ್ನ ಕೊಲೆಮಾಡಿದಂತ ನಾಥೂರಾಮ್ ಗೋಡ್ಸೆಯವರ ಬಗ್ಗೆ ಮಾತಾಡುತ್ತಾರೆ, ಅಂಥವರು ಈ ದೇಶದಲ್ಲಿ ಇರಬಾರದು, ಅವರೇನಾದರೂ ಈ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲು ಹೊರಟರೆ, ಬಹುಶಃ ನಿಮಗೆ ತಾಕತ್ತಿದ್ದರೆ ನಿಮ್ಮ ಮೋದಿಯವರನ್ನು ಗುಂಡಿಟ್ಟು ಸಾಯಿಸ್ರಿ, ಬೇರೆ ಯಾರನ್ನೂ ಸಾಯಿಸಲು ಹೋಗಬೇಡಿ”. ಇದರಲ್ಲಿ ಬೇಳೂರು ಅವರು “ನಿಮಗೆ ತಾಕತ್ತಿದ್ದರೆ ನಿಮ್ಮ ಮೋದಿಯನ್ನು” ಎಂದು ಹೇಳಿರುವುದು ಗಾಂಧೀಜಿಯವರನ್ನು ಗುಂಡಿಟ್ಟು ಗುಂಡಿಟ್ಟು ಕೊಂದ ಗೋಡ್ಸೆಯನ್ನು ಬೆಂಬಲಿಸುವವರನ್ನು ಉದ್ದೇಶಿಸಿ ಆಡಿದ ಮಾತು ಎಂಬುದು ಸ್ಪಷ್ಟವಾಗಿದೆ. ಆದರೆ ಇಂದು ಬೆಳಗಿನಿಂದ ಟ್ವೀಟ್ ಮಾಡಿರುವ ಬಿಜೆಪಿ ಮತ್ತು ಬಿಜೆಪಿಯ ಹಲವಾರು ಮುಖಂಡರು ಇದನ್ನು ‘ಗೋಪಾಲ ಕೃಷ್ಣ ತಮ್ಮ ಕಾರ್ಯಕರ್ತರಿಗೆ ಮೋದಿಯವರನ್ನು ಕೊಲ್ಲಲು ಕರೆ ನೀಡಿದ್ದಾರೆ’ ಎಂಬ ಅರ್ಥದಲ್ಲಿ ಹೇಳುತ್ತಾ, ಕಾನೂನು ಕ್ರಮಕ್ಕೆ ಆಗ್ರಹಪಡಿಸುತ್ತಿದ್ದಾರಲ್ಲದೆ ಇದನ್ನೊಂದು ವಿವಾದವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಗೋಪಾಲಕೃಷ್ಣ ಬೇಳೂರು ಅವರು ಈ ಭಾಷಣ ಮಾಡಿದ್ದು ತಿಂಗಳ ಹಿಂದೆ. ಆ ನಂತರದಲ್ಲಿ ಪುಲ್ವಾಮಾ ದಾಳಿ ನಡೆದು, ಇಡೀ ದೇಶದ ಗಮನ ಭಾರತ-ಪಾಕಿಸ್ತಾನ-ಮೋದಿ ಇತ್ಯಾದಿಗಳ ಕುರಿತು ಆಗಿರುವ ಸಂದರ್ಭದಲ್ಲಿ ಇಂತಹ ಒಂದು ವಿವಾದವನ್ನು ಬೇಕೆಂದೇ ಬಿಜೆಪಿ ಹುಟ್ಟು ಹಾಕಿ ಕಾಂಗ್ರೆಸ್ ಮುಖಂಡ ಬೇಳೂರು ವಿರುದ್ಧ ಜನರನ್ನು ರೊಚ್ಚಿಗೇಳಿಸುವ ಪ್ರಯತ್ನದಲ್ಲಿ ತೊಡಗಿದೆ.