ಭಾರತೀಯ ವಾಯುಪಡೆಯ ವಿಂಗ್ ಕಮಾಂಡ್ ಅಭಿನಂದನ್ ಯಾವುದೇ ಸಾಮಾಜಿಕ ಮಾಧ್ಯಮದ ಅಕೌಂಟ್ ಹೊಂದಿಲ್ಲ. ಟ್ವಿಟರ್, ಇನ್ ಸ್ಟಾಗ್ರಾಮ್ ಗಳಲ್ಲಿ ಅಭಿನಂದನ್ ಹೆಸರಿನಲ್ಲಿ ಇರುವ ಅಕೌಂಟುಗಳೆಲ್ಲಾ ನಕಲಿ ಅಕೌಂಟುಗಳು- ಹೀಗೆಂದು ಇಂದು ವಾಯುಪಡೆ ಸ್ಪಷ್ಟೀಕರಣ ಹೇಳಿಕೆ ಬಿಡುಗಡೆ ಮಾಡಿದೆ.
IAF ಮತ್ತು ಅಭಿನಂದನ್ ಜೊತೆ ಥಳುಕು ಹಾಕಿ ಸೃಷ್ಟಿಸಲಾಗಿರುವ ಹಲವು ನಕಲಿ ಅಕೌಂಟುಗಳಲ್ಲಿ ವಾಯುಪಡೆ ಪಟ್ಟಿ ಮಾಡಿ ಬಿಡುಗಡೆ ಮಾಡಿದೆ.
#FAKE ACCOUNTS : Wg Cdr Abhinandan Varthaman does not have a social media account on any portal (Facebook /Instagram /Twitter). Please avoid following any fake accounts being used in the name of any IAF Airwarrior for spreading misinformation.
Jai Hind!!! pic.twitter.com/nG8C7ZUkQ6— Indian Air Force (@IAF_MCC) March 6, 2019
ಪಾಕಿಸ್ತಾನ ವಾಯುಪಡೆಯ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನವು ಮಾರ್ಚ್ 1ರಂದು ಬಿಡುಗಡೆ ಮಾಡಿತ್ತು. ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್, ಇನ್ ಸ್ಟಾಗ್ರಾಮ್ಗಳಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಹೆಸರಿನ ಅಕೌಂಟುಗಳು ನಾಯಿಕೊಡೆಗಳಂತೆ ಸೃಷ್ಟಿಯಾಗಿದ್ದವು.
ಈ ಹಿನ್ನೆಲೆಯಲ್ಲಿ ಇಂದು ಭಾರತೀಯ ವಾಯುಪಡೆಯು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದೆ. ಅಭಿನಂದನ್ ಹೆಸರಿನ ನಕಲಿ ಅಕೌಂಟುಗಳನ್ನು ಯಾರೂ ಅನುಸರಿಸಬಾರದೆಂದೂ, ಅವುಗಳು ಮಾಲ್ವೇರ್ (ಕಂಪ್ಯೂಟರ್ ವೈರಸ್)ಗಳನ್ನು ಒಳಗೊಂಡಿರಬಹುದೆಂದೂ ಎಚ್ಚರಿಕೆ ನೀಡಿದೆ.
ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಫೆ.27ರಂದು ಪಾಕಿಸ್ತಾನಿ ಸೇನೆಯು ಗಡಿ ನಿಯಂತ್ರಣಾ ರೇಖೆಯ ಬಳಿ ಮಿಗ್ 21 ಬೈಸನ್ ಯುದ್ಧ ವಿಮಾನದಿಂದ ಬಿದ್ದಿದ್ದ ಸಂದರ್ಭದಲ್ಲಿ ಪಾಕಿಸ್ತಾನಿ ಸೈನಿಕರು ವಶಕ್ಕೆ ಪಡೆದು ಎರಡು ದಿನಗಳ ಕಾಲ ವಶದಲ್ಲಿರಿಸಿಕೊಂಡಿದ್ದು ನಂತರ ಪಾಕ್ ಪ್ರಧಾನಿ ಇಮ್ರಾನ್ ಖಾನ್ ‘ಶಾಂತಿಯ ಸಂಕೇತವಾಗಿ’ ಬಿಡುಗಡೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದರು. ಮಾರ್ಚ್ 1ರಂದು ಭಾರತ-ಪಾಕಿಸ್ತಾನ ಗಡಿಯ ವಾಘಾ ದ್ವಾರದ ಮೂಲಕ ಭಾರತಕ್ಕೆ ಅಭಿನಂದನನ್ ಸುರಕ್ಷಿತವಾಗಿ ಮರಳಿದ್ದರು.