ಲಕ್ನೋ: ಫುಟ್ಪಾತಿನ ಮೇಲೆ ಕುಳಿತು ದ್ರಾಕ್ಷಿ, ಗೋಡಂಬಿ ವ್ಯಾಪಾರ ಮಾಡುತ್ತಿದ್ದ ಕಾಶ್ಮೀರಿ ವ್ಯಾಪಾರಿಗಳ ಮೇಲೆ ಬುಧವಾರ ಕೆಲವು ಕೇಸರಿ ಗೂಂಡಾಗಳು ಹಲ್ಲೆ ನಡೆಸಿದ್ದು ಒಬ್ಬನನ್ನು ಬಂಧಿಸಲಾಗಿದೆ.
ಈ ಹಲ್ಲೆ ಪ್ರಕರಣ ನೆನ್ನೆ ಸಂಜೆ ನಡೆದಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುವ ಮೂಲಕ ಪ್ರಕರಣ ಬೆಳಕಿಗೆ ಬಂದಿದೆ. ಹಲ್ಲೆ ನಡೆಸಿದ ಗೂಂಡಾಗಳು ಬಲಪಂಥೀಯ ಸಂಘಟನೆಯಾದ ವಿಶ್ವ ಹಿಂದೂ ದಳದ ಸದಸ್ಯರೆಂದು ಹೇಳಲಾಗಿದೆ.
ಮಾ. 6ರ ಸಂಜೆ 5 ಗಂಟೆಯ ಸುಮಾರಿಗೆ ಈ ಹಲ್ಲೆಯ ಘಟನೆ ನಡೆದಿದ್ದು, ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸುವ ಬಡಪಾಯಿ ಕಾಶ್ಮೀರಿ ವ್ಯಾಪಾರಿಗಳ ಮೇಲೆ ಕೆಲವು ಗೂಂಡಾಗಳು ಹಲ್ಲೆ ನಡೆಸಿದ್ದಾರೆ.ಹಲ್ಲೆಗೆ ಒಳಗಾದ ಒಬ್ಬ ವ್ಯಾಪಾರಿ ಅಳುತ್ತಾ ಓಡಿದ್ದಾನೆ. ಗೂಂಡಾಗಳು ಹಲ್ಲೆಯನ್ನು ಮುಂದುವರೆಸುತ್ತಿದ್ದಂತೆ ಮತ್ತೊಬ್ಬ ದಾರಿ ಹೋಕ ಮಧ್ಯೆ ಪ್ರವೇಶಿಸಿ ತಡೆದು ಹಲ್ಲೆಕೋರರನ್ನು ತರಾಟೆಗೆ ತೆಗೆದುಕೊಂಡಿರುವುದು ವೈರಲ್ ಆಗಿರುವ ವಿಡಿಯೋ ದೃಶ್ಯದಲ್ಲಿ ದಾಖಲಾಗಿದೆ.
SECOND video of the attack. These cries of this Kashmiri should make us all hand our heads in shame. Truly disgusted to see these clips. This is not the #NewIndia anyone can hope for. India is big, our hearts are bigger. Kashmir is our and so are the Kashmiris. pic.twitter.com/L7nXAqL2vf
— Prashant Kumar (@scribe_prashant) March 6, 2019
ಸ್ಥಳೀಯ ಹಜ್ರತ್ಗಂಜ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಹಲ್ಲೆ ನಡೆಸಿದ ಒಬ್ಬ ವ್ಯಕ್ತಿಯನ್ನು ಬಂಧಿಸಿರುವುದಾಗಿ ಎನ್ಡಿ ಟಿವಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಅಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ. ಆದರೆ ಹಲ್ಲೆ ಪ್ರಕರಣದ ಪ್ರಮುಖ ಆರೋಪಿ ವಿಶ್ವ ಹಿಂದೂ ದಳದ ಅಧ್ಯಕ್ಷನನ್ನು ಇನ್ನೂ ಬಂಧಿಸಲಾಗಿಲ್ಲ.
ಫೆ. 14ರಂದು ಸಿಆರ್ಪಿಎಫ್ನ 40 ಸೈನಿಕರನ್ನು ಬಲಿ ತೆಗೆದುಕೊಂಡ ಪುಲ್ವಾಮಾ ದಾಳಿಯನ್ನು ದೇಶದಲ್ಲಿ ರಾಜಕೀಯ ಧಾರ್ಮಿಕ ವೈಷಮ್ಯ ಉಂಟು ಮಾಡಲು ಬಳಸಿಕೊಳ್ಳುತ್ತಿರುವ ಕೆಲವು ಮತಾಂಧ ಸಂಘಟನೆಗಳು ಕಾಶ್ಮೀರದ ಜನತೆಯಲ್ಲಿ ಅಭದ್ರತೆ ಉಂಟು ಮಾಡುತ್ತಿದ್ದಾರೆ. ರಾಜಧಾನಿ ದೆಹಲಿಯೂ ಸೇರಿದಂತೆ ಅನೇಕ ಕಡೆಗಳಲ್ಲಿ ಇಂತಹ ಘಟನೆಗಳು ನಡೆದಿದ್ದವು. ಕಾಶ್ಮೀರದ ಜನರನ್ನು ಭಾರತೀಯರು ಎಂದು ನೋಡದೇ, ಅವರಲ್ಲಿ ಅಭದ್ರತೆ ಸೃಷ್ಟಿಸುತ್ತಿರುವ ಜನರ ವಿರುದ್ಧ ಕೆಲವು ನಿವೃತ್ತ ಸೇನಾ ಅಧಿಕಾರಿಗಳು ಧ್ವನಿ ಎತ್ತಿದ್ದರು. ಆ ನಂತರದಲ್ಲಿ ಈ ಘಟನೆಗಳನ್ನು ಗಮನಕ್ಕೆ ತೆಗೆದುಕೊಂಡ ಸರ್ವೋಚ್ಛ ನ್ಯಾಯಾಲಯವು ಕಾಶ್ಮೀರಿಗಳಿಗೆ ಸೂಕ್ತ ಭದ್ರತೆ ನೀಡುವಂತೆ ಸರ್ಕಾರಕ್ಕೆ ತಾಕೀತು ಮಾಡಿತ್ತು.
So sad