ಶ್! ಯಾರೂ ಮಾತಾಡಬೇಡಿ, ಇದು ಯೋಗಿ ರಾಜ್ಯ!
ಇಲ್ಲಿ ಯಾರೂ ಮಾತಾಡಬಾರದು, ಅಂದರೆ ಕೇಂದ್ರದಲ್ಲಿ ಆಡಳಿತದಲ್ಲಿರುವ ಮೋದಿಯವರ ಕುರಿತಾಗಲೀ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಆದಿತ್ಯನಾಥ ಯೋಗಿಯವರ ಕುರಿತಾಗಲೀ ಅವರನ್ನು ಪ್ರಶ್ನಿಸುವ ಮಾತುಗಳಿಗೆ ಅಘೋಷಿತ ನಿಷೇಧವಿದೆ. ಹಾಗೂ ಯಾರಾದರೂ ಮಾತಾಡಿದರೆ ‘ನೀವು ದೇಶದ್ರೋಹಿ’ ಎಂದು ಆರೋಪಿಸಿ ನಿಮ್ಮನ್ನು ಥಳಿಸಲಾಗುತ್ತಿದೆ.
ಕಳೆದ ಐದು ವರ್ಷಗಳಲ್ಲಿ ಈ ದೇಶ ಬಂದು ತಲುಪಿರುವ ಸ್ಥಿತಿ ಇದು.
ಉತ್ತರ ಪ್ರದೇಶದಲ್ಲಿ ಬುಧವಾರ ನಡೆದಿರುವ ಈ ಘಟನೆ ಭಾರತ ಮುಂದೆ ಎತ್ತ ಚಲಿಸಬಲ್ಲದು ಎಂಬುದಕ್ಕೆ ನಿದರ್ಶನವಾಗಿದೆ.
ಸುದ್ದಿ ವಾಹಿನಿಯೊಂದು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೊಬ್ಬ ಆಡಳಿತ ಪಕ್ಷದ ವಿರುದ್ಧ ಮಾತನಾಡಿದ ಎಂಬ ಒಂದೇ ಕಾರಣಕ್ಕೆ ಬಿಜೆಪಿ ಪಕ್ಷದ ಹೊಡಿಬಡಿ ಗುಂಪೊಂದು ಆ ವಿದ್ಯಾರ್ಥಿಯನ್ನು ಹಿಡಿದೆಳೆದು ಹೀನಾಮಾನ ಥಳಿಸಿದೆ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಮುಝಾಪರ ನಗರದಲ್ಲಿ. ‘ಭಾರತ್ ಸಮಾಚಾರ್’ ವಾಹಿನಿಯ ಪತ್ರಕರ್ತರೊಬ್ಬರು ‘ಮಾಹೋಲ್ ಬನಾಯೆ ರಖೀಯೇ” ಎಂಬ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳನ್ನು ಮಾತನಾಡಿಸುತ್ತಿರುವಾಗಲೇ ಈ ಹಲ್ಲೆ ನಡೆದಿದೆ. ಸರ್ಕಾರವು ವಿದ್ಯಾವಂತ ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿದೆ ಎಂದು ತನ್ನ ಅಭಿಪ್ರಾಯ ವ್ಯಕ್ತಪಡಸಿದ ಅದ್ನಾನ್ ಎಂಬ ವಿದ್ಯಾರ್ಥಿಯ ಮೇಲೆ ಬಿಜೆಪಿ ಕಾರ್ಯಕರ್ತರು “ಟೆರರಿಸ್ಟ್’ ಎಂದು ಹೇಳುತ್ತಾ ನಡೆಸಿರುವ ಈ ಅಮಾನವೀಯ ಹಲ್ಲೆಯ ವಿಡಿಯೋ ನಂತರದಲ್ಲಿ ವೈರಲ್ ಆಗಿದೆ.
In Muzaffarnagar, BJP workers brutally thrashed a youth who confronted govt's claim over job and education during an election special segment hosted by senior journalist @narendrauptv for his channel. Mob can be heard calling the youth a terrorist. pic.twitter.com/mNjo3zCT6n
— Piyush Rai | پیوش رائے (@Benarasiyaa) March 6, 2019
The local youth Adnan, who was brutally thrashed by BJP supporters in Muzaffarnagar for criticising claims over job and development, speaks to media. Claims he was called a terrorist for criticising BJP. Listen in. pic.twitter.com/fQDPShafcU
— Piyush Rai | پیوش رائے (@Benarasiyaa) March 7, 2019