ಬೆಂಗಳೂರು: ಮುಂಬರು ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿರುವ ಸ್ವತಂತ್ರ ಅಭ್ಯರ್ಥಿ ಪ್ರಕಾಶ್ ರಾಜ್ ಅವರನ್ನು ಎಲ್ಲಾ ರಾಜಕೀಯ ಪಕ್ಷಗಳೂ ಬೆಂಬಲಿಸಬೇಕು ಎಂದು ಪ್ರಗತಿಪರರು ಆಗ್ರಹ ಪಡಿಸಿಸಿದ್ದಾರೆ.
ಈ ಸಂಬಂಧವಾಗಿ ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಪ್ರೊ.ಬಾಬು ಮ್ಯಾಥ್ಯು, ಹಾಗೂ ಸ್ವರಾಜ್ ಪಕ್ಷದ ದೊಡ್ಡಿಪಾಳ್ಯ ನರಸಿಂಹ ಮೂರ್ತಿ, ಕಾಂಗ್ರೆಸ್, ಜೆ.ಡಿ.ಎಸ್, ಬಿಜೆಪಿ ಸೇರಿದಂತೆ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳೂ ಪ್ರಕಾಶ್ ರಾಜ್ ಅವರಿಗೆ ಬೆಂಬಲ ನೀಡಬೇಕು ಎಂದು ವಿನಂತಿಸಿದರು.
ಬೆಂಗಳೂರಿನ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಜನತೆಯ ಧ್ವನಿಯನ್ನು ಸಂಸತ್ತಿನಲ್ಲಿ ಅಭಿವ್ಯಕ್ತಿಸುವ ದೃಷ್ಟಿಯಿಂದ ಎಲ್ಲಾ ರೀತಿಯಿಂದಲೂ ಪ್ರಕಾಶ್ ರಾಜ್ ಸೂಕ್ತ ಅಭ್ಯರ್ಥಿ ಎಂದು ಪ್ರೊ.ಬಾಬು ಮ್ಯಾಥ್ಯು ಹೇಳಿದರು. ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಮತದಾರರೂ ಈ ನಿಟ್ಟಿನಲ್ಲಿ ಪ್ರಕಾಶ್ ರಾಜ್ ಅವರನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಅವರು ಹೆಳಿದರು. ಇದೇ ಸಂದರ್ಭದಲ್ಲಿ ಚುನಾವಣೆಗಳಲ್ಲಿ ಕೋಟ್ಯಂತರ ಹಣ ನೀರಿನಂತೆ ಖರ್ಚು ಮಾಡಲಾಗುತ್ತಿರುವ ಈ ದಿನಗಳಲ್ಲಿ ಆ ರೀತಿಯ ಭ್ರಷ್ಟ ಮಾರ್ಗ ಅನುಸರಿಸದೇ ಚುನಾವಣಾ ಆಯೋಗ ನಿಗದಿ ಪಡಿಸಿರುವು 75 ಲಕ್ಷ ರೂಪಾಯಿಗಳ ಮಿತಿಯಲ್ಲೇ ಚುನಾವಣೆ ಎದುರಿಸಬೇಕು ಎಂದು ಪ್ರಕಾಶ್ ರಾಜ್ ಅವರಿಗೂ ಪ್ರೊ.ಮ್ಯಾಥ್ಯು ವಿನಂತಿಸಿದರು
.“ಕಳೆದ 70 ವರ್ಷಗಳಲ್ಲಿ ಪಕ್ಷ ರಾಜಕಾರಣವು ಪ್ರಜಾಪ್ರಭುತ್ವವನ್ನು ಸೋಲಿಸಿದೆ. ಪಕ್ಷಗಳು ಜನರ ದೃಷ್ಟಿಯಲ್ಲಿ ನಂಬಿಕೆ ಕಳೆದುಕೊಂಡಿವೆ. ಇಂತಹ ಸಂದರ್ಭದಲ್ಲಿ ಜನರ ಸಮಸ್ಯೆಗಳನ್ನು ಸ್ವತಂತ್ರ ಅಭ್ಯರ್ಥಿಯಾದ ಪ್ರಕಾಶ್ ರಾಜ್ ಸಮರ್ಥವಾಗಿ ಸಂಸತ್ತಿಗೆ ಕೊಂಡೊಯ್ಯಬಲ್ಲರು” ಎಂದು ದೊಡ್ಡಿಪಾಳ್ಯ ನರಸಿಂಹ ಮೂರ್ತಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಲೇಖಕಿ ಡಾ. ವಿಜಯಮ್ಮ, ರೈತಮುಖಂಡ ಜೆ.ಎಂ ವೀರಸಂಗಯ್ಯ ಹಾಜರಿದ್ದರು.
ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ತಾವು ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿ ಬಿರುಸಿನ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಕ್ಷೇತ್ರದ ಪ್ರಸಕ್ತ ಸಂಸದ್ ಸದಸ್ಯರಾಗಿ ಭಾರತೀಯ ಜನತಾ ಪಕ್ಷದ ಪಿ.ಸಿ.ಮೋಹನ್ ಪ್ರಬಲ ಪ್ರಕಾಶ್ ರಾಜ್ ಗೆ ಪ್ರಬಲ ಎದುರಾಳಿ ಆಗಿದ್ದಾರೆ.