* ಹಾವೇರಿ ಜಿಲ್ಲೆಯಲ್ಲಿ ಪರಿವರ್ತನಾ ಯಾತ್ರೆಯ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಿದ್ದರು
* ಎಐಸಿಸಿ ಕಾರ್ಯದರ್ಶಿ ಕೆ. ಸಿ ವೇಣುಗೋಪಾಲ್, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ಡಿ. ಕೆ ಶಿವಕುಮಾರ್, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಹೆಚ್.ಕೆ ಪಾಟೀಲ್, ಈಶ್ವರ್ ಖಂಡ್ರೆ, ಕೆ. ಎಚ್ ಮುನಿಯಪ್ಪ, ಜಮೀರ್ ಅಹಮದ್ ಖಾನ್, ವೀರಪ್ಪ ಮೊಯ್ಲಿ ಉಪಸ್ಥಿತರಿದ್ದರು
* ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ರಾಹುಲ್ ಗಾಂಧಿ ನಂತರ ಹಾವೇರಿ ಜಿಲ್ಲಾ ಕಾಂಗ್ರೆಸ್ ನೂತನ ಕಟ್ಟಡದ ಶಿಲಾನ್ಯಾಸ ಮಾಡಿದರು
* ರೈತರಿಗೆ ಎಂಎಸ್ ಪಿ ಯೋಜನೆ ನೀಡಿಲ್ಲ, ಸುಳ್ಳು ಹೇಳುವವರಿಗೆ ಏನು ಹೇಳಲು ಆಗುವುದಿಲ್ಲ- ಹಿರಿಯ ನಾಯಕ ಮಲ್ಲಿಕಾರ್ಜು ಖರ್ಗೆ ತರಾಟೆ
* ರೈತರಿಗೆ ಕರ್ನಾಟಕ ಸರ್ಕಾರ ಏನು ಮಾಡಿಲ್ಲ. ಯಾವ ಯೋಜನೆಯನ್ನು ನೀಡಿಲ್ಲ ಎಂದು ಸುಳ್ಳಿನ ಮಹಾಪೂರವನ್ನೇ ಹೇಳಿ ಹೋಗಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಸಾಲಮನ್ನಾ ಮಾಡಿರುವ ಬಗ್ಗೆ ಮೋದಿ ಅವರೇಕೆ ಪ್ರಸ್ತಾಪವನ್ನೇ ಮಾಡಿಲ್ಲ: ದಿನೇಶ್ ಗುಂಡೂರಾವ್ ಟೀಕೆ
* 6ಸಾವಿರದ 76 ಕೋಟಿ ಹಣ ಸಾಲಮನ್ನಾ ಮಾಡಿ ಈಗಾಗಲೇ ರೈತರ ಖಾತೆಗೆ ಹಣ ಜಮೆ ಮಾಡಿದ್ದೇವೆ. ಆದರೆ ಕೆಂದ್ರ ಸರ್ಕಾರ ಏನು ಮಾಡಿದೆ, ಉತ್ತರಿಸಲಿ. ಕೇಂದ್ರ ಸರ್ಕಾರ ಅಂಬಾನಿ, ಅದಾನಿ ಪರವಾಗಿದೆಯೇ ಹೊರತು ರೈತರು, ಜನಸಾಮಾನ್ಯರ ಪರವಾಗಿಲ್ಲ. ಮುಂದಿನ ಆಗಸ್ಟ್ ನಲ್ಲಿ ರಾಹುಲ್ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ- ದಿನೇಶ್ ಗುಂಡೂರಾವ್
ಸಿದ್ದರಾಮಯ್ಯ ಭಾಷಣದ ವರದಿ
* ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮಾತನಾಡಿ, ಹಸಿರು ಶಾಲು ಹೊದ್ದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಿ. ಎಸ್ ಯಡಿಯೂರಪ್ಪ ಅವರು ಇದೇ ಹಾವೇರಿ ಜನರು ರಸಗೊಬ್ಬರ, ಬಿತ್ತನೆ ಬೀಜ ಕೇಳಿದರೆ ಲಾಠಿ ಪ್ರಹಾರ ಮಾಡಿ, ಇಬ್ಬರು ರೈತರನ್ನು ಬಲಿ ಪಡೆದರು. ನನ್ನ ಸರ್ಕಾರದ ಅವಧಿಯಲ್ಲಿ 8ಸಾವಿರದ 150 ಕೋಟಿ ಸಾಲಮನ್ನಾ ಮಾಡಿದ್ದೇನೆ. ಇದಕ್ಕೆ ಕೇಂದ್ರ ಸರ್ಕಾರ ಯಾವುದೇ ಸಹಕಾರ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.
* ಕಳೆದ ನಾಲ್ಕು ವರ್ಷಗಳಲ್ಲಿ ಸಾಲಮನ್ನಾ ಮಾಡದ ಕೇಂದ್ರ ಸರ್ಕಾರ ಈಗ ಏಕೆ ಸಾಲಮನ್ನಾ ಮಾಡಿದರು. ಚುನಾವಣೆ ತಂತ್ರವೇ ಹೌದು. ಇಡೀ ದೇಶದ ರೈತರ ಸಾಲ ಮನ್ನಾ ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಅವರು ಪೊಳ್ಳು ಭರವಸೆ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದ ಸಿದ್ದರಾಮಯ್ಯ
ರಾಹುಲ್ ಗಾಂಧಿ ಭಾಷಣದ ವರದಿ
* ನಂತರ ನಮಸ್ಕಾರ ಕರ್ನಾಟಕ ಎನ್ನುವ ಮೂಲಕ ಭಾಷಣ ಆರಂಭಿಸಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
* ಪ್ರಧಾನಿ ಮೋದಿ ಅವರು ರಾಜ್ಯ ಸರ್ಕಾರ ಮಾಡಿರುವ ಸಾಲಮನ್ನಾದ ಬಗ್ಗೆ ಅರಿವಿಲ್ಲದೆ ಕರ್ನಾಟಕ ಸರ್ಕಾರ ರೈತರಿಗೆ ಲಾಲಿಪಾಪ್ ನೀಡಿದೆ, 12 ಸಾವಿರ ಕೋಟಿ ನೀಡಿದೆ ಎಂದಿದ್ದರು.
* ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಛತ್ತೀಸ್ ಗಡ್, ರಾಜಸ್ತಾನ, ಮಧ್ಯಪ್ರದೇಶ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಸಾಲಮನ್ನಾ ಮಾಡಿದ್ದೇವೆ. 5 ವರ್ಷಗಳಲ್ಲಿ ಮೋದಿ ಸರ್ಕಾರ ಆಡಳಿತ ನಡೆಸ್ತಿದೆ, ಆದರೆ ಕಳೆದ 40 ವರ್ಷಗಳಲ್ಲಿ ಈಗ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ
* ಹೆಚ್ ಎ ಎಲ್ 70 ವರ್ಷಗಳಲ್ಲಿ ಹಲವು ಯುದ್ಧ ವಿಮಾನಗಳನ್ನು ತಯಾರಿಸಿದೆ, ಮಿರಾಜ್, ಸುಖೋಯ್, ಮಿಗ್, ಜಾಗ್ವಾರ್ ಸೇರಿದಂತೆ ಹಲವು ಯುದ್ಧ ವಿಮಾನಗಳನ್ನು ತಯಾರಿಸಿದೆ, ಆದರೆ , ಅನಿಲ್ ಅಂಬಾನಿ ಒಂದೂ ವಿಮಾನ ನಿರ್ಮಾಣ ಮಾಡದ ಅಂಬಾನಿಗೆ 30 ಸಾವಿರ ಕೋಟಿ ನೀಡಿದೆ
* ಪ್ರಧಾನಿ ಮೋದಿ ಅವರು ರಫೇಲ್ ಒಪ್ಪಂದ ಮುರಿದಿದ್ದಾರೆ, ನೋಟ್ ಬ್ಯಾನ್ ಮೂಲಕ ಜನಸಾಮಾನ್ಯರನ್ನು ರಸ್ತೆಗೆ ನಿಲ್ಲಿಸಿದರು
* ಕೆಲವು ದಿನಗಳ ಹಿಂದೆ ಪುಲ್ವಾಮದಲ್ಲಿ 40 ಯೋಧರು ಹುತಾತ್ಮರಾಗಿದ್ದರು, ಈ ಹತ್ಯೆಯ ರೂವಾರಿ ಜೈಷ್ ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ನನ್ನು ಬಿಟ್ಟವರು ಯಾರು ಎಂದು ತಿಳಿಸಿ
* ಸಿಆರ್ ಪಿಎಫ್ ಯೋಧರನ್ನು ಹತ್ಯೆ ಮಾಡಿದವರನ್ನು ಬಿಟ್ಟವರು ಯಾರು?, ಜೈಷ್ ಮೊಹಮ್ಮದ್ ಸಂಘಟನೆಯ ಮಸೂದ್ ಅಜರ್ ನನ್ನು ನಮ್ಮ ದೇಶದ ಜೈಲಿನಿಂದ ಬಿಡುಗಡೆ ಮಾಡಿ ಗೌರವದೊಂದಿಗೆ ಪಾಕಿಸ್ತಾನಕ್ಕೆ ಕಳುಹಿಸಿದ್ದು ಯಾರು?, ನಿಮ್ಮ ಸರ್ಕಾರ, ನಿಮ್ಮ ಮಂತ್ರಿಗಳೇ ಭಯೋತ್ಪಾದಕ ಸಂಘಟನೆಯ ಮುಖಂಡನನ್ನು ಪಾಕ್ ಗೆ ಬಿಟ್ಟು ಬಂದಿದ್ದರು, ಎನ್ ಎಸ್ ಎ ಜಸ್ವಂತ್ ಸಿಂಗ್ ಬಿಟ್ಟು ಬಂದದ್ದನ್ನು ಮರೆತಿರಾ?, 600 ಕೋಟಿ ಇದ್ದ ರಫೇಲ್ ವಿಮಾನ 1600 ಕೋಟಿ ಆಗಿದ್ದು ಏಕೆ? ಎಂದು ಪ್ರಶ್ನೆಗಳ ಸುರಿಮಳೆಗೈದ ರಾಹುಲ್
* ಮೋದಿ ಅವರೇ ನಾವು ನಿಮ್ಮಂತೆ ಅಲ್ಲ, ಭಯೋತ್ಪಾದಕರ ಮುಂದೆ ತಲೆ ಬಾಗುವುದಿಲ್ಲ, ತಲೆ ಎತ್ತಿ ನಿಲ್ಲುತ್ತೇವೆ
* 5 ವರ್ಷಗಳಿಂದ ಬರೀ ಭಾಷಣಗಳನ್ನುಯ ಬಿಟ್ಟು ಬೇರೆ ಏನು ಮಾಡಿದ್ದೀರಿ? ಎಷ್ಟು ಜನರಿಗೆ ನಿಜವಾಗಿ ಉದ್ಯೋಗ ಕೊಟ್ಟಿದ್ದೀರಾ?, ರಫೇಲ್ ಯುದ್ಧ ವಿಮಾನದ ಗುತ್ತಿಗೆ ಏಕೆ ನೀಡಿದ್ದೀರಾ?, ಕರ್ನಾಟಕದ ಯುವಜನತೆಗೆ ಏಕೆ ಉದ್ಯೋಗ ನೀಡಿಲ್ಲ?
* ಗುಜರಾತ್ ನಲ್ಲಿ ನೀವು ಚೀನಾ ಪ್ರಧಾನಿ ಜತೆ ಜೋಕಾಲಿ ಆಡುತ್ತಿದ್ದಾಗ ಚೀನಾ ಸೇನೆ ಗಡಿ ದಾಟಿ ದೋಕ್ಲಾಮ್ ಗೆ ಬಂದಾಗ ನಿಮ್ಮ 56 ಇಂಚಿನ ಎದೆ ಏನು ಮಾಡುತ್ತಿತ್ತು. ಮೋದಿ ಅವರು ಅಜೆಂಡಾವಿಲ್ಲದೆ ಚೀನಾಗೆ ತೆರಳಿದ್ರಾ?
* 2019ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡ ವ್ಯಕ್ತಿಗಳಿಗೆ ಕನಿಷ್ಠ ಆದಾಯ ಯೋಜನೆ ಜಾರಿಗೆ ತರುತ್ತೇವೆ, ನೇರವಾಗಿ ಅರ್ಹ ವ್ಯಕ್ತಿಯ ಬ್ಯಾಂಕ್ ಅಕೌಂಟ್ ಗೆ ಹಣ ಹಾಕುತ್ತೇವೆ
* ಮೋದಿ ಅವರು ಎರಡು ಭಾರತವನ್ನು ಸೃಷ್ಟಿ ಮಾಡಿದ್ದಾರೆ. ಆ ಭಾರತದ ಹೇಗಿದೆ ಅಂದರೆ ಮಲ್ಯ ಅವರು ಜೇಟ್ಲಿ ಅವರಿಗೆ ನಾನು ನಾಳೆ ದೇಶ ಬಿಟ್ಟು ಹೋಗುತ್ತೇನೆ ಎಂದು ಹೇಳಿ ಹೋಗುತ್ತಾರೆ. ನೀರವ್ ಮೋದಿ, ಅನಿಲ್ ಅಂಬಾನಿ, ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಖಾತೆಗೆ ಹಣ ಹಾಕಕುತ್ತಾರೆ. ಅಗತ್ಯ ಸೌಲಭ್ಯ ಐಷಾರಾಮಿ ಜೀವನ ನೀಡುತ್ತದೆ. ಆದರೆ ಇನ್ನೊಂದು ಭಾರತ ಇದೆ ಅಲ್ಲಿ ಬಡ ಜನರ, ಕೂಲಿ ಕಾರ್ಮಿಕರ, ನಿರುದ್ಯೋಗಿಗಳ ಭಾರತದ ಇದೆ. ಅಲ್ಲಿ ನೂರಾರು ಸಮಸ್ಯೆ ಇದೆ. ನಮಗೆ ಈ ರೀತಿಯ ಎರಡು ಭಾರತದ ಬೇಡ. ಎಲ್ಲರನ್ನೂ ಸಮಾನವಾಗಿ ಕಾಣುವ, ಸಮಾನತೆ ತೋರುವ ಭಾರತದ ಬೇಕು
* ಕರ್ನಾಟಕದಲ್ಲಿ ಎರಡು ವಿಚಾರಧಾರೆಯ ಹೋರಾಟ ಇದೆ. ಒಂದೆಡೆ ಬಿಜೆಪಿ, ಆರ್ ಎಸ್ ಎಸ್, ನರೇಂದ್ರ ಮೋದಿ ಮತ್ತೊಂದೆಡೆ ರೈತರು, ಕಾಂಗ್ರೆಸ್, ಬಡಜನರು, ಯುವಜನರ ಪರವಾಗಿ. ಆದರೆ ಗೆಲುವು ಹಿಂದೂಸ್ತಾನಕ್ಕೆ ದೊರೆಯುತ್ತದೆ
* ಬಿಜೆಪಿ ಸರ್ಕಾರದಲ್ಲಿ ನಿತ್ಯ ನಿಮ್ಮ ಹಣ ಕೀಳುತ್ತಿದ್ದಾರೆ. ನಿಮ್ಮ ಭೂಮಿ ಕಸಿಯುತ್ತಿದ್ದಾರೆ. ರೈತರು ಕಟ್ಟುವ ವಿಮೆ ಹಣ ಅನಿಲ್ ಅಂಬಾನಿ ಖಾತೆಗೆ ಹೋಗುತ್ತಿದೆ. ಮೇಕ್ ಇನ್ ಇಂಡಿಯಾ, ಸ್ಟಾಂಡ್ ಅಪ್ ಇಂಡಿಯಾ, ಸಿಟ್ ಡೌನ್ ಇಂಡಿಯಾ ಇನ್ನೂ ಏನೇನು ಹೇಳುತ್ತಾರೋ ಗೊತ್ತಿಲ್ಲ.
* ಕಾಂಗ್ರೆಸ್ ಪಕ್ಷ ಬಡ ಜನರಿಗಾಗಿ ಕೆಲಸ ಮಾಡುತ್ತಿದೆ, ದೇಶದಲ್ಲಿ ಎಂಥಹ ಸಂದರ್ಭ ಬಂದರೂ ಕಾಂಗ್ರೆಸ್ ಪಕ್ಷ ಎಂದಿಗೂ ನಿಮ್ಮ ಜತೆ ಇರುತ್ತದೆ. ಸಣ್ಣ ರೈತರು, ವ್ಯಾಪಾರಿಗಳ ಕಷ್ಟ ನನಗೆ ಗೊತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈಗಿರುವ ಸಂಕೀರ್ಣ ಜಿಎಸ್ ಟಿ ಪದ್ಧತಿಯನ್ನು ರದ್ದು ಮಾಡಿ, ಸುಲಭವಾದ, ಸರಳವಾದ, ಒಂದೇ ಜಿಎಸ್ ಟಿ ಯನ್ನು ಜಾರು ತರುತ್ತೇವೆ. ಎಲ್ಲಾ ಮಹಿಳೆಯರ ಸಶಕ್ತೀಕರಣಕ್ಕಾಗಿ ದೇಶದ ಸಂಸತ್ ನಲ್ಲಿ ಮಹಿಳಾ ಮೀಸಲಾತಿ, ನಮ್ಮ ಮಹಿಳೆಯರು ಶಾಸಕಿ, ಸಂಸದೆಯಗುವಂತೆ ನಮ್ಮ ಸರ್ಕಾರ ಮಾಡುತ್ತದೆ
* ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿ ಮುಂದಿನ ಲೋಕಸಭೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನ ಗಳಿಸಲಿ. ಜೈ ಹಿಂದ್ ಎಂದು ಭಾಷಣ ಮುಗಿಸಿದ ರಾಹುಲ್ ಗಾಂಧಿ