* ಏ.11ರಿಂದ ಚುನಾವಣೆ, ರಾಜ್ಯದಲ್ಲಿ ಏ.18 ಮತ್ತು 23ಕ್ಕೆ ಮತದಾನ
* ಲೋಕಸಭಾ ಚುಣಾವಣೆ ದಿನಾಂಕ ಪ್ರಕಟ: ಕರ್ನಾಟಕದ ಸೇರಿದಂತೆ ದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳ ಚುನಾವಣಾ ದಿನಾಂಕ ಪ್ರಕಟಿಸಿದ ಭಾರತೀಯ ಚುನಾವಣಾ ಆಯೋಗ. ಬಹುನಿರೀಕ್ಷಿತ ಚುನಾವಣಾ ದಿನಾಂಕ ಪ್ರಕಟಿಸಿದ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ. ಘೋಷಣೆಯ ಕ್ಷಣದಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ.
* ಕರ್ನಾಟಕದಲ್ಲಿ ಎರಡನೇ(ಏ.18) ಮತ್ತು ಮೂರನೇ ಹಂತದಲ್ಲಿ(ಏ.23) ಎಲ್ಲಾ 28 ಲೋಕಸಭಾ ಕ್ಷೇತ್ರಗಳ ಚುನಾವಣೆ.
* ಒಟ್ಟು 7 ಹಂತಗಳಲ್ಲಿ ಮತದಾನ: ಏಪ್ರಿಲ್ 11ರಿಂದ ಆರಂಭವಾಗಿ ಒಟ್ಟು ಏಳು ಹಂತಗಳಲ್ಲಿ ಮತದಾನ. ಮೊದಲ ಹಂತ; ಏ.11ರಂದು. ಎರಡನೇ ಹಂತ; ಏ.18. ಮೂರನೇ ಹಂತ; ಏ.23. ನಾಲ್ಕನೇ ಹಂತ; ಏ.29. ಐದನೇ ಹಂತ; ಮೇ.6. ಆರನೇ ಹಂತ; ಮೇ 12 ಮತ್ತು ಏಳನೇ ಹಂತ; ಮೇ.19. ಮತ ಎಣಿಕೆ; ಮೇ 23.
* ಈ ಬಾರಿ ದೇಶದ ಒಟ್ಟು 90 ಕೋಟಿ ಮತದಾರರಿಂದ ಮತದಾನ. ಆ ಪೈಕಿ ಮೊದಲ ಬಾರಿ ಮತದಾನ ಮಾಡುವವರು (18-19 ವಯೋಮಾನ) 1.5 ಕೋಟಿ ಮಂದಿ. ಒಟ್ಟು ಅಂದಾಜು 10 ಲಕ್ಷ ಮತಗಟ್ಟೆಗಳಲ್ಲಿ ಮತದಾನ.
* ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಸಿಕ್ಕಿಂ ಮತ್ತು ಒಡಿಶಾ ಸೇರಿ ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆ ಕೂಡ ಲೋಕಸಭಾ ಚುನಾವಣೆಯೊಂದಿಗೇ ಏಕಕಾಲಕ್ಕೆ ನಡೆಯಲಿದೆ. ಬಹುನಿರೀಕ್ಷಿತ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಆಗಿಲ್ಲ.
* ಆಂಧ್ರಪ್ರದೇಶ, ಅರುಣಾಚಲಪ್ರದೇಶ, ಗೋವಾ, ಗುಜರಾತ್, ಹರ್ಯಾಣ, ಹಿಮಾಚಲಪ್ರದೇಶ, ಕೇರಳ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತೆಲಂಗಾಣ, ತಮಿಳುನಾಡು, ಉತ್ತರಾಖಂಡ, ಅಂಡಮಾನ್-ನಿಕೋಬರ್, ದಾದ್ರಾ- ನಗರ್- ಹವೇಲಿ, ದಮನ್ ಮತ್ತು ಡಿಯು, ಲಕ್ಷದ್ವೀಪ್, ದೆಹಲಿ, ಪಾಂಡಿಚೆರಿ ಮತ್ತು ಚಂಡೀಗಢದಲ್ಲಿ ಒಂದೇ ಹಂತದ ಮತದಾನ.
* ಕರ್ನಾಟಕ, ಮಣಿಪುರ, ರಾಜಸ್ತಾನ ಮತ್ತು ತ್ರಿಪುರಾದಲ್ಲಿ ಎರಡು ಹಂತದ ಮತದಾನ.
* ಅಸ್ಸಾಂ ಮತ್ತು ಛತ್ತೀಸಗಢದಲ್ಲಿ ಮೂರು ಹಂತದ ಮತದಾನ.
* ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ನಾಲ್ಕು ಹಂತದ ಮತದಾನ.
* ಜಮ್ಮು-ಕಾಶ್ಮೀರದಲ್ಲಿ ಐದು ಹಂತದಲ್ಲಿ ಮತದಾನ.
* ಬಿಹಾರ, ಉತ್ತರಪ್ರದೇಶ ಮತ್ತು ಪಶ್ಚಿಮಬಂಗಾಳದಲ್ಲಿ ಏಳು ಹಂತದಲ್ಲಿ ಮತದಾನ ನಡೆಯಲಿದೆ.