ಕೊಚಿನ್: ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸೀಟು ಹಂಚಿಕೆ ಕ್ರಮವಾಗಿ 20:8 ಕ್ಕೆ ಅಂತಿಮಗೊಳಿಸಿಕೊಳ್ಳಲಾಗಿದೆ. ಇಂದು ಕೊಚ್ಚಿನ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ಜೆಡಿಎಸ್ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಡ್ಯಾನಿಶ್ ಅಲಿ ಈ ಸೀಟು ಹಂಚಿಕೆ ವಿಷಯವನ್ನು ಇತ್ಯರ್ಥಗೊಳಿಸಿಕೊಂಡಿದ್ದಾರೆ.
ಜೆ ಡಿಎಸ್ ಪಾಲಾಗಿರುವ ಎಂಟು ಕ್ಷೇತ್ರಗಳೆಂದರೆ,
ತುಮಕೂರು, ಹಾಸನ, ಮಂಡ್ಯ, ಬೆಂಗಳೂರು ಉತ್ತರ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಮತ್ತು ವಿಜಯಪುರ
ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದುಗೊಂಡಿದ್ದ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಆದರೆ ಜೆಡಿಎಸ್ ಕೇಳಿದ್ದ ಮೈಸೂರು ಕ್ಷೇತ್ರವನ್ನು ಬಿಟ್ಟುಕೊಡದೇ ಕಾಂಗ್ರೆಸ್ ತಾನೇ ಉಳಿಸಿಕೊಂಡಿದೆ.