ಲೊಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಶೃಂಗೇರಿ ಶಾರದಾಂಬಾ ದೇವಾಲಯಕ್ಕೆ ಗುರುವಾರ ಬೆಳಗ್ಗೆ ಭೇಟಿ ನೀಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹಾಗೂ ಉಡುಪಿ – ಚಿಕ್ಕಮಗಳೂರು ಸಂಸದೆ ಶೊಭಾ ಕರಂದ್ಲಾಜೆ ಜೊತೆಯಾಗಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪೂಜೆಗೆ ಮುನ್ನ ಶ್ರೀ ಪೀಠದ ಜಗದ್ಗುರುಗಳನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ಬಹುತೇಕ ತಮಗೇ ಖಚಿತವಾಗಿರುವ ಹಿನ್ನೆಲೆಯಲ್ಲಿ ಶೋಭಾ ಅವರು ಯಡಿಯೂರಪ್ಪ ಸಹಿತರಾಗಿ ತೆರಳಿ ಗುರುಗಳ ಆಶೀರ್ವಾದ ಪಡೆದಿದ್ದಾರೆ. ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ ಅವರು ಮಾತ್ರ ಈ ವಿಶೇಷ ಪೂಜೆ ನೆರವೇರಿಸಿದ್ದು, ಪಕ್ಷದ ಇತರೆ ಮುಖಂಡರಾಗಲೀ, ಕುಟುಂಬವರ್ಗದವರಾಗಲೀ ಇರಲಿಲ್ಲ ಎನ್ನಲಾಗಿದೆ.
\ಫೋಟೋ ಕೃಪೆ: ಸಾಮಾಜಿಕ ಜಾಲತಾಣ