ಬೆಂಗಳೂರು: ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಈ ಬಗ್ಗೆ ಕಾಂಗ್ರೆಸ್ ಮುಖಂಡರು ತಮ್ಮ ಹೇಳಿಕೆಗಳ ಮೂಲಕ ಸೂಚನೆ ನೀಡಿದ್ದಾರೆ.
ರಾಹುಲ್ ಗಾಂಧಿ ತಮ್ಮ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಥಿ ಅಲ್ಲದೇ ಕರ್ನಾಟಕದ ಯಾವುದಾದರೂ ಒಂದು ಕ್ಷೇತ್ರದಿಂದ ಸ್ಪರ್ಧಿಸುವ ಸೂಚನೆ ಕಾಣುತ್ತಿದೆ. 1978ರಲ್ಲಿ ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಿದಂತೆ, 1999ರಲ್ಲಿ ಸೋನಿಯಾ ಗಾಂಧಿ ಬಳ್ಳಾರಿಯಿಂದ ಸ್ಪರ್ಧಿಸಿದಂತೆ 2019ರಲ್ಲಿ ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆ ಎಂಬುದಕ್ಕೆ ಇಂದು ಕಾಂಗ್ರೆಸ್ ಮುಖಂಡರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮತ್ತೊಬ್ಬ ಕಾಂಗ್ರೆಸ್ ವರಿಷ್ಠ ಡಾ. ಜಿ. ಪರಮೇಶ್ವರ ಅವರು ಸಾಮಾಜಿಕ ಜಾಲತಾಣಗಳಲ್ಲಿ ನೀಡಿರುವ ಹೇಳಿಕೆಗಳೇ ಸಾಕ್ಷಿ.
ಸಿದ್ದರಾಮಯ್ಯ:
ಕರ್ನಾಟಕ ಯಾವತ್ತೂ ರಾಷ್ಟ್ರೀಯ ಕಾಂಗ್ರೆಸ್ ಮುಖಂಡರನ್ನು ಸ್ವಾಗತಿಸಿದೆ. ಶ್ರೀಮತಿ ಇಂದಿರಾಜಿ ಮತ್ತು ಸೋನಿಯಾಜಿ ಅವರ ವಿಷಯದಲ್ಲಿ ಇದು ಸಾಬೀತಾಗಿದೆ. ನಮ್ಮ ಮುಂದಿನ ಪ್ರಧಾನಿ ಶ್ರೀ ರಾಹುಲ್ ಗಾಂಧಿ ಅವರನ್ನೂ ಕರ್ನಾಟಕದಿಂದ ಸ್ಪರ್ಧಿಸಲಿ, ಅಭಿವೃದ್ಧಿಯ ಹೊಸ ಪರ್ವ ಆರಂಭಿಸಲಿ ಎಂದು ಆಶಿಸುತ್ತೇವೆ.
Karnataka has always supported & encouraged @INCIndia leaders. It has been proved in case of Smt. Indira ji & Smt. Sonia ji.
We also want our next Prime Minister of India Shri. @RahulGandhi to contest from Karnataka & herald new developmental paradigm.#RaGaFromKarnataka
— Siddaramaiah (@siddaramaiah) March 15, 2019
ದಿನೇಶ್ ಗುಂಡೂರಾವ್
“ರಾಹುಲ್ ಗಾಂಧಿಯವರು ಉತ್ತರ ಭಾರತದಿಂದಲೂ ಸ್ಪರ್ಧಿಸಲಿ ಮತ್ತು ದಕ್ಷಿಣ ಕರ್ನಾಟಕದಿಂದಲೂ ಸ್ಪರ್ಧಿಸಲಿ ಎಂದು ನಾನು ಆಶಿಸುತ್ತೇನೆ”
On behalf of @INCKarnataka I urge @RahulGandhi to consider contesting from Karnataka for the forthcoming #LokSabhaElection2019.
He should also be our representative from South India & for that he should choose my state.#RaGaFromKarnataka pic.twitter.com/Jk4ALMMLKK
— Dinesh Gundu Rao / ದಿನೇಶ್ ಗುಂಡೂರಾವ್ (@dineshgrao) March 15, 2019
ಡಾ.ಜಿ.ಪರಮೇಶ್ವರ
“ಇಬ್ಬರು ಪ್ರಮುಖ ನಾಯಕರು ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿ ರಾಜ್ಯದಿಂದ ಸ್ಪರ್ಧಿಸಿದ್ದಾರೆ, ಯಶಸ್ಸು ಪಡೆದಿದ್ದಾರೆ ಹಾಗೂ ಭಾರತವನ್ನು ಮುಂದಕ್ಕೊಯ್ಯಲು ಸಹಾಯ ಮಾಡಿದ್ದಾರೆ! ಇದೇ ಸ್ಪೂರ್ತಿಯಿಂದಲೇ ನಾವು ರಾಹುಲ್ ಗಾಂಧಿಯವರೂ ಕರ್ನಾಟಕದಿಂದ ಸ್ಪರ್ಧಿಸಲಿ ಎಂದು ಹೇಳುತ್ತೇವೆ”
ಕಾಂಗ್ರೆಸ್ ಮುಖಂಡರು ಈ ಹೇಳಿಕೆಗಳ ಮೂಲಕ ತಮ್ಮ ನಾಯಕ, ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಯವರ ಸ್ಪರ್ಧೆಯನ್ನು ಘೋಷಿಸಲು ವಾತಾವರಣ ಸೃಷ್ಟಿಸುತ್ತಿರುವುದು ಸ್ಪಷ್ಟ. ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಬಹುದು ಎಂಬ ಮಾತೂ ಕೇಳಿಬರುತ್ತಿದೆ.
ಮೇಲಿನ ಹೇಳಿಕೆಯಂತೆ ಅನೇಕ ಕಾಂಗ್ರೆಸ್ ಮುಖಂಡರು ಟ್ವಿಟರ್ ಮೂಲಕ ಹೇಳಿಕೆಗಳನ್ನು ನೀಡಿದ್ದು #RaGaFromKarnataka ಎಂಬ ಹ್ಯಾಶ್ ಟ್ಯಾಗ ನ್ನು ಟ್ರೆಂಡಿಂಗ್ ಮಾಡುತ್ತಿರುವುದನ್ನು ಗಮನಿಸಬಹುದಾಗಿದೆ.
ಒಂದೊಮ್ಮೆ ರಾಹುಲ್ ಗಾಂಧಿ ಕರ್ನಾಟಕದಿಂದ ಸ್ಪರ್ಧಿಸುವುದು ಖಚಿತವಾದಲ್ಲಿ ಕರ್ನಾಟಕ ಇಡೀ ರಾಷ್ಟ್ರದ ಗಮನ ಸೆಳಯಲಿರುವುದು ಸತ್ಯ. ಹಾಗೆಯೇ ರಾಜ್ಯದ ಕಾಂಗ್ರೆಸ್ ಮುಖಂಡರಿಗೆ ತಮ್ಮ ಪ್ರಧಾನಿ ಅಭ್ಯರ್ಥಿ ರಾಷ್ಟ್ರ ನಾಯಕನನ್ನು ಗೆಲ್ಲಿಸುವುದು ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಲಿದೆ.