ಬೆಂಗಳೂರಿನ ಕೇಂದ್ರದಿಂದ ಉತ್ತರ, ದಕ್ಷಿಣ ಮತ್ತು ಪಶ್ಚಿಮಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಸರ್ಕಾರದ ಉದ್ದೇಶಿತ ಎಲಿವೇಟೆಡ್ ಕಾರಿಡಾರ್ ಯೋಜನೆ ವಿರುದ್ಧ ನಗರದ ನಾಗರೀಕ ಸಂಘಟನೆಗಳು ಭುಗಿಲೆದ್ದಿದೆ.
ಎಲಿವೇಟೆಡ್ ಕಾರಿಡಾರ್ ಯೋಜನೆ ಪ್ರಸ್ತಾಪದ ಆರಂಭದಿಂದಲೂ ಬೆಂಗಳೂರಿನ ವಿವಿಧ ನಾಗರಿಕ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿವೆ. ಸರ್ಕಾರ ಇದನ್ನು ಕಡೆಗಣಿಸಿ ಯೋಜನೆ ಪ್ರಾರಂಭಿಸಿರುವುದನ್ನು ಖಂಡಿಸಿ 50ಕ್ಕೂ ಹೆಚ್ಚು ನಾಗರಿಕ ಸಂಘಟನೆಗಳು ನಗರದ ಮೌರ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ಸೈಕ್ಲಿಸ್ಟ್ ಗಳ ಗುಂಪು ಸೇರಿಂದತೆ ಹಲವು ನಾಗರಿಕ ಸಂಘಟನೆಯ ಸದಸ್ಯರು ರೇಸ್ ಕೋರ್ಸ್ ರಸ್ತೆಯ ಗಾಂಧಿ ಪ್ರತಿಮೆ ಬಳಿ ನೆರೆದು ಎಲಿವೇಟೆಡ್ ಕಾರಿಡಾರ್ ರದ್ದು ಕೋರಿ ಪ್ರತಿಭಟನೆ ಮುಂದುವರೆಸಿದ್ದಾರೆ.
ನಮಗೆ ಉತ್ತಮ ಬಸ್ ಸಂಪರ್ಕ ನೀಡಿ, ಉತ್ತಮ ಪಾದಚಾರಿ ಮಾರ್ಗ ನೀಡಿ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಮೆಟ್ರೋ ಯೋಜನೆಯನ್ನು ಇನ್ನಷ್ಟು ವಿಸ್ತರಿಸಿ ನಂತರವೂ ಅವಶ್ಯಕತೆ ಕಂಡು ಬಂದರೆ ಎಲಿವೇಟೆಡ್ ಕಾರಿಡಾರ್ ಬಗ್ಗೆ ಚರ್ಚಿಸೋಣ ಎಂದು ತಮ್ಮ ಆಗ್ರಹವನ್ನು ಮುಂದಿಟ್ಟರು.
ಹಸಿರು ನಾಶ ಖಂಡಿಸಿ ಸಹಿ ಸಂಗ್ರಹ
ಎಲಿವೇಟೆಡ್ ಕಾರಿಡಾರ್ ನಿಂದಾಗಿ 3816ಮರಗಳ ಹನನವಾಗುತ್ತದೆ ಹಾಗೂ ಕಾರಿಡಾರ್ ನಿರ್ಮಾಣಕ್ಕೆ ಅಡ್ಡಿಯಾಗುವ 2000 ಮರಗಳ ಭಾಗಗಳನ್ನು ಕಡಿಯಲಾಗುತ್ತದೆ. ಅಲ್ಲದೆ ಕಬ್ಬನ್ ಪಾರ್ಕ್ ನ ಒಂದು ಭಾಗದ ಹಸಿರೂ ಸಹ ನಾಶವಾಗುತ್ತದೆ. ಇದು ವಾಯು ಮಾಲಿನ್ಯವನ್ನು ಇನ್ನಷ್ಟು ಹೆಚ್ಚು ಮಾಡುತ್ತದೆ ಎಂದು ಆರೋಪಿಸಿದ ಸಂಘಟನೆಗಳು ಈ ಯೋಜನೆಯನ್ನು ಖಂಡಿಸಿ ಆನ್ ಲೈನ್ ಸಹಿ ಅಭಿಯಾನ ನಡಸಿದ್ದು ಅಂದಾಜು ಒಂದು ಲಕ್ಷ ಸಹಿಯನ್ನು ಸಂಗ್ರಹಿಸಲಾಗಿದೆ.
ಎಲೆವೇಟೆಡ್ ಕಾರಿಡಾರ್ ವಿರುದ್ಧ ನಾಗರಿಕ ಆಕ್ರೋಶ
50ಕ್ಕೂ ಹೆಚ್ಚು ನಾಗರಿಕ ಸಂಘಟನೆಗಳು ನಗರದ ಮೌರ್ಯ ವೃತ್ತದ ಬಳಿ ಪ್ರತಿಭಟನೆ
