ಬ್ರೇಕಿಂಗ್ ಸುದ್ದಿ

ಕಲಬುರಗಿ ಆಕ್ರೋಶ: ಯಡಿಯೂರಪ್ಪಗೆ ತಿರುಗುಬಾಣವಾಯ್ತು ಆಪರೇಷನ್ ಕಮಲ!

ಕೆ ಬಿ ಶಾಣಪ್ಪ ಅವರಂತಹ ಹಿರಿಯ ನಾಯಕರೇ ಬಿಜೆಪಿಯ ಆಪರೇಷನ್ ಕಮಲದ ವಿರುದ್ಧ ಕೆಂಡಕಾರಿರುವುದು ಖಂಡಿತವಾಗಿಯೂ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಭಾರೀ ಮುಜುಗರ ತಂದೊಡ್ದಿದೆ. ಈಗಾಗಲೇ ಆಪರೇಷನ್ ಆಡಿಯೋ ಹಗರಣ(ಆಡಿಯೋರಪ್ಪ ಪ್ರಕರಣ), ಬಾಲಾಕೋಟ್ ದಾಳಿ ಬಿಜೆಪಿಗೆ 22 ಸ್ಥಾನ ಬರುತ್ತದೆ ಎಂಬ ಹೇಳಿಕೆ ಹಾಗೂ ಇತ್ತೀಚಿಗೆ ಶೋಭಾ ಕರಂದ್ಲಾಜೆ ಅವರೊಂದಿಗೆ ಜೊತೆಯಾಗಿ ಶೃಂಗೇರಿಯಲ್ಲಿ ಪೂಜೆ ಸಲ್ಲಿಸಿದ ಘಟನೆಗಳು ಬಿಜೆಪಿಗೆ ಸಾಕಷ್ಟು ಮುಜುಗರ ತಂದಿವೆ. ಅದರ ಬೆನ್ನಲ್ಲೇ ಇದೀಗ ಕಲಬುರ್ಗಿ ಬೆಳವಣಿಗೆ ಯಡಿಯೂರಪ್ಪ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿದೆ.

leave a reply