ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಖಂಡನೆ, ಟೀಕೆ, ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಫೇಸ್ಬುಕ್ ಧ್ರುವ್ ರಾಥೀ ಮೇಲೆ ವಿಧಿಸಿದ್ದ ನಿಷೇಧ ಹಿಂಪಡೆದಿದೆ.
ಸಾಮಾಜಿಕ ಮಾಧ್ಯಮದ ಯುವ ತಾರೆ ಧ್ರುವ್ ರಾಥೀಯ ಫೇಸ್ಬುಕ್ ಖಾತೆಯನ್ನು 30 ದಿನಗಳ ಕಾಲ ನಿಷೇಧಿಸಿದ್ದ ಫೇಸ್ಬುಕ್ ತನ್ನ ತಪ್ಪನ್ನು ಒಪ್ಪಿಕೊಂಡು ನಿಷೇಧ ರದ್ದುಪಡಿಸಿದೆ. ಕಣ್ತಪ್ಪಿನಿಂದ ನಿಮ್ಮ ಪೋಸ್ಟ್ ಮೇಲೆ ನಿರ್ಬಂಧ ವಿಧಿಸಿದ್ದೇವೆ ಎನಿಸುತ್ತದೆ, ಇದಕ್ಕಾಗಿ ವಿಷಾಧಿಸುತ್ತೇವೆ ಎಂಬ ಒಕ್ಕಣೆಯೊಂದಿಗೆ ಪುನಃ ಧ್ರುವ್ ರಾಥೀ ಖಾತೆಯನ್ನು ಬಳಕೆಗೆ ಮುಕ್ತಗೊಳಿಸಿದೆ.
ಫೇಸ್ಬುಕ್ ಧ್ರುವ್ ರಾಥೀ ಮೇಲೆ ನಿಷೇಧ ವಿಧಿಸುತ್ತಿದ್ದಂತೆಯೇ ಟ್ವಿಟರ್ ಮತ್ತು ಫೇಸ್ಬುಕ್ಗಳಲ್ಲಿ ಸಾವಿರಾರು ನೆಟ್ಟಿಗರು ಈ ಕುರಿತು ಆಘಾತ, ಖಂಡನೆ ವ್ಯಕ್ತಪಡಿಸತೊಡಗಿದರು. ಇದರ ಕಾವು ಹೆಚ್ಚಾಗುತ್ತಿದ್ದಂತೆ ಫೇಸ್ಬುಕ್ ಎಚ್ಚೆತ್ತುಕೊಂಡಿದೆ.
Thanks a lot for your support guys! Just opened Facebook and they have restored my account and removed the block.
Also, thank you @facebook for the prompt action and admitting the mistake! 🙏 pic.twitter.com/yueIuzqxTv
— Dhruv Rathee (@dhruv_rathee) March 18, 2019
ಫೇಸ್ಬುಕ್ಕಿನ ತಪ್ಪೊಪ್ಪಿಗೆ ಹೊರಬರುತ್ತಲೂ ಧ್ರುವ್ ರಾಥಿಯ ಅಕೌಂಟ್ ನಿರ್ಬಂಧಗೊಂಡಾಗ ಸಂಭ್ರಮದಲ್ಲಿ ತೊಡಗಿದ್ದ ಮೋದಿ ‘ಭಕ್ತ’ರ ಮುಖ ಕಪ್ಪಿಟ್ಟಿದೆ.