ಪ್ರಜಾತಂತ್ರ ಪ್ರಿಯರಿಗೆ ಇದು ನಿಜಕ್ಕೂ ಆಘಾತಕಾರಿ ಸುದ್ದಿ. 2019ರ ಲೋಕಸಭಾ ಚುನಾವಣೆ ಇನ್ನು ಒಂದು ತಿಂಗಳು ಬಾಕಿ ಇರುವಾಗ ಸಾಮಾಜಿಕ ಮಾಧ್ಯಮ ತಾಣದ ಮೂಲಕ ಅತ್ಯಂತ ಸೃಜನಶೀಲ ರಾಜಕೀಯ-ಸಾಮಾಜಿಕ ವಿಮರ್ಶೆಯಲ್ಲಿ ತೊಡಗಿರುವ ತರುಣ ಕಾರ್ಯಕರ್ತ, ಪ್ರಖ್ಯಾತ ಯೂಟ್ಯೂಬ್ ನಿರೂಪಕ ಧ್ರುವ್ ರಾಥಿಯ ಫೇಸ್ಬುಕ್ ಖಾತೆಯನ್ನು 30 ದಿನಗಳ ವರೆಗೆ ನಿರ್ಬಂಧಿಸಿದೆ.
ಇದನ್ನು ಸ್ವತಃ ಧ್ರುವ್ ರಾಥಿ ದೃಢಪಡಿಸಿದ್ದಾರೆ.
“ಇಂದು ಫೇಸ್ ಬುಕ್ ನನ್ನ ಅಕೌಂಟನ್ನು 30 ದಿನಗಳ ಕಾಲ ನಿಷೇಧಿಸಿದೆ. ಚುನಾವಣೆಗೆ 30 ದಿನ ಬಾಕಿ ಇರುವುದು ಹಾಗೂ ದೇಶದಲ್ಲಿಯೇ ಅತಿಹೆಚ್ಚು ಎಂಗೇಜ್ ಮೆಂಟ್ ಹೊಂದಿರುವ ಫೇಸ್ ಬುಕ್ ಪುಟಗಳಲ್ಲಿ ನನ್ನದೂ ಒಂದಾಗಿರುವುದು, ಮೋದಿಯವರ ಅಧಿಕೃತ ಪುಟವನ್ನೂ ಒಳಗೊಂಡಂತೆ ಬಿಜೆಪಿಯ ಮುಖ್ಯ ಪುಟುಗಳೊಂದಿಗೆ ಪೈಪೋಟಿ ನೀಡಿರುವುದು ಎಂತಹ ಕಾಕತಾಳೀಯ!
ಎಂದು ಧ್ರುವ್ ರಾಥೀ ಟ್ವೀಟ್ ಮೂಲಕ ತಿಳಿಸಿದ್ದಾರೆ.
Today, @Facebook banned my account for 30 days.
What a coincidence that elections are 30 days away also and what a coincidence that my engagement rates are one of the biggest in India, competing with BJP’s top propganda pages, including Modi’s official page. pic.twitter.com/aVECxhT4NE
— Dhruv Rathee (@dhruv_rathee) March 17, 2019
ಮಾರ್ಚ್ 15ರಂದು ‘ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರನ ಆತ್ಮಚರಿತ್ರೆಯಿಂದ ಕೆಲವು ಉಲ್ಲೇಖಗಳನ್ನು ಹಾಕಿದ್ದೇ ಧ್ರುವ್ ರಾಥಿಯನ್ನು ನಿಷೇಧಿಸಲು ಕಾರಣ ಎಂಬುದು ಫೇಸ್ಬುಕ್ ಸಮರ್ಥನೆ. ಆದರೆ ಯಾರದೇ ವ್ಯಕ್ತಿಯ ಚರಿತ್ರೆಯಿಂದ ಉದಾಹರಣೆ ನೀಡಿ ಜನರನ್ನು ಜಾಗೃತಗೊಳಿಸುವುದು ಅಪರಾಧ ಹೇಗಾಗುತ್ತದೆ ಎಂಬುದು ಧ್ರುವ್ ರಾಥೀ ಪ್ರಶ್ನೆ.
ನಾನು ಫೇಸ್ಬುಕ್ ವಿಧಿಸುವ ಶಿಸ್ತು ಮೀರುವ ಒಂದೇ ಒಂದು ನಿಂದನೆಯ ಪದ ಬಳಸಿಲ್ಲ, ಒಂದೇ ಅಶ್ಲೀಲ ಪದ ಬಳಸಿಲ್ಲ ಆದರೂ ಈ ನಿಷೇಧ ಹೇರಿರುವುದು ಏಕೆ? ಎಂದು ಅವರು ಕೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಅನುಯಾಯಿಗಳನ್ನು ಹೊಂದಿರುವ ಧ್ರುವ್ ರಾಥೀ ತಮ್ಮ ಸಮರ್ಥ ವಿಶ್ಲೇಶಣೆಗಳಿಂದ, ಅಂಕಿ ಅಂಶಗಳನ್ನಿಟ್ಟು ವಿಡಿಯೋ ಮೂಲಕ ಸಂವಾದ ನಡೆಸುವ ಕ್ರಮದಿಂದ ಅತ್ಯಂತ ಹೆಸರುವಾಸಿಯಾಗಿದ್ದಾರೆ.
ಧ್ರುವ್ ರಾಥಿಯ ಫೇಸ್ಬುಕ್ ಅಕೌಂಟ್ ನಿರ್ಬಂಧಿಸಿರುವ ಕ್ರಮದ ವಿರುದ್ಧ ವ್ಯಾಪಕ ಖಂಡನೆ, ಆಕ್ರೋಶ ಕೇಳಿ ಬರುತ್ತಿದೆ. ಇದು ಫೇಸ್ ಬುಕ್ ಆಡಳಿತ ಮಂಡಳಿ ಬಿಜೆಪಿಯೊಂದಿಗೆ ಮಾಡಿಕೊಂಡಿರುವ ಹೊಂದಾಣಿಕೆಯೆ ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ. ಅತ್ತ ಬಿಜೆಪಿ ಐಟಿ ಸೆಲ್ ಪಾಳಯದಲ್ಲಿ ಸಂತೋಷ, ಸಂಭ್ರಮ ವ್ಯಕ್ತವಾಗುತ್ತಿದೆ.