ಮುಂಬೈ: ರಸ್ತೆಯ ಒಳಚಂರಂಡಿ (ಮ್ಯಾನ್ ಹೋಲ್) ಸ್ವಚ್ಛ ಮಾಡುತ್ತಿದ್ದ ಪೌರ ಕಾರ್ಮಿಕನೊಬ್ಬ ಗುಂಡಿಯೊಳಗಿನ ವಿಷಾನಿಲ ಮೂಗಿಗೆ ಬಡಿದು, ಶ್ವಾಸಕೋಶಕ್ಕೆ ನುಗ್ಗಿದ ಪರಿಣಾಮವಾಗಿ ಮೃತಪಟ್ಟ ದಾರುಣ ಘಟನೆ ಮುಂಬೈ ಗಿರ್ಗೌನ್ ನಾನಾ ಚೌಕ್ ನ ಗ್ರಾಂಟ್ ರಸ್ತೆಯಲ್ಲಿ ಭಾನುವಾರ ನಡೆದಿದೆ.
ಒಳಚರಂಡಿಯ ಪೈಪ್ ಲೈನ್ ಅನ್ನು ದುರಸ್ಥಿ ಮಾಡುವ ವೇಳೆ ವಿಷ ಗಾಳಿ ಸೇವಿಸಿ ಜ್ಞಾನ ತಪ್ಪಿದ ಕಾರ್ಮಿಕ ಚರಂಡಿ ಒಳಗೆ ಬಿದ್ದು ಮೃತಪಟ್ಟಿದ್ದು, ಇದೇ ವೇಳೆ ಇನ್ನಿಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.
ಮೃತ ಕಾರ್ಮಿಕ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಕಾರ್ಮಿಕ ರಾಕೇಶ್ ನಿಜಾಬ್ (45) ಎಂದು ಗುರುತಿಸಲಾಗಿದ್ದು, ಬಾಲಸಾಹೇಬ್ , ಉಮೇಶ್ ಪವಾರ್, ಸುರೇಶ್ ಪವಾರ್ ಮತ್ತು ಶಾಂತಾರಾಂ ಭಕ್ತೆ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಗಾಮ್ದೇವಿ ಪೊಲೀಸ್ ಠಾಣೆಯಲ್ಲಿ ಈ ಸಾವಿನ ಪ್ರಕರಣ ದಾಕಲಾಗಿದೆ ಹಾಗೂ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಒಳಚರಂಡಿ ದುರಸ್ತಿ ವೇಳೆ ಪ್ರಜ್ಞಾಹೀನರಾಗಿ ಬಿದ್ದು ಕಾರ್ಮಿಕ ಅಸುನೀಗಿದ್ದಾರೆ. ಇನ್ನೂ ನಾಲ್ವರು ಕಾರ್ಮಿಕರನ್ನು ಒಳಚರಂಡಿಯಿಂದ ಹೊರತೆಗೆದು ಬಿವೈಎಲ್ ನಾಯಿರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುಂಬೈ ಅಗ್ನಿಶಾಮಕ ಇಲಾಖೆಯ ವಕ್ತಾರ ತಾನಾಜಿ ಕಾಂಬ್ಳೆ ತಿಳಿಸಿದ್ದಾರೆ.
ರಾಕೇಶ್ ನಿಜಾಬ್ ಮೃತದೇಹದ ಮರಣೋತ್ತರ ಪರೀಕ್ಷೆನಡೆಸಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಇದೇ ರೀತಿ ಮ್ಯಾನ್ ಹೋಲ್ ಸ್ವಚ್ಛಗೊಳಿಸುವಾಗ ಕಳೆದ ವರ್ಷ 11 ಪೌರ ಕಾರ್ಮಿಕರು ಸಾವಿಗೀಡಾಗಿದ್ದರು.
ಮ್ಯಾನ್ ಹೋಲ್ ಸ್ವಚ್ಛಗೊಳಿಸುತ್ತಿದ್ದ ಪೌರ ಕಾರ್ಮಿಕನ ಸಾವು
ಒಳಚರಂಡಿಯ ಪೈಪ್ ಲೈನ್ ಅನ್ನು ದುರಸ್ಥಿ ಮಾಡುವ ವೇಳೆ ವಿಷ ಗಾಳಿ ಸೇವಿಸಿ ಜ್ಞಾನ ತಪ್ಪಿದ ಕಾರ್ಮಿಕ ಚರಂಡಿ ಒಳಗೆ ಬಿದ್ದು ಮೃತಪಟ್ಟಿದ್ದು, ಇದೇ ವೇಳೆ ಇನ್ನಿಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.
