“ಸೋಷಲ್ ಮೀಡಿಯಾದಲ್ಲಿ ಇರುವ ರಾಹುಲ್ ಗಾಂಧಿಗೂ ಇವತ್ತು ನಾವು ಸಂವಾದದಲ್ಲಿ ಕಣ್ಣಾರೆ ನೋಡಿದ ರಾಹುಲ್ ಗಾಂಧಿಗೂ ತುಂಬಾನೇ ವ್ಯತ್ಯಾಸವಿದೆ. ಅವರ ಮಾತಿನಲ್ಲಿ ಇದ್ದಂತಹ ಪ್ರಬುದ್ಧತೆ ನೋಡಿ ನಿಜಕ್ಕೂ ಆಶ್ಚರ್ಯ ಆಯಿತು. ಸೋಷಲ್ ಮೀಡಿಯಾದಲ್ಲಿ ರಾಹುಲ್ ಗಾಂಧಿ unmatured boy ಎಂದು ಬಿಂಬಿಸಲಾಗಿದೆ. ಆದರೆ ವಾಸ್ತವದಲ್ಲಿ ಅವರು matured guy” ಎಂದು ಅಭಿಪ್ರಾಯ ಪಟ್ಟಿದ್ದು ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನ ಒಬ್ಬ ಟೆಕ್ಕಿ ಯುವತಿ.
ಸೋಮವಾರ ಸಂಜೆ ರಾಹುಲ್ ಗಾಂಧಿ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕಿನಲ್ಲಿ ನಡೆಸಿದ ಸಂವಾದ ಕಾರ್ಯುಕ್ರಮದ ನಂತರ ಹಲವಾರು ಟೆಕ್ಕಿಗಳು ಈ ಬಗೆಯ ಅಭಿಪ್ರಾಯ ನೀಡಿದ್ದಾರೆ.
ಮಾಧ್ಯಮಗಳಿಗೆ ನೀಡಿದ ಅಭಿಪ್ರಾಯದಲ್ಲಿ ಅದೇ ಯುವತಿ ನೆನ್ನೆ ರಾಹುಲ್ ಗಾಂಧಿಗೆ ಕೆಲವರು ಅವಮಾನ ಮಾಡಿದ್ದರ ಕುರಿತು ಬೇಸರ ವ್ಯಕ್ತ ಪಡಿಸಿದರು. “ಮೋದಿ, ರಾಹುಲ್ ಅಥವಾ ಯಾರೇ ಪ್ರಧಾನಿ ಆಗುವುದನ್ನು ಜನರು ತೀರ್ಮಾನ ಮಾಡುತ್ತಾರೆ. ನಾವು ಇಲ್ಲಿ ಮೋದಿ, ರಾಹುಲ್ ಎಂದಾಕ್ಷಣ ಆಗುವುದಿಲ್ಲ. ಇಲ್ಲಿ ಮಾತಾಡಬೇಕು ಎಂದು ರಾಹುಲ್ ಗಾಂಧಿ ಬಂದಿರುವಾಗ ಮೊದಲು ನಾವು ಅವರನ್ನು ಗೌರವಿಸಬೇಕು. ಅವರು ಏನು ಹೇಳಿದ್ದಾರೆ ಎನ್ನುವುದನ್ನು ಕೇಳಿಸಿಕೊಳ್ಳಬೇಕು. ಆದರೆ ಇಲ್ಲಿ ಕೆಲವರು ಅವರಿಗೆ ಅಪಮಾನವಾಗುವಂತೆ ದುರ್ವರ್ತನೆ ತೋರಿದ್ದು ಬಹಳ ಬೇಸರದ ವಿಷಯ” ಎಂದವರು ಹೇಳಿದ್ದಾರೆ.
ರಾಹುಲ್ ಗಾಂಧಿ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕಿನಲ್ಲಿ ಯುವ ಉದ್ಯಮಿಗಳಜೊತೆ “ಉದ್ಯಮಶೀಲತೆ”ಯ (entrepreneurship) ಕುರಿತು ಮುಕ್ತ ಸಂವಾದ ನಡೆಸಿದರು. ಈ ಸಂವಾದಕ್ಕೆ ರಾಹುಲ್ ಗಾಂಧಿ ಬರುವ ಮೊದಲು ಆವರಣದಲ್ಲಿ ಕೆಲವು ಮೋದಿ ಭಕ್ತ ಟೆಕ್ಕಿಗಳು “ಮೋದಿ,ಮೋದಿ,ಮೋದಿ, ವಂದೇ ಮಾತರಂ..” ಇತ್ಯಾದಿ ಘೋಷಣೆಗಳನ್ನು ಕೂಗಿದ್ದರು. ಈ ಘಟನೆ ನಂತರ ಮೋದಿ ಮತ್ತು ರಾಹುಲ್ ಬೆಂಬಲಿಗರ ನಡುವೆ ಘರ್ಷಣೆಗೂ ಕಾರಣವಾಗಿತ್ತು.
ರಾಹುಲ್ ಗಾಂಧಿಯವರು ನಡೆಸಿದ ಸಂವಾದದ ನಂತರ ಸಂದರ್ಶನದ ಕುರಿತು ಹಾಗೂ ಅಲ್ಲಿ ನಡೆದ ಗದ್ದಲದ ಕುರಿತು ಹಲವು ರೀತಿಯ ಅಭಪ್ರಾಯಗಳು ವ್ಯಕ್ತವಾಗಿವೆ.
ನಮ್ಮ ಕ್ಯಾಂಪಸ್ ಗೆ ಯಾರು ಬಂದರೂ, ಮೋದಿ ಬಂದರೂ ಅವರ ಮಾತನ್ನು ನಾವು ಕೇಳುತ್ತೇವೆ. ದಿನದ ಕೊನೆಯಲ್ಲಿ ನಾವು ತೀರ್ಮಾನ ಮಾಡುತ್ತೇವೆ, ಯಾರಿಗೆ ಮತ ಚಲಾಯಿಸಬೇಕು ಯಾರಿಗೆ ಚಲಾಯಿಸಬಾರದು ಎಂದು. ಆದರೆ ರಾಹುಲ್ ಗಾಂಧಿಯವರಿಗೆ ಅವಮಾನಿಸಿದ್ದು ಎಲ್ಲರಿಗೂ ಬೇಜಾರಾಗಿದೆ. ಯಾರು ಏನು ಹೇಳಿದ್ದಾರೆ ಎಂದು ಕೇಳೋಣ, ಮೋದಿ ಎಷ್ಟೊಂದು ಸುಳ್ಳು ಹೇಳಿದ್ದಾರೆ, 15 ಲಕ್ಷ ಯಾರ ಅಕೌಂಟಿಗೂ ಬಂದಿಲ್ಲ, ರೈತರ ಸಾಲ ಮನ್ನಾ ಮಾಡಿಲ್ಲ, ಚೌಕಿದಾರ್ ಎಂದರು, ಪುಲ್ವಾಮಾ ವಿಷಯದಲ್ಲಿ ಯಡಿಯೂರಪ್ಪ ಅವರೇ ನಮಗೆ 22 ಸೀಟು ಬರುತ್ತದೆ ಎಂದು ಹೇಳಿದ್ದಾರೆ
ನೆನ್ನೆ ರಾಹುಲ್ ಗಾಂಧಿ ನಡೆಸಿದ ಸಂವಾದ ಕಾರ್ಯಕ್ರಮಕ್ಕೆ ಮೋದಿ ಪರವಾದ ಘೋಷಣೆ ಕೂಗಿ ಗದ್ದಲವೆಬ್ಬಿಸಿದ ಕೆಲವು ಕಿಡಿಗೇಡಿಗಳು ಹಿಂಸೆ, ದೊಂಬಿ ನಡೆಸಬಹುದೆಂದು ಪೊಲೀಸರು ವಶಕ್ಕೆ ಪಡೆದಿದ್ದರು. ಇದರ ವಿರುದ್ಧ ಅಮಿತ್ ಷಾ ಮತ್ತು ಹಲವು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನು ಉಲ್ಲೇಖಿಸಿ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ, ಅಮಿತ್ ಷಾ ತಮ್ಮ ಕಾರ್ಯಕರ್ತರಿಗೆ ಮೊದಲು ಸಭ್ಯತೆ ಕಲಿಸಬೇಕು ಎಂದು ಇಂದು ನಡೆಸ ಕಾಂಗ್ರೆಸ್-ಜೆಡಿಎಸ್ ಸುದ್ದಿಗೋಷ್ಟಿಯಲ್ಲಿ ಟಾಂಗ್ ಕೊಟ್ಟಿದ್ದಾರೆ.
-ಟ್ರೂಥ್ ಇಂಡಿಯಾ ಕನ್ನಡ
ವಿಡಿಯೋ ವೀಕ್ಷಿಸಿ:
Good