ಪಂಜಾಬ್ ನ್ಯಾಶನಲ್ ಬ್ಯಾಂಕ್ ವಂಚನೆ ಹಗರಣದಲ್ಲಿ ಭಾರತದಿಂದ ಪರಾರಿಯಾಗಿ ದೇಶಭ್ರಷ್ಟನಾಗಿದ್ದ ವಜ್ರವ್ಯಾಪಾರಿ ನೀರವ್ ಮೋದಿಯನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ. ಸಧ್ಯದಲ್ಲಿಯೇ ನ್ಯಾಯಲಯಕ್ಕೆ ಹಾಜರುಪಡಿಸಲಾಗುವುದು.
ಮಾರ್ಚ್ 18 ರಂದು ನೀರವ್ ಮೋದಿ ಬಂಧನಕ್ಕೆ ವಾರಂಟ್ ಹೊರಡಿಸಿ ಲಂಡನ್ ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯ ಆದೇಶ ಹೊರಡಿಸಿತ್ತು.
ಭಾರತದ ಜನಸಾಮಾನ್ಯರ ಬರೋಬ್ಬರಿ 14,500 ಕೋಟಿ ರೂಪಾಯಿಗಳನ್ನು ಕೊಳ್ಳೆ ಹೊಡೆದು, “ಚೌಕಿದಾರ” ಇದ್ದಂತೆಯೇ ದೇಶದಿಂದ ಅನಾಯಾಸವಾಗಿ ಓಡಿಹೋದ ವಜ್ರವ್ಯಾಪಾರಿ ನೀರವ್ ಮೋದಿ ಇತ್ತೀಚೆಗೆ ಲಂಡನ್ ನಗರದ ರಸ್ತೆಯಲ್ಲಿ ನೀರವ್ ಮೋದಿ ಟೆಲಿಗ್ರಾಫ್ ಪತ್ರಕರ್ತರ ಕಣ್ಣಿಗೆ ಕಾಣಿಸಿಕೊಂಡಿದ್ದು ವ್ಯಾಪಕ ಸುದ್ದಿಯಾಗಿತ್ತು. ಈ ಪ್ರಕರಣದ ನಂತರ ಮೋದಿಯನ್ನು ಕರೆಸಿಕೊಳ್ಳದ ಮೋದಿ ಸರ್ಕಾರದ ಅಸಮರ್ಥತೆ ಕುರಿತು ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದವು
ಭಾರತದಲ್ಲಿ ಅಕ್ರಮವೆಸಗಿ ವಿದೇಶಕ್ಕೆ ಪರಾರಿಯಾಗಿದ್ದ ನೀರವ್ ಮೋದಿಯನ್ನು ಸ್ವದೇಶಕ್ಕೆ ಹಸ್ತಾಂತರಿಸಬೇಕು ಎಂದು ಭಾರತದ ಜಾರಿ ನಿರ್ದೇಶನಾಲಯ ಲಂಡನ್ ಸರ್ಕಾರಕ್ಕೆ ಮಾಡಿದ್ದ ಮನವಿ ಮಾಡಿಕೊಂಡಿತ್ತು.
ಈಗ ನೀರವ್ ಮೋದಿ ಬಂಧನವಾಗಿರುವ ಹಿನ್ನೆಲೆಯಲ್ಲಿ ಅವನನ್ನು ಭಾರತಕ್ಕೆ ಕರೆಸಿಕೊಳ್ಳುವ ನಿಟ್ಟಿನಲ್ಲಿ ಕಾನೂನು ಪ್ರಕ್ರಿಯೆ ಆರಂಭಗೊಳ್ಳಲಿದೆ.
ಟ್ರೂಥ್ ಇಂಡಿಯಾ ಕನ್ನಡ
ಇದನ್ನೂ ಓದಿ