ಬ್ರೇಕಿಂಗ್ ಸುದ್ದಿ

ಬಿಜೆಪಿ ಮೊದಲ ಪಟ್ಟಿ: ಎಲ್ಲಾ ಹಾಲಿ ಸಂಸದರಿಗೆ ಟಿಕೆಟ್; ಗೆದ್ದ ಯಡಿಯೂರಪ್ಪ ಹಠ!

ಸಂಸದೆ ಶೋಭಾ ಕರಂದ್ಲಾಜೆ, ಶಿವಕುಮಾರ ಉದಾಸಿ, ಪಿ ಸಿ ಗದ್ದಿಗೌಡರ್, ಸುರೇಶ್ ಅಂಗಡಿ, ಜಿ ಎಂ ಸಿದ್ದೇಶ್ವರ, ಜಿ ಎಸ್ ಬಸವರಾಜು ಹಾಗೂ ಪುತ್ರ ಬಿ ವೈ ರಾಘವೇಂದ್ರ ಸೇರಿದಂತೆ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಅದೇ ಹೊತ್ತಿಗೆ, ಶೋಭಾ ಸೇರಿದಂತೆ ಕೆಲವರಿಗೆ ಟಿಕೆಟ್ ತಪ್ಪಿಸಲು ಯಡಿಯೂರಪ್ಪ ವಿರೋಧಿ ಬಣ ನಡೆಸಿದ ತೆರೆಮರೆಯ ಯತ್ನಗಳಿಗೆ ಹಿನ್ನೆಡೆಯಾಗಿದೆ. ಯಡಿಯೂರಪ್ಪ ಅವರ ಹಠ ಗೆದ್ದಿದೆ.

leave a reply