ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ತಾವು ‘ಚೌಕಿದಾರ್” ಎಂದು ತಮ್ಮ ಹೆಸರಿನ ಮೊದಲು ಬರೆದುಕೊಳ್ಳಲು ನಿರಾಕರಿಸಿದ್ದಾರೆ. ತಮಿಳು ಸುದ್ದಿವಾಹಿನಿಯೊಂದಕ್ಕೆ ಭಾನುವಾರ ನೀಡಿರುವ ಸಂದರ್ಶನದಲ್ಲಿ ಅವರು, “ನಾನು ಬ್ರಾಹ್ಮಣ, ಬ್ರಾಹ್ಮಣರು ಚೌಕಿದಾರರಾಗಲು ಸಾಧ್ಯವಿಲ್ಲ, ನಾನು ಚೌಕಿದಾರರಿಗೆ ಹೀಗೆ ಮಾಡಿ ಎಂದು ಆದೇಶ ಕೊಡುತ್ತೇನೆ. ನೇಮಕಗೊಂಡ ಚೌಕಿದಾರರು ಬಯಸುವುದು ಅದನ್ನೇ. ಹೀಗಾಗಿ ನಾನು ಚೌಕಿದಾರ್ ಆಗಲು ಸಾಧ್ಯವಿಲ್ಲ” ಎಂದು ಹೇಳಿರುವ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
Frank ஆ பேசராப்ல. Wish he campaigns for BJP in TN 😂 pic.twitter.com/TkQCqbX66S
— Dhanapal (@balu_twits) March 24, 2019
ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ “ಮೈ ಭೀ ಚೌಕೀದಾರ್” (ನಾನೂ ಕೂಡ ಚೌಕಿದಾರ) ಎಂಬ ಟ್ವಿಟರ್ ಅಭಿಯಾನಕ್ಕೆ ಚಾಲನೆ ನೀಡಿದ್ದರು. ದೇಶದಾದ್ಯಂತ ಬಿಜೆಪಿಯ ನಾಯಕರ ಟ್ವಿಟರ್ ಹೆಸರುಗಳು ಚೌಕೀದಾರ್ ಅಮಿತ್ ಷಾ, ಚೌಕೀದಾರ್, ಯಡಿಯೂರಪ್ಪ, ಚೌಕೀದಾರ್ ಶೋಭಾ ಕರಂದ್ಲಾಜೆ, ಚೌಕೀದಾರ್ ಸಿ.ಟಿ.ರವಿ, ಚೌಕಿದಾರ್ ಸದಾನಂದಗೌಡ, ಇತ್ಯಾದಿಯಾಗಿ ಬದಲಾಗಿದ್ದವು.
ರಫೇಲ್ ಹಗರಣದಲ್ಲಿ ಮೋದಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ “ಚೌಕಿದಾರ್ ಚೋರ್ ಹೇ” ಎಂಬ ಘೋಷಣೆಯನ್ನು ಜನಪ್ರಿಯಗೊಳಿಸುತ್ತಿದ್ದಂತೆ ಮೋದಿ ತಮ್ಮೆಲ್ಲಾ ಬೆಂಬಲಿಗರನ್ನೂ “ಚೌಕೀದಾರ್ “ಎಂದು ಕರೆದುಕೊಳ್ಳುವಂತೆ ಮಾಡುವ ತಂತ್ರಗಾರಿಕೆ ಪ್ರದರ್ಶಿಸಿದ್ದರು.
ಈ ಕುರಿತು ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಅವರನ್ನು ಸುದ್ದಿ ವಾಹಿನಿಯ ಸಂದರ್ಶನದ ನಡುವೆ ಕೇಳಿದಾಗ ಅವರು ತಾವು ಬ್ರಾಹ್ಮಣರಾದ ಕಾರಣದಿಂದ “ಚೌಕೀದಾರ್ “ ಆಗಲು ಸಾಧ್ಯವಿಲ್ಲ ಎಂದಿರುವುದು ವಿವಾದವಾಗಿದೆ.
Gentleman answer.