‘ತುಮಕೂರಿನ ಕಾಂಗ್ರೆಸ್ ರ್ಯಾಲಿಯಲ್ಲಿ ಪಾಕಿಸ್ತಾನದ ಬಾವುಟ ಹಾರಾಡಿದೆ’ ಎಂದು ಹೇಳುವ ವಿಡೀಯೋ ಒಂದನ್ನು ಬಿಜೆಪಿಯ ಐಟಿ ಸೆಲ್ ವೈರಲ್ ಮಾಡುತ್ತಿದೆ. ಈ ವಿಡಿಯೋವನ್ನು ಮೇಲ್ನೋಟಕ್ಕೆ ನೋಡಿದರೂ ಸಹ ಗೋಚರಿಸುವ ವಿಷಯ ಏನೆಂದರೆ ಆ ರ್ಯಾಲಿಯಲ್ಲಿ ಹಾರಾಡುತ್ತಿರುವುದು ಪಾಕಿಸ್ತಾನದ ಧ್ವಜ ಅಲ್ಲ. ಬದಲಿಗೆ ಇಸ್ಲಾಂ ಧರ್ಮೀಯರ ಧಾರ್ಮಿಕ ಧ್ವಜ.
ಆ ರ್ಯಾಲಿಯಲ್ಲಿ (ಅದು ತುಮಕೂರಿನದೇ ಅಥವಾ ಬೇರೆಯ ಕಡೆಯದೇ ಎಂಬುದು ದೃಢವಾಗಿಲ್ಲ) ಕಾಂಗ್ರೆಸ್ ಬಾವುಟ, ಭಾರತದ ಬಾವುಟಗಳೊಂದಿಗೆ, ಮುಸ್ಲಿಂ ಬೆಂಬಲಿಗನೊಬ್ಬ ಇಸ್ಲಾಂ ಧಾರ್ಮಿಕ ಧ್ವಜವನ್ನೂ ಹಾರಿಸುತ್ತಿರುವುದು ಕಂಡು ಬರುತ್ತದೆ. ಆದರೆ ಅದನ್ನು ಪಾಕಿಸ್ತಾನದ ಧ್ವಜ ಎಂದು ಹೇಳುವ ವಿಡಿಯೋ ಐಟಿ ಸೆಲ್ ನಿಂದ ಬಂದಿದೆ.
“ತುಮಕೂರಿನ ಕಾಂಗ್ರೆಸ್ ನ ರ್ಯಾಲಿಯಲ್ಲಿ ಪಾಕಿಸ್ತಾನದ ಧ್ವಜ ಹಾರಾಡುತ್ತಿದೆ. ಕಾಂಗ್ರೆಸ್ ಗೆ ನಾವು ಓಟು ಕೊಟ್ಟಿದ್ದೇ ಆದರೆ ಹಿಂದೂಸ್ತಾನ ಪಾಕಿಸ್ತಾನವಾಗುತ್ತದೆ” ಎಂದು ಈ ವಿಡಿಯೋದಲ್ಲಿ ಹೇಳುವುದು ಮತದಾರರಿಗೆ ತಪ್ಪು ಸಂದೇಶ ನೀಡುತ್ತಿದೆ
ಪಾಕಿಸ್ತಾನದ ಧ್ವಜಕ್ಕೂ ಇಸ್ಲಾಂ ಧಾರ್ಮಿಕ ಧ್ವಜಕ್ಕೂ ವ್ಯತ್ಯಾಸ ತಿಳಿಯದ, ಅಥವಾ ವ್ಯತ್ಯಾಸ ಗೊತ್ತಿದ್ದರೂ ಬೇಕೆಂದೇ ಮತದಾರರನ್ನು ತಪ್ಪು ದಾರಿಗೆ ಎಳೆಯುವ, ಕೋಮು ದ್ವೇಷ ಹರಡುವ ಉದ್ದೇಶದಿಂದಲೇ ಈ ವಿಡಿಯೋ ಮಾಡಿರಬಹುದು ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ.
ಇಸ್ಲಾಂ ಧ್ವಜ ಮತ್ತು ಪಾಕಿಸ್ತಾನ ಧ್ವಜ ಎರಡರ ಮಧ್ಯೆ ಇರುವ ವ್ಯತ್ಯಾಸವನ್ನು ಈ ಚಿತ್ರದಲ್ಲಿ ಗಮನಿಸಬಹುದು.
