ಪ್ರಧಾನ ಮಂತ್ರಿ ಕೆಲಸ ಒಂದನ್ನು ಬಿಟ್ಟು ಬೇರೆಲ್ಲಾ ರೀತಿ ತಮ್ಮನ್ನು ಬಿಂಬಿಸಿಕೊಳ್ಳುತ್ತಾ ಬಂದಿರುವ ನರೇಂದ್ರ ಮೋದಿ ಈಗ ಹೊಸ ಉದ್ಯೋಗ ಹಿಡಿದಿದ್ದಾರೆ. ಹೌದು ನರೇಂದ್ರ ಮೋಧಿ ಅವರ ಅಧಿಕೃತ ಟ್ವಿಟರ್ ಅಕೌಂಟ್ ಮೂಲಕ ಮೋದಿ ಮಾಡಿದ ಟ್ವೀಟ್ ನೋಡಿದರೆ ಅವರೀಗ ಸೇಲ್ಸ್ ಮನ್!
‘ಮೈ ಭೀ ಚೌಕೀದಾರ್’ “ನಾನೂ ಚೌಕಿದಾರ್” ಅಭಿಯಾನವನ್ನು ಟೀಶರ್ಟುಗಳ ಮೇಲೆ ಮುದ್ರಿಸಿ ಮಾರಾಟ ಮಾಡುತ್ತಿರುವ “ನಮೋ ಮರ್ಕೆಂಡೈಸ್” ಎಂಬ ಆನ್ ಲೈನ್ ವ್ಯಾಪಾರಿ ಸಂಸ್ಥೆಯ ಉತ್ಪನ್ನಗಳನ್ನು ಕೊಳ್ಳಲು ಗ್ರಾಹಕರಿಗೆ ಮೋದಿ ಕೇಳಿಕೊಂಡಿದ್ದಾರೆ.
ನಮೋ ಮರ್ಕೆಂಡೈಸ್ನ ಸಂದೇಶವೊಂದನ್ನು ಹಂಚಿಕೊಂಡು, ಆಕರ್ಷಕ ಮರ್ಕೆಂಡೈಸ್ ನೊಂದಿಗೆ 31ರ ಮೈ ಭೀ ಚೌಕೀದಾರ್ ಕಾರ್ಯಕ್ರಮ ಇನ್ನಷ್ಟು ಉತ್ತಮವಾಗಲಿದೆ. ನೀವು ನಿಮ್ಮ ಮರ್ಕೆಂಡೈಸ್ ಗೆ ಆರ್ಡರ್ ಮಾಡಿದ್ದೀರಾ? ? ಎಂದು ತಾವೂ ಗ್ರಾಹಕರಿಗೆ ವಸ್ತುಗಳನ್ನು ಕೊಳ್ಳಲು ಮೋದಿ ಟ್ವೀಟ್ ಮಾಡಿದ್ದರು.
ನಮೋ ಮರ್ಕೆಂಡೈಸ್ ಎಂಬ ವ್ಯಾಪಾರಿ ಸಂಸ್ಥೆಯು ಆನ್ ಲೈನ್ ಮೂಲಕ ‘ನಮೋ” ಬ್ರಾಂಡಿನ ವಸ್ತುಗಳನ್ನು ಮಾರಾಟ ಮಾಡುವ ಸಂಸ್ಥೆಯಾಗಿದ್ದು, ನಮೋ ಆಪ್ ನೊಂದಿಗೆ ಸಂಬಂಧ ಹೊಂದಿದೆ. 2018ರ ಸೆಪ್ಟೆಂಬರ್ ತಿಂಗಳಿನಿಂದಲೇ ನಮೋ ಅಪ್ಲಿಕೇಶನ್ ಮುಖಾಂತರ ನಮೋ ಟೀಶರ್ಟ್ (200-400ರೂ), ನಮೋ ಟೋಪಿ (250ರೂ), ಮೋದಿಯ ಮುಖವಾಡ (500ರೂ), ಪೆನ್ನು (5ಕ್ಕೆ 100ರೂ), ಕೀ ಬಂಚ್, ಕಾಫಿ ಲೋಟ, ನೋಟ್ ಬುಕ್, ಇತ್ಯಾದಿ ಹಲವಾರು ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈಗ ಚುನಾವಣೆಯ ಹೊಸ್ತಿಲಲ್ಲಿ ಹೆಚ್ಚು ಕಾರ್ಯಕರ್ತರು ರಾಜಕೀಯ ಪಕ್ಷಗಳ ಚುನಾವಣಾ ವ್ಯವಹಾರದಲ್ಲಿ ಭಾಗಿಯಾಗುವುದರಿಂದ ಮೋದಿ ಈ ನಮೋ ಮರ್ಕೆಂಡೈಸ್ ಗೆ ಹೆಚ್ಚು ಗ್ರಾಹಕರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಯಾವುದೇ ವಸ್ತು ಕೊಂಡರೂ ಒಂದೇ ಕೊಳ್ಳುವಂತಿಲ್ಲ. ಬಹುತೇಕ ವಸ್ತುಗಳನ್ನು ಐದು ಅಥವಾ ಹತ್ತು ವಸ್ತುಗಳನ್ನೇ ಕೊಳ್ಳಬೇಕು.
ಹೀಗೆ ನಮೋ ಆಪ್ ಮೂಲಕ ನಡೆಸಸುತ್ತಿರುವ ನಮೋ ಬ್ರಾಂಡ್ ವಸ್ತುಗಳ ಮಾರಾಟಕ್ಕೆ ಈಗ ತಮ್ಮ ಅಧಿಕೃತ ಟ್ವಿಟರ್ ಅಕೌಂಟ್ ಮೂಲಕ ಗ್ರಾಹಕರನ್ನು ಸೆಳೆಯುವ ಕೆಲಸಕ್ಕೆ ಸ್ವತಃ ನರೇಂದ್ರ ಮೋದಿಯೇ ನಿಂತಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಹಲವರು ‘ಈಗ ಮೋದಿ ಬೆಂಬಲಿಗರು ‘ಮೈಭೀ ಸೇಲ್ಸ್ ಮನ್’ ಎಂದು ಹೇಳಲಿ’ ಎಂದು ಕಿಚಾಯಿಸಿದ್ದಾರೆ
Our PM is doing everything these days except his actual duties as a PM. #chowkidarsalesmanbhihai #mainbhisalesman
— i_induuuuu♡ (@indusatija) March 25, 2019
So BJP Bhakths will become #MainBhiSalesman
— Chow”KEY” (@ChowkidharChor) March 25, 2019
Desh ke Pradhan mantri , selling TShirts ?😨😰😱☹️🙁
— Niti_S (@HopeTransition) March 24, 2019
Wah Wah Wah Wah Wah Wah !
What a shame for d Country where PM proves daily dat he can't uphold d decorum of his post by his shameful acts and utterances.
Shame Shame Shame Shame…….
……………………………..Shame…#GoBackModi #BhaagModiBhaag #BJP_भगाओ_देश_बचाओ— A.R.K. (@ASg1956) March 25, 2019