ಬಿಜೆಪಿ ಹಿರಿಯ ರಾಷ್ಟ್ರೀಯ ಧುರೀಣ ಮುರಳಿ ಮನೋಹರ ಜೋಶಿಯವರ ಸಕ್ರಿಯ ರಾಜಕೀಯ ಜೀವನಕ್ಕೆ ಅಂತ್ಯವಾಗಿದೆ. ಅದವರ ಸ್ವ ಇಚ್ಛೆಯಿಂದಲ್ಲ, ಬಿಜೆಪಿ ನಾಯಕತ್ವದ ಸರ್ವಾಧಿಕಾರಿ ಧೋರಣೆಯಿಂದ.
ತಾವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅಧಿಕೃತವಾಗಿ ಇಂದು ತಿಳಿಸಿದ್ದಾರೆ.
ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಮುರಳಿ ಮನೋಹರ ಜೋಶಿ, “ಎಲ್.ಕೆ ಅಡ್ವಾಣಿ ಅವರಂತೆ ನಾನೂ ಸಹ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮತದಾರರಿಗೆ ಪತ್ರದ ಮೂಲಕ ಬಿಜೆಪಿಯ ಆದೇಶವನ್ನು ತಿಳಿಸಿರುವ ಜೋಶಿ ಅವರು, ಖಾನ್ಪುರದ ಪ್ರೀತಿಯ ಮತದಾರರೇ, ಭಾರತೀಯ ಜನತಾ ಪಕ್ಷ ನನಗೆ ಕಾನ್ಪುರ ಸೇರಿದಂತೆ ಯಾವುದೇ ಲೋಕಸಭಾ ಕ್ಷೇತ್ರದಿಂದಲೂ ಚುನಾವಣೆಗೆ ಸ್ಪರ್ಧಿಸಕೂಡದು ಎಂದು ಪಕ್ಷದ ಸಂಘಟನಾ ಕಾರ್ಯದರ್ಶಿ ರಾಮಲಾಲ್ ತಿಳಿಸಿದ್ದಾರೆ. ಈ ಪತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
And here it is. Glad Joshi said it like it is & refused to save Modi & Shah embarrassment pic.twitter.com/eNqSVELooR
— Swati Chaturvedi (@bainjal) March 26, 2019