ಜಮ್ಮು ರಾಮ್ ಬನ್ ಜಿಲ್ಲೆಯ ಬನಿಹಾಳ್ ಎಂಬಲ್ಲಿ ಕಾರ್ ಸ್ಫೋಟಗೊಂಡಿದ್ದು, ಸಂಪೂರ್ಣ ಕಾರ್ ಸುಟ್ಟು ಕರಕಲಾಗಿದೆ.
ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕಾರ್ ಸ್ಫೋಟಕ್ಕೆ ಕಾರ್ ನಲ್ಲಿರುವ ಸಿಲಿಂಡರ್ ಸ್ಫೋಟವೇ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಸಿಆರ್ ಪಿಎಫ್ ಮೂಲಗಳು ತಿಳಿಸಿದೆ.
ಘಟನಾ ಸ್ಥಳದಿಂದ ಸಿಆರ್ ಪಿಎಫ್ ಯೋಧರಿರುವ ಸ್ಥಳ ಸಾಕಷ್ಟು ದೂರದಲ್ಲಿರುವುದರಿಂದ ದಾಳಿ ನಡೆಸುವ ಉದ್ದೇಶದಿಂದ ಸ್ಫೋಟಿಸಲಾಗಿದೆ ಎನ್ನಲಾಗುವುದಿಲ್ಲ. ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿದೆ.