ಅಹಮದಾಬಾದ್: ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಮೊಮ್ಮಗಳೇ ಬಿಜೆಪಿ ಪಕ್ಷದ ಟೋಪಿಯನ್ನು ಹಾಕಿಕೊಳ್ಳಲು ನಿರಾಕರಿಸಿದ್ದರಿಂದ ಅಮಿತ್ ಷಾ ಸಾರ್ವಜನಿಕವಾಗಿ ಪೇಚಿಕೆ ಸಿಲುಕಿದ ಘಟನೆ ಅವರು ನಾಮಪತ್ರ ಸಲ್ಲಿಸುವ ಮುನ್ನ ನಡೆಯಿತು.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇಂದು ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಲು ಅಹಮದಾಬಾದ್ ಗೆ ಬಂದ ಶಾ ಹಾಗೂ ಅವರ ಕುಟುಂಬಸ್ಥರನ್ನು ಹಲವು ಬೆಂಬಲಿಗರು ಸ್ವಾಗತಿಸಿದರು.
ಈ ವೇಳೆ ಷಾ ಜನರ ನಡುವೆ ಬಂದಾಗ ಮೈ ಭೀ ಚೌಕಿದಾರ್ ಮತ್ತು ಮೋದಿ ಹೈ ತೋ ಮಮ್ಕಿನ್ ಹೈ ಎಂಬ ಘೋಷಣೆಗಳನ್ನು ಬೆಂಬಲಿಗರು ಕೂಗಿದರು.
ಜನರಗಳ ನಡುವೆ ನಿಂತಿದ್ದ ಶಾ ಅವರ ಮೊಮ್ಮಗಳು ಪಿಂಕ್ ಹಾಗೂ ನೀಲಿ ಬಣ್ಣದ ಫ್ರಾಕ್ ತೊಟ್ಟು ಅದಕ್ಕೆ ಹೊಂದುವಂಥ ಟೋಪಿಯನ್ನು ಧರಿಸಿದ್ದಳು.
ಷಾ ಕುಟುಂಬಸ್ಥರು ಅವರಿಗೆ ಬಿಜೆಪಿಯ ಕಮಲ ಗುರುತಿನ ಕೇಸರಿ ಬಣ್ಣದ ಟೋಪಿಯನ್ನು ಹಾಕಲು ಯತ್ನಿಸಿದಾಗ ಮೊಮ್ಮಗಳು ಅದರನ್ನು ತೆಗೆದೊಗೆದು ನೀಲಿ ಬಣ್ಣದ ಟೋಪಿಯನ್ನೇ ಹಾಕಿಕೊಳ್ಳುತ್ತಿದ್ದಳು.
ಮತ್ತೆ ಶಾ ಅವಳನ್ನು ಎತ್ತಿಕೊಂಡು ಪ್ರೀತಿ ತೋರುತ್ತಾ ಪದೇ ಪದೇ ಯತ್ನಿಸಿದಾಗಲೂ ಬಿಜೆಪಿ ಟೋಪಿ ತೆಗೆದೊಗೆದು ಬಣ್ಣದ ನೀಲಿ ಟೋಪಿಯನ್ನು ಹಾಕಿಕೊಂಡಳು. ಈ ಘಟನೆಯಿಂದಾಗಿ ಪೇಚಿಗೆ ಸಿಲುಕಿದ ಶಾ ಮತ್ತೆ ಪ್ರಯತ್ನವನ್ನು ಮುಂದುವರೆಸದೇ ಮೊಮ್ಮಗಳ ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟರು.
ಇದೇ ಮೊದಲ ಬಾರಿಗೆ ಅಮಿತ್ ಶಾ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಬಿಜೆಪಿ ಧುರೀಣ ಎಲ್. ಕೆ ಅಡ್ವಾಣಿ ಅವರ ಕ್ಷೇತ್ರದಿಂದ ಕಣಕ್ಕೆ ನಿಂತಿದ್ದಾರೆ.
ಷಾ ನಾಮಪತ್ರ ಸಲ್ಲಿಕೆ ವೇಳೆ ಕೇಂದ್ರ ಸಚಿವ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ ಬಿಜೆಪಿ ಮೈತ್ರಿ ಪಕ್ಷದ ಹಿರಿಯ ನಾಯಕರು ಹಾಜರಿದ್ದರು.
“ಅಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ ಅವರಂಥ ನಾಯಕರು ಗಾಂಧಿನಗರ ಕ್ಷೇತ್ರದಿಂದ ಆಯ್ಕೆದಾದವರು.
ಬಿಜೆಪಿ ಪಕ್ಷ ನನ್ನನ್ನು ಈ ಕ್ಷೇತ್ರದಿಂದ ಸಂಸತ್ ಗೆ ಕಳುಹಿಸಲು ನಿರ್ಧರಿಸಿರುವುದು ನನ್ನ ಅದೃಷ್ಟ ಎಂದು ರ್ಯಾಲಿಯಲ್ಲಿ ಅಮಿತ್ ಶಾ ಹೇಳಿದ್ದಾರೆ.
It's easy to convince bhakts to buy from NaMo Merchandise but not easy to convince family members. 🙂 pic.twitter.com/TP3lcTbXKr
— Mohammed Zubair (@zoo_bear) March 30, 2019