ಕೆಲ ದಿನಗಳ ಹಿಂದೆ ನರೇಂದ್ರ ಮೋದಿಯವರು ನಡೆಸಿದ #MainBhiChowkidar (ನಾನೂ ಸಹ ಚೌಕೀದಾರ) ಅಭಿಯಾನಕ್ಕೆ ಯುವಜನರ ತಿರುಗೇಟು ಎನ್ನುವ ರೀತಿಯಲ್ಲಿ ಈಗ ಅದೇ ಸಾಮಾಜಿಕ ಜಾಲತಾಣದಲ್ಲಿ #MainBhiBerozgar (ಮೈ ಭೀ ಬೆರೋಜ್ಗಾರ್ – ನಾನೂ ಸಹ ನಿರುದ್ಯೋಗಿ) ಅಭಿಯಾನ ಆರಂಭವಾಗಿದೆ. ಟ್ವಿಟರ್ ನಲ್ಲಿ #MainBhiBerozgar ಅತಿಹೆಚ್ಚು ಟ್ರೆಂಡ್ ಆಗಿದೆ.
“ಚೌಕೀದಾರ್ ಚೋರ್ ಹೇ” ಎಂಬ ಪ್ರತಿಪಕ್ಷಗಳ ಟೀಕೆಗೆ ಪ್ರಧಾನಿ ನರೇಂದ್ರ ಮೋದಿ ತಿರುಗೇಟು ನೀಡಿ “ಮೈ ಭೀ ಚೌಕೀದಾರ್” ಅಭಿಯಾನ ಪ್ರಾರಂಭಿಸಿ ಇಡೀ ದೇಶದ ಬಿಜೆಪಿ ಮುಖಂಡರೆಲ್ಲಾ ತಮ್ಮ ಹೆಸರುಗಳಿಗೆ ಚೌಕೀದಾರ್ ಎಂದು ಸೇರಿಸಿಕೊಳ್ಳುವಂತೆ ಪ್ರೇರೇಪಿಸಿದ್ದರು. ಮಾತ್ರವಲ್ಲ ಮೈ ಭೀ ಚೌಕೀದಾರ್ ಎಂದು ಬರೆದ ಟಿಶರ್ಟುಗಳನ್ನು ಕೊಳ್ಳಲು ಜನರಿಗೆ ಮೋದಿ ಕೇಳಿಕೊಂಡಿದ್ದರು.
ಚುನಾವಣಾ ದಿನಗಳು ಸಮೀಪಿಸುತ್ತಿದ್ದಂತೆಯೂ ಟ್ವಿಟರ್ ನಂತಹ ಸಾಮಾಜಿಕ ಮಾಧ್ಯಮದಲ್ಲಿ ಪರ-ವಿರೋಧ ವಾಗ್ವಾದಗಳ ಹವೆ ಬಿಸಿಯಾಗುತ್ತಿರುವುದು ಕಾಣುತ್ತಿದೆ. ರಾಷ್ಟ್ರದ ಸಂಪತ್ತನ್ನು ಕಾಪಾಡಲಾರದಿದ್ದರೂ ತನ್ನನ್ನು ತಾನು ಚೌಕೀದಾರ ಎಂದು ಕರೆದುಕೊಂಡ ಪ್ರಧಾನಿ ಮೋದಿಯನ್ನು ದೇಶದ ಜನ ನಾನಾ ಬಗೆಗಳಲ್ಲಿ ವ್ಯಂಗ್ಯ ಮಾಡುತ್ತಿದ್ದಾರೆ. ಹಾಗೆಯೇ ಸುಳ್ಳು ಅಂಕಿಅಂಶಗಳನ್ನು ಹೇಳಿ ದೇಶದಲ್ಲಿ ಈ ಐದು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಾಗಿದೆ ಎಂದು ವಾದಿಸುತ್ತಿರುವ ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಟ್ವಿಟರ್ ಮೂಲಕ ಚಳಿ ಬಿಡಿಸುತ್ತಿದ್ದಾರೆ.
ಮಾರ್ಚ್ 30ರ ಟ್ವಿಟರ್ ಜಟಾಪಟಿ ತಡರಾತ್ರಿಯ ನಂತರ ಆರಂಭಗೊಂಡಿತು. ಸುಮಾರು 1.13 ರ ಮುಂಜಾನೆ (ನಡುರಾತ್ರಿ) #MainBhiBerozgar ನ ಮೊದಲ ಪಂಚ್ ಕಂಡಿತು. ತಕ್ಷಣದಲ್ಲೇ, ನಾನೂ SSC (ಸ್ಟಾಫ್ ಸೆಲೆಕ್ಷನ್ ಕಮೀಷನ್) ಒಳಗಿನ ವ್ಯಾಪಕ ಭ್ರಷ್ಟಾಚಾರದ ಸಂತ್ರಸ್ತನ #MainBhiBerozgar ಎಂಬ ಟ್ವೀಟ್ ಕಾಣಿಸಿತು.
ಸುತ್ತು ಪ್ರಗತಿಯಾದಂತೆ, ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಹ್ಯಾಂಡಲ್ @INCIndia ಕೂಡ #MainBhiBerozgar ಅಭಿಯಾನ ಸೇರಿಕೊಂಡಿತು. ಉ್ತತರ ಪ್ರತ್ಯುತ್ತರಗಳು, ಟ್ವೀಟ್ ಮತ್ತು ರೀಟ್ವೀಟ್ ಗಳು, ಪಂಚ್ ಮತ್ತು ಪ್ರತಿಪಂಚ್ ಗಳು ಎಗ್ಗಿಲ್ಲದಂತೆ ಹರಿದಾಡಿದವು. ಅವುಗಳಲ್ಲಿ ಕೆಲವು ಹೀಗಿವೆ:
ಬಿಜೆಪಿಗೆ
ಬೆಳವಣಿಗೆ = ಉದ್ಯೋಗಹೀನತೆ
ಬಿಜೆಪಿ ವಿರೋಧಿ = ರಾಷ್ಟ್ರವಿರೋಧಿ
ಪ್ರಣಾಳಿಕೆ = ಸುಳ್ಳುಪೊಳ್ಳು
#MainBhiBerozgar
ಈಗ ‘ಪಕೋಡ’ ಮಾರುವ ಸಮಯ ಬಂದಿದೆ
ಪಕೋಡ ಮಾರುವುದೂ ಒಂದು ಉದ್ಯೋಗವೇ
#MainBhiBerozgar
Time has come to sell 'pakodas'
Selling pakoda is also a job.#MainBhiBerozgar pic.twitter.com/icFSbgbW2D
— Irfan (@simplyirfan) March 30, 2019
“ನಿರುದ್ಯೋಗ ನಮ್ಮ ಕಾಲದ ಅತಿ ಭೀಕರ ಸಮಸ್ಯೆಯಾಗಿದೆ, ಮೋದಿ ಸರ್ಕಾರದಲ್ಲಿ ಕೋಟ್ಯಾಂತರ ಯುವಜನರಿಗೆ ಕೆಲಸವೂ ಇಲ್ಲ, ಭರವಸೆಯೂ ಇಲ್ಲ. ಅವರನ್ನು ಮೋದಿ ರಾಜಕೀಯ ಗಿಮ್ಮಿಕ್ಕುಗಳಿಂದ ಹಾದಿ ತಪ್ಪಿಸಬಹುದು, ಆದರೆ ಭಾರತದ ಯುವಜನತೆ ಹೇಳುವುದೊಂದೆ”
ನಿರುದ್ಯೋಗವು ಅಸಮಾನತೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ನಿರುದ್ಯೋಗ ಪ್ರಮಾಣವು 45 ವರ್ಷಗಳಲ್ಲಿ ಅತಿ ಹೆಚ್ಚಾಗಿದೆ. 2017ರಲ್ಲಿ ಸೃಷ್ಟಿಯಾದ ಸಂಪತ್ತಿನ ಶೇ. 73ರಷ್ಟು, ಶೇ.1ರಷ್ಟು ಅತಿ ಶ್ರೀಮಂತರ ಪಾಲಾಗಿದೆ. ಅತ್ಯಂತ ಬಡವರ ‘ಸಂಪತ್ತಿನಲ್ಲಿ’ ಕೇವಲ ಶೇ.1ರಷ್ಟು ಹೆಚ್ಚಳವನ್ನು ನೋಡಬಹುದಾಗಿತ್ತು. ಗಾಬರಿಯಾಗದಿರಿ. ಅದರ ಬಗ್ಗೆ ಏನಾದರೂ ಮಾಡಿರಿ!
ಭಾರತದ ಯುವಜನತೆ ಎದುರಿಸುತ್ತಿರುವ ಅತಿದೊಡ್ಡ ಬಿಕ್ಕಟ್ಟು ಉದ್ಯೋಗಗಳ ಕುರಿತದ್ದು. ನಿರುದ್ಯೋಗವು 45 ವರ್ಷಗಳಲ್ಲಿ ಅತಿ ಹೆಚ್ಚಿನ ಪ್ರಮಾಣ ತಲುಪಿದೆ. ಶ್ರಮಶಕ್ತಿ 4.7 ಕೋಟಿಗಳಷ್ಟು ಇಳಿದಿದೆ. 3.7 ಕೋಟಿ ದಿನಗೂಲಿ ಕಾರ್ಮಿಕರು ನೌಕರಿ ಕಳೆದುಕೊಂಡಿದ್ದಾರೆ, 3 ಕೋಟಿ ಕೃಷಿ ಕೂಲಿಕಾರರಿದ್ದಾರೆ. (ಎನ್ಎಸ್ಎಸ್ಒ)… ಭಾರತದ ಯುವಜನತೆ ಹೇಳುತ್ತಾರೆ #MainBhiBerozgar, ಉದ್ಯೋಗಗಳನ್ನ ಚೌಕೀದಾರ ಕದ್ದ! [ರಚಿತ್ ಸೇಠ್, ರಾಷ್ಟ್ರೀಯ ಮಾಧ್ಯಮ ಸಂಯೋಜಕ, ಎಐಸಿಸಿ]
ಆದರೆ ಹಠ ಬಿಡದ ‘ಚೌಕೀದಾರರು’ ಹರಸಾಹಸ ಮಾಡಿ ವಾಪಸ್ ಪಂಚ್ ಗಳನ್ನು ಕೊಡಲು ಯತ್ನಿಸುತ್ತಲೇ ಇದ್ದಾರೆ. ಇದೆ ಹ್ಯಾಶ್ ಟ್ಯಾಗ್ ಉಪಯೋಗಿಸಿ ಅಭಿಯಾನಕ್ಕೆ ಪ್ರತಿಯಾಗಿ ಚಕ್ರವರ್ತಿ ಸೂಲಿಬೆಲೆ ಮಾಡಿದ ರಿಟ್ವೀಟ್ ಹೀಗಿದೆ
So many Rozgar generated still you say #MainBhiBerozgar interesting pic.twitter.com/LMFzQCa3VW
— Chakravarty Sulibele (@astitvam) March 30, 2019
ಈ ಜಟಾಪಟಿ ಇನ್ನೂ ಯಾವಯಾವ ರೂಪ ಪಡೆಯುತ್ತದೋ, ಯಾವಯಾವ ಹ್ಯಾಶ್ ಟ್ಯಾಗ್ ಗಳು ಟ್ವಿಟರ್ ಮಾಧ್ಯಮದಲ್ಲಿ ಹರಿದಾಡುತ್ತವೋ ನೋಡಬೇಕು. ಇನ್ನೂ ಎರಡು ತಿಂಗಳುಗಳ ಕಾಲ 7 ಹಂತಗಳಲ್ಲಿ ದೇಶಾದ್ಯಂತ ಜರುಗಲಿರುವ ಮಹಾಚುನಾವಣೆಗಳ ಬೆನ್ನೆಲ್ಲಿ ಟ್ವಿಟರ್ ಮಾಧ್ಯಮವೂ ವಾಗ್ವಾದಗಳ ಸಮರಭೂಮಿಯೇ ಆಗಲಿದೆ. ಚುನಾವಣಾ ತಾಪ ಜಾಸ್ತಿಯಾದಂತೆಯೂ ಇಲ್ಲೂ ಕಾವು ಏರಲಿದೆ. ಚೌಕೀದಾರ-ನಿರುದ್ಯೋಗಿ ಚರ್ಚೆಗಳನ್ನೊಳಗೊಂಡ ಪಂದ್ಯಾವಳಿಗಳೂ ಹೆಚ್ಚುವ ಲಕ್ಷಣಗಳು ಗೋಚರಿಸುತ್ತಿವೆ. ಅಂತಿಮ ಫಲಿತಾಂಶ ಮಾತ್ರ ಮೇ 23ರಂದು ಲಭ್ಯವಾಗಲಿದೆ..