ಸಜ್ಜನ ರಾಜಕಾರಣಿ ಎಂಬ ಬಿರುದಾಂಕಿತ, ಮಾಜಿ ಸಚಿವ, ಬಿಜೆಪಿ ಶಾಸಕ ಸುರೇಶ್ ಕುಮಾರ್ ಹಸಿ ಹಸಿ ಸುಳ್ಳು ಹೇಳಿ ಕನ್ನಡ ಹೋರಾಟಗಾರರಿಂದ ತೀವ್ರ ಟೀಕೆಗೊಳಗಾಗಿದ್ದಾರೆ.
“ಕನ್ನಡಿಗರಿಗೆ ಇದೇ ಮೊದಲ ಬಾರಿಗೆ ರೈಲ್ವೇ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಅವಕಾಶ ಕಲ್ಪಿಸಿದೆ ಮೋದಿ ಸರ್ಕಾರ” ಎಂಬ ಸಂದೇಶವನ್ನು ತಮ್ಮ ಟ್ವಿಟರ್ ಖಾತೆಯ ಮೂಲಕ ಭಾನುವಾರ ಹಂಚಿಕೊಂಡಿದ್ದಾರೆ. ಬಿಜೆಪಿಯ ಚುನಾವಣಾ ಪ್ರಚಾರಕ್ಕಾಗಿ ಸಿದ್ಧಪಡಿಸಿರುವ ಪೋಸ್ಟರ್ ಒಂದರಲ್ಲಿ ಈ ಮೇಲಿನ ಸಂದೇಶವಿದ್ದು ಅದನ್ನು ಸುರೇಶ್ ಕುಮಾರ್ ಹಂಚಿದ್ದಾರೆ.
ಸುರೇಶ್ ಕುಮಾರ್ ಇದನ್ನು ಹಂಚಿಕೊಳ್ಳುತ್ತಿದ್ದಂತೆಯೇ ಅವರ ಮೇಲೆ ಟೀಕೆಗಳ ಸುರಿಮಳೆಯೇ ಆಗಿದೆ. ‘ಯಾಕೆ ಸುಳ್ಳು ಹೇಳುತ್ತಿದ್ದೀರಿ ಸುರೇಶ್ ಕುಮಾರ್ ಅವರೇ?’ ಎಂದು ಪ್ರಶ್ನಿಸುವ ಕಮೆಂಟುಗಳನ್ನು ಹಾಕಿರುವ ಕನ್ನಡ ಚಳವಳಿಗಾರರು, ಕನ್ನಡಿಗರು ಶಾಸಕ ಸುರೇಶ್ ಕುಮಾರ್ ಹಂಚಿಕೊಂಡಿರುವ ಮಾಹಿತಿ ಸುಳ್ಳೆಂಬುದಕ್ಕೆ ದಾಖಲೆಗಳನ್ನೂ ನೀಡಿದ್ದಾರೆ.
ಮೋದಿಯಲ್ಲ-ದೀದಿ!
ಕನ್ನಡಿಗರಿಗೆ ರೈಲ್ವೇ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಿದ್ದು ಮೋದಿ ಸರ್ಕಾರ ಅಲ್ಲ. 2010ನೇ ಇಸವಿಯಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ರೈಲ್ವೇ ಸಚಿವರಾಗಿದ್ದ ಮಮತಾ ಬ್ಯಾನರ್ಜಿ ಅವರು ಈ ಅವಕಾಶವನ್ನು ಇಡೀ ದೇಶದ ಪ್ರಾದೇಶಿಕ ಭಾಷಿಗರಿಗೆ ಕಲ್ಪಿಸಿಕೊಟ್ಟಿದ್ದರು. ಈ ಕುರಿತು ದ ಹಿಂದೂ, ಒನ್ ಇಂಡಿಯಾ ಮತ್ತು ಪ್ರಜಾವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ವರದಿಗಳು ಇಲ್ಲಿವೆ.
ದ ಹಿಂದೂ ವರದಿ
ಒನ್ ಇಂಡಿಯಾ ವರದಿ
ಪ್ರಜಾವಾಣಿ ವರದಿ
ಜನವರಿ 01,2012 ಪ್ರಜಾವಾಣಿ ವರದಿ ಹೀಗೆ ವರದಿ ಮಾಡಿದೆ-
“ಹಿಂದೆ ರೈಲ್ವೇ ಸಚಿವರಾಗಿದ್ದ, ಹಾಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿರುವ ಮಮತಾ ಬ್ಯಾನರ್ಜಿ ಅವರ ವಿಶೇಷ ಕಾಳಜಿಯಿಂದಾಗಿ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ರೈಲ್ವೇ ನೇಮಕಾತಿ ಮಂಡಳಿಗಳು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್ ನಲ್ಲಿ ಅಷ್ಟೇ ಅಲ್ಲದೇ ಪ್ರಾದೇಶಿಕ ಭಾಷೆಗಳಲ್ಲೂ ಬರೆಯಲು ಅವಕಾಶ ಕಲ್ಪಿಸಲಾಗಿದೆ”
ಈ ಮೇಲಿನ ವರದಿಗಳು ಸುರೇಶ್ ಕುಮಾರ್ ಹೇಳಿಕೆ ಎಷ್ಟು ಸುಳ್ಳು ಎಂಬುದನ್ನು ತೋರಿಸುತ್ತವೆ.
ಆದರೆ ಸುಳ್ಳುಗಳನ್ನೇ ನಂಬಿಕೊಂಡು ಸುಳ್ಳುಗಳನ್ನೇ ಅಸ್ತ್ರವಾಗಿಸಿಕೊಂಡು ಜನರ ಮೇಲೆ ಪ್ರಯೋಗಿಸುತ್ತಾ ಬಂದಿರುವ ರಾಜಕೀಯ ಪಕ್ಷವಾದ ಬಿಜೆಪಿಯ ಶಾಸಕರಾದ ಸುರೇಶ್ ಕುಮಾರ್ ಅವರಿಗೆ ಇದೇನೂ ತಿಳಿದಿರದ ಸಂಗತಿಯಲ್ಲ. ಉದ್ದೇಶಪೂರ್ವಕವಾಗಿಯೇ ಅವರು ಹೀಗೆ ಸುಳ್ಳು ಸುದ್ದಿ ಹಂಚಿದ್ದಾರೆ. ಕನ್ನಡಿಗರನ್ನು ಸುಲಭವಾಗಿ ಯಾಮಾರಿಸಿಬಿಡಬಹುದು ಎಂದು ಅವರಿಗೆ ಅನಿಸಿದ್ದಕ್ಕೋ ಏನೋ?
ಆದರೆ ಕೆಲವು ಪ್ರಜ್ಞಾವಂತ ಕನ್ನಡಿಗರು ಸುರೇಶ್ ಕುಮಾರ್ ಅವರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಅನಿಲ್ ಎನ್ ಎಸ್ ಎನ್ನುವವರು “ಸಾಕು ಮಾಡಿ ನಿಮ್ಮ ಗುರು ನಿಷ್ಠೆ …” ಎಂದು ಹೇಳುತ್ತಾ #ಸಜ್ಜನರಿಂದದುರ್ಜನ ಹ್ಯಾಶ್ ಟ್ಯಾಗ್ ನೀಡಿದ್ದಾರೆ.
@nimmasuresh : ಸಾಕು ಮಾಡಿ ನಿಮ್ಮ ಗುರು ನಿಷ್ಠೆ … #ಸಜ್ಜನರಿಂದದುರ್ಜನ https://t.co/XoIJyCLI4A
— Anil N S (@anilns87) March 31, 2019
ಕನ್ನಡ ಹೋರಾಟಗಾರ ಭೀಮಾ ಶಂಕರ ಪಾಟೀಲ್ ಅವರು
“ಸರ್ ನೈರುತ್ಯ ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ಅಂದು@karave_KRVಉಗ್ರವಾದ ಹೋರಾಟ ಮಾಡಿದರ ಫಲವಾಗಿ ಅಂದಿನ ರೈಲ್ವೆ ಮಂತ್ರಿಯಾಗಿದ್ದ@MamataOfficial ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯುವಂತೆ ಕಾನೂನು ಜಾರಿಗೆ ತಂದಿದ್ದು ಸುಮ್ಮ ಸುಮ್ಮನೆ ಮೋದಿ ಮಾಡಿದ್ದು ಅಂತ ಹೇಳಬೇಡಿ” ಎಂದಿದ್ದಾರೆ.
ಮತ್ತೊಬ್ಬ ಕನ್ನಡ ಚಳವಳಿ ಚಿಂತಕ ಅರುಣ್ ಜಾವಗಲ್ ಅವರು
“ಹೋಗಲಿ ಬಿಡಿ ಸುರೇಶ್ ಕುಮಾರ್ ರವರೇ, ಭಾರತ ಒಕ್ಕೂಟ ಪ್ರಾರಂಬವಾಗಿ 70 ವರ್ಷವಾದರೂ ಕೇಂದ್ರ ಸರಕಾರದ IBPS ಪರೀಕ್ಷೆ, SSC ಪರೀಕ್ಷೆ, Army ಪರೀಕ್ಷೆಗಳು ಕನ್ನಡದಲ್ಲಿ ಇಲ್ಲ. atleast ನಿಮ್ಮ ಅಭ್ಯರ್ಥಿಗಳ ಬಾಯಲ್ಲಿ ಕೇಂದ್ರ ಸರಕಾರದ ಎಲ್ಲಾ ಪರೀಕ್ಷೆಗಳು ಕನ್ನಡದಲ್ಲಿ ಕೊಡಲು ಕೇಂದ್ರದ ಮೇಲೆ ಒತ್ತಡಹಾಕುವ ಬಗ್ಗೆ ಹೇಳಿಕೆ ಕೊಡಿಸಿ…” ಎಂದು ಸುರೇಶ್ ಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಹೆಸರಲ್ಲಿ ಚೌಕಿದಾರ ಹಾಕೊಂಡವರೆಲ್ಲ ಸುಳ್ಳುಸುಳ್ಳೇ ಕ್ರೆಡಿಟ್ ತಗೊಳೋ ಸುದ್ದಿ ಹರಡಲೂಬೇಕಂತ ಹೈಕಮಾಂಡ್ ಅಪ್ಪಣೆಯೇ ಸರ್?- ಸಾಗರ
ಸರ್, ಇದೊಂದು ದೊಡ್ಡ ಸುಳ್ಳು.ಮಮತಾ ಬ್ಯಾನರ್ಜಿ ರಯ್ಲೆ ಮಂತ್ರಿಯಾಗಿದ್ದಾಗ ಪ್ರಾದೇಶಿಕ ಬಾಶೆಗಳಲ್ಲಿ ಪರೀಕ್ಶೆ ಬರಿಯುವ ಹಾಗಾಯಿತು.ಅದನ್ನು ಬಿಜೆಪಿ ಸರ್ಕಾರ ತೆಗೆಯಲು ಹೋದಾಗ ನಡೆದ ಹೋರಾಟಕ್ಕೆ ಮಣಿದಿದ್ದನ್ನೆ ಈಗ ತಾವೇ ಮೊದಲು ಬಾರಿ ತಂದಿದ್ದು ಎಂದು ತಿರುಚಿ ಹೇಳುವುದು ತಪ್ಪು.ಅಂದಹಾಗೆ ನಿಮ್ಮ ಸರ್ಕಾರದ #IBPSmosa ಬಗ್ಗೆ ನಿಮಗೆ ತಿಳಿದಿದೆಯೇ?- ಸೋಮಶೇಖರ್ ಬಜ್ಜಣ್ಣ
#SulluSuresha #ಸುಳ್ಳುಸುರೇಶ ಸಜ್ಜನ ರಾಜಕಾರಣಿ ಅಂತ ಹೊರ ವೇಷ ಇದ್ದರೆ ಸಾಲದು ಸ್ವಲ್ಪನಾದ್ರೂ ಸತ್ಯ ಹೇಳಿ ಸಾರ್… ನಿಮ್ಮ ನಾಯಕನಂತೆ ನೀವೂ ಕೂಡ ಸುಳ್ಳುಗಾರ ಆಗ್ಬಿಟ್ರೆ ಹೆಂಗೆ.. ಮಮತಾ ಬ್ಯಾನರ್ಜಿ ಅವರು ತಂದಿದ್ದ ಕಾಯ್ದೆಗೆ ಎಳ್ಳು ನೀರು ಬಿಟ್ಟು ಜನ ತಿರುಗಿ ಬಿದ್ದಮೇಲೆ ಅದನ್ನೇ ವಾಪಸ್ ತಂದು ಈಗ ನಾವೇ ತಂದಿದ್ದು ಅಂದ್ರೆ ಯಾರ್ ನಮ್ತಾರೆ.- ಕನ್ನಡಿಗ ಶುಕಮುನಿ
ಇನ್ನೂ ಕೆಲವು ತೀವ್ರ ರೀತಿಯ ಪ್ರತಿಕ್ರಿಯೆಗಳು ಹೀಗಿವೆ