ಚೆನ್ನೈ: ಕುಖ್ಯಾತ ರಫೇಲ್ ಹಗರಣದ ಕುರಿತ ಪುಸ್ತಕವೊಂದರ ಬಿಡುಗಡೆ ಕಾರ್ಯಕ್ರಮಕ್ಕೆ ಕೆಲವು ಗಂಟೆಗಳ ಮೊದಲು ಪೊಲೀಸರು ಬಂದು ಪುಸ್ತಕಗಳ ಪ್ರತಿಗಳನ್ನು ವಶಕ್ಕೆ ಪಡೆದುಕೊಂಡು ‘ಚುನಾವಣೆ ಇರುವಾಗ ಇಂತಹ ಪುಸ್ತಕಗಳ ಬಿಡುಗಡೆಗೆ ಅವಕಾಶವಿಲ್ಲ, ಈ ಪುಸ್ತಕ ಬಿಡುಗಡೆ ಚುನಾವಣಾ ನೀತಿ ಸಂಹಿತೆಗೆ ವಿರುದ್ಧವಾಗುತ್ತದೆ ‘ ಎಂದು ಬೆದರಿಸಿ ಹೋಗಿದ್ದ ಘಟನೆ ಚೆನ್ನೈನಲ್ಲಿ ಮಂಗಳವಾರ ನಡೆದಿದೆ.
ಎಸ್ ವಿಜಯನ್ ಎಂಬ ಲೇಖಕ ಬರೆದ ‘ನಾಟ್ಟಾಯಿ ಉಳುಕ್ಕುಮ್ ರಾಫೇಲ್ ಬೇರಾ ಊಳಲ್” (ದೇಶವನ್ನು ತಲ್ಲಣಗೊಳಿಸಿದ ರಫೇಲ್) ಹೆಸರಿನ ಪುಸ್ತಕದ ಬಿಡುಗಡೆ ಇಂದು ಸಾಯಂಕಾಲ ಹಮ್ಮಿಕೊಳ್ಳಲಾಗಿತ್ತು. ಪತ್ರಕರ್ತ ಎನ್ ರಾಮ್ ಅವರು ಪುಸ್ತಕದ ಲೋಕಾರ್ಪಣೆ ಮಾಡಲಿದ್ದರು. ಈ ಪುಸ್ತಕದಲ್ಲಿ ರಾಫೇಲ್ ವ್ಯವಹಾರದಲ್ಲಿ ಹೇಗೆ ಮೋದಿ ಸರ್ಕಾರ ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂಬ ವಿಶ್ಲೇಷಣೆ ಇತ್ತೆನ್ನಲಾಗಿದೆ. ಚೆನ್ನೈನ ಭಾರತಿ ಪುಸ್ತಕಾಲಯವು ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಆಯೋಜಿಸಿತ್ತು. ಆದರೆ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇರುವಂತೆ ಫ್ಲೈಯಿಂಗ್ ಸ್ಕ್ವಾಡ್ ಪೊಲೀಸರು ಬಂದು ಚುನಾವಣಾ ನೀತಿ ಸಂಹಿತೆ ನೆಪವೊಡ್ಡಿ ಪುಸ್ತಕದ ಪ್ರತಿಗಳನ್ನು ಕಿತ್ತುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಹೀಗೆ ಪುಸ್ತಕವೊಂದರ ಬಿಡುಗಡೆ ಕಾರ್ಯಕ್ರಮಕ್ಕೆ ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ತಡೆಯೊಡ್ಡಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್,
‘ಚುನಾವಣಾ ಆಯೋಗ ನೀತಿ ಸಂಹಿತೆ ಎಂದು ಹೇಳಿ ರಫೇಲ್ ಹಗರಣದ ಕುರಿತು ಪುಸ್ತಕ ನಿಷೇಧಿಸುತ್ತದೆ, ಅದರ ಪ್ರತಿಗಳನ್ನು ವಶಕ್ಕೆ ಪಡೆಯುತ್ತದೆ! ಅದೇ ಚುನಾವಣಾ ಆಯೋಗ ಮೋದಿ ಕುರಿತ ಪ್ರಚಾರಕ್ಕೆ ಅನುಮತಿ ನೀಡುತ್ತದೆ, ಆಕಾಶವಾಣಿ, ದೂರದರ್ಶನಗಳಲ್ಲಿ ಎ-ಸ್ಯಾಟ್ ಕುರಿತು ಮೋದಿ ಘೋಷಣೆಗೆ ಅನುಮತಿ ನೀಡುತ್ತದೆ, ರೈಲ್ವೆ ಮತ್ತು ಜಾಹಿರಾತುಗಳ ದುರ್ಬಳಕೆಗೆ ಅವಕಾಶ ನೀಡುತ್ತದೆ, ಆದರೆ ರಾಫೇಲ್ ಕುರಿತು ಪುಸ್ತಕಕ್ಕೆ ನಿಷೇಧ ಹೇರುತ್ತದೆ! ಎಂದಿದ್ದಾರೆ.
EC bans book on Rafale scam & seizes copies, citing Model Code of Conduct! EC allows propaganda movie on Modi, allows Modi to use AIR&DD for election speech on Anti satellite missile, allows misuse of of Railways&advertisement money by govt for elections, but bans book on Rafale! https://t.co/ePz5KL2Nta
— Prashant Bhushan (@pbhushan1) April 2, 2019
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ, ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ತಮ್ಮ ಟ್ವಿಟರ್ ನಲ್ಲಿ,
ಎಸ್. ವಿಜಯನ್ ಬರೆದಿರುವ “ರಫೇಲ್: ದೇಶವನ್ನು ತಲ್ಲಣಗೊಳಿಸಿದ ಹಗರಣ” ಎಂಬ ಒಂದು ಪುಸ್ತಕ… ನಿಷೇಧಗೊಳ್ಳುತ್ತದೆ ಮತ್ತು ಚುನಾವಣಾ ಆಯೋಗ ಪುಸ್ತಕವನ್ನು ವಶಪಡಿಸಿಕೊಳ್ಳುತ್ತದೆ. ಆದರೆ ಮೋದಿ ಕುರಿತ ಒಂದು ಸಿನಿಮಾ ಮತ್ತು ನಮೋ ಟೀವಿಯಂತಹ ಚಾನೆಲ್ ಗಳಿಗೆ ತಡೆರಹಿತ ಅವಕಾಶ ನೀಡಲಾಗಿದೆ
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು…! ಎಂದು ಉದ್ಘರಿಸಿದ್ದಾರೆ
A book .. “RAFALE :The SCAM that rocked the NATION “ by S.Vijayan banned today and the books seized on ELECTION COMMISSION s order BUT a FILM on MODI n channels like NAMO TV spared
FREE N FAIR ELECTIONS.. !— Prakash Raj (@prakashraaj) April 2, 2019