ಉಡುಪಿ: ಉಡುಪಿಯ ಉದ್ಯಾವರದಲ್ಲಿರುವ ಜಯಲಕ್ಷ್ಮಿ ಜವಳಿ ಅಂಗಡಿಗೆ ಚುನಾವಣಾ ಆಯೋಗ ದಾಳಿ ನಡೆಸಿದೆ.ನರೇಂದ್ರ ಮೋದಿಯ ಭಾವಚಿತ್ರವಿರುವ ಸೀರೆ ಮಾರುತ್ತಿದ್ದ ಹಿನ್ನಲೆಯಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣ ಚುನಾವಣಾ ಆಯೋಗ ದಾಳಿ ಮಾಡಿದೆ.
ಚುನಾವಣಾ ಆಯೋಗದ ಸಿಬ್ಬಂದಿಯೊಂದಿಗೆ ದಾಳಿ ಸಂದರ್ಭದಲ್ಲಿ ಎರಡು ನರೇಂದ್ರ ಮೋದಿಯಿ ಚಿತ್ರವಿರುವ ಸೀರೆ ವಶ ಪಡಿಸಿಕೊಳ್ಳಲಾಗಿದೆ. ಎಚ್ಚರಿಕೆಯ ಹೊರತಾಗಿಯೂ ಜಯಲಕ್ಷ್ಮಿ ಜವಳಿ ಅಂಗಡಿಯಲ್ಲಿ ಬಾಲಕೋಟ್ ಮತ್ತು ನರೇಂದ್ರ ಮೋದಿ ಭಾವಚಿತ್ರವಿರುವ ಸೀರೆ ಮಾರುತ್ತಿದ್ದರು. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣಾ ಪ್ರಚಾರಕ್ಕೆ ಸೈನ್ಯಕ್ಕೆ ಸಂಬಂಧಪಟ್ಟ ಯಾವುದನ್ನೂ ಬಳಸಿಕೊಳ್ಳದಂತೆ ಚುನಾವಣಾ ಆಯೋಗವು ರಾಜಕೀಯ ಪಕ್ಷಗಳಿಗೆ ಕಳೆದ ಮಾರ್ಚ್ 13 ರಂದು ನಿರ್ದೇಶನ ನೀಡಿರುವುದನ್ನು ಸ್ಮರಿಸಬಹುದು.