ಕೆಲ ದಿನಗಳ ಹಿಂದೆ ದೇಶದ ಪ್ರತಿಭಾವಂತ 100ಕ್ಕೂ ಹೆಚ್ಚು ಪ್ರಸಿದ್ಧ ಚಿತ್ರನಿರ್ದೇಶಕರು, ಸಾಕ್ಷ್ಯಚಿತ್ರ ನಿರ್ದೇಶಕರು ಬಿಜೆಪಿಯ ವಿರುದ್ಧ ಮತ ಚಲಾಯಿಸಲು ದೇಶ ಜನತೆಗೆ ಮನವಿ ಮಾಡಿಕೊಂಡಿದ್ದರು. ಅದಾದ ನಂತರ ದೇಶದ ಪ್ರಸಿದ್ಧ 200 ಬರಹಗಾರರು ಇದೇ ಬಗೆಯ ಮನವಿ ಪತ್ರ ಕಳಿಸಿದರು. ಈಗ ವಿಜ್ಞಾನಿಗಳ ಸರದಿ. 150ಕ್ಕೂ ಹೆಚ್ಚು ವಿಜ್ಞಾನಿಗಳು ದೇಶದ ಪ್ರಜೆಗಳನ್ನು ಉದ್ದೇಶಿಸಿ ಮನವಿ ಬರೆದಿದ್ದಾರೆ. ಟ್ರೂಥ್ ಇಂಡಿಯಾ ಅದನ್ನು ಕನ್ನಡದಲ್ಲಿ ಸಾದರಪಡಿಸುತ್ತಿದೆ.
ಜನರನ್ನು ಒಗ್ಗೂಡಿಸಲು ಮತ ಚಲಾಯಿಸೋಣ. ವಿಚಾರದ ಹಣತೆಯ ಬೆಳಕನ್ನು ಪಸರಿಸಲು ಮತ ಚಲಾಯಿಸೋಣ
ಮುಂಬರಲಿರುವ ಚುನಾವಣೆ ಅತ್ಯಂತ ಮುಖ್ಯವಾದದ್ದು. ನಮ್ಮ ಸಂವಿಧಾನ ನಮಗೆ ನೀಡಿರುವ ಅತ್ಯಂತ ಮೂಲಭೂತ ಖಾತರಿಗಳಾದ ನಂಬುವ ಅಥವಾ ನಂಬದಿರುವ ಹಕ್ಕು, ಸಂಸ್ಕೃತಿ, ಭಾಷೆ, ಸಂಘಟನೆ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ವಾಕ್ ಸ್ವಾತಂತ್ರ್ಯಗಳ ಹಕ್ಕುಗಳನ್ನು ಪುನರ್ ದೃಢೀಕರಿಸಿಕೊಳ್ಳುವ ಚುನಾವಣೆ ಇದಾಗಿದೆ. ಈ ಎಲ್ಲಾ ಹಕ್ಕುಗಳನ್ನು ಸಂವಿಧಾನ ನಮಗೆ ವೈಯಕ್ತಿಕವಾಗಿ ಖಾತ್ರಿಗೊಳಿಸಿದೆ. ಆದರೆ ಯಾವುದೇ ಪಕ್ಷಪಾತ, ತಾರತಮ್ಯವಿಲ್ಲದೆ ಅವು ಇಡೀ ದೇಶದ ಪ್ರಜೆಗಳಿಗೆ ಸಮಾನವಾಗಿ ಲಭ್ಯವಿದ್ದಾಗ ಮಾತ್ರ ಪ್ರತಿಯೊಬ್ಬರಿಗೂ ಲಭ್ಯವಾಗುತ್ತವೆ.
ಈ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕೆಂದರೆ ಜನರನ್ನು ಸಾಯಹೊಡೆಯುವ ಅಥವಾ ಜನರ ಮೇಲೆ ಹಲ್ಲೆ, ದೌರ್ಜನ್ಯ ನಡೆಸುವವರನ್ನು, ಜನರ ನಡುವೆ ಧರ್ಮ, ಜಾತಿ, ಲಿಂಗ, ಭಾಷೆ ಅಥವಾ ಪ್ರಾದೇಶಿಕ ಆಧಾರದಲ್ಲಿ ತಾರತಮ್ಯ ಎಸಗುವವರನ್ನು ತಿರಸ್ಕರಿಸಬೇಕಾಗುತ್ತದೆ. ಇಂತಹ ತಾರತಮ್ಯ ಆಚರಣೆಗಳಿಗೆ ಬೆಂಬಲ ಪ್ರೇರಣೆ ಒದಗಿಸುವವರನ್ನೂ ನಾವು ತಿರಸ್ಕರಿಸಬೇಕಾಗುತ್ತದೆ. ನಮ್ಮನ್ನು ವಿಭಜಿಸುವ, ನಮ್ಮಲ್ಲಿ ಭೀತಿ ಹುಟ್ಟಿಸುವ, ಹಾಗೂ ಸಮಾಜದ ದೊಡ್ಡ ಸಮೂಹವಾದ ಮಹಿಳೆಯರು, ದಲಿತರು, ಆದಿವಾಸಿಗಳು, ಧಾರ್ಮಿಕ ಅಲ್ಪಸಂಖ್ಯಾತರು, ಅನನುಕೂಲತೆ ಹೊಂದಿರುವ ವ್ಯಕ್ತಿಗಳು ಅಥವಾ ಬಡವರನ್ನು ಅಂಚಿಗೆ ತಳ್ಳುವ ಒಂದು ರಾಜಕಾರಣವನ್ನು ನಾವು ಒಪ್ಪಲಾಗುವುದಿಲ್ಲ. ವೈವಿಧ್ಯತೆಯೇ ನಮ್ಮ ಪ್ರಜಾಪ್ರಭುತ್ವದ ದೊಡ್ಡ ಶಕ್ತಿ; ತಾರತಮ್ಯ ಮತ್ತು ಒಳಗೊಳ್ಳದಿರುವಿಕೆಗಳು ಈ ಪ್ರಜಾತಂತ್ರದ ಅಡಿಪಾಯಕ್ಕೇ ಪೆಟ್ಟು ನೀಡುತ್ತಿವೆ.
ವಿಜ್ಞಾನಿಗಳು, ಕಾರ್ಯಕರ್ತರು ಮತ್ತು ವಿಚಾರಶೀಲರನ್ನು ಬೇಟೆಯಾಡುವ, ಅವರನ್ನು ಹಿಂಸಿಸುವ, ಬೆದರಿಸುವ, ನಿಷೇಧಿಸುವ, ಜೈಲಿಗಟ್ಟುವ ಕೊನೆಗೆ ಅವರನ್ನು ಹತ್ಯೆಗೈಯುವ ವಾತವಾರಣ ನಮ್ಮ ದೇಶದ ಭವಿಷ್ಯಕ್ಕೆ ಖಂಡಿತಾ ಬೇಡ. ನಮ್ಮ ತರುಣರಿಗೆ ನೀಡಬೇಕಾದ ಭವಿಷ್ಯ ಇದಲ್ಲವೇ ಅಲ್ಲ. ಕೇವಲ ವಾಣಿಜ್ಯ ಉದ್ಯಮವಾಗಿ ಎಲ್ಲವನ್ನೂ ನೋಡದೇ, ಯಾವುದನ್ನೂ ಕಣ್ಣುಮುಚ್ಚಿಕೊಂಡು ಒಪ್ಪಿಕೊಳ್ಳದೇ ಪ್ರತಿಯೊಂದನ್ನು ಮುಕ್ತವಾಗಿ ಪ್ರಶ್ನಿಸುವ ಮೂಲಕವೇ ವಿಜ್ಞಾನವನ್ನು ಒಂದು ಪ್ರಾಜಾತಾಂತ್ರಿಕ ಸಬಲೀಕರಣದ ಸಾಧನವಾಗಿಸಿಕೊಂಡು ಮುನ್ನಡೆಯಬಲ್ಲ ಒಂದು ದೇಶ ನಮ್ಮ ಯುವಜನತೆಗೆ ಬೇಕಾಗಿದೆ. ವಿಚಾರಶೀಲತೆಯನ್ನು, ಸಾಕ್ಷಾಧಾರಗಳನ್ನು ಆಧರಿಸಿದ ಸಾರ್ವಜನಿಕ ಸಂವಾದವನ್ನು ತುಚ್ಛೀಕರಿಸುವುದನ್ನು ನಾವು ಅಂತ್ಯಗೊಳಿಸಬೇಕಿದೆ; ಹಾಗಾದಾಗಲೇ ನಾವು ಉದ್ಯೋಗ, ಶಿಕ್ಷಣ ಮತ್ತು ಸಂಶೋಧನೆಗಳಿಗೆ ಉತ್ತಮ ಸಂಪನ್ಮೂಲ ಮತ್ತು ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಸಾಧ್ಯವಾಗುತ್ತದೆ.
ದೇಶದ ಎಲ್ಲಾ ಪ್ರಜೆಗಳು ನಾನಾ ರೀತಿಯ ವಾದಗಳನ್ನು ಮತ್ತು ಅವುಗಳಿಗೆ ಸಾಕ್ಷಾಧಾರಗಳನ್ನು ತೂಗಿನೋಡಿ ಮತ ಚಲಾಯಿಸಬೇಕೆಂದು ನಾವು ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ. ವೈಜ್ಞಾನಿಕ ಮನೋಭಾವಕ್ಕೆ ನಮ್ಮ ಸಂವಿಧಾನ ತೋರಿರುವ ಬದ್ಧತೆಯನ್ನು ಸ್ಮರಿಸಿಕೊಳ್ಳಬೇಕೆಂದು ನಾವು ಎಲ್ಲಾ ಪ್ರಜೆಗಳಲ್ಲಿ ಕೋರುತ್ತೇವೆ.
ಅಸಮಾನತೆಯ ವಿರುದ್ಧ, ದಬ್ಬಾಳಿಕೆ, ತಾರತಮ್ಯ ಮತ್ತು ಕುರುಡು ನಂಬಿಕೆಗಳ ವಿರುದ್ಧವಾಗಿ ನೀವು ಮತ ಚಲಾಯಿಸಬೇಕೆಂದು ನಿಮ್ಮಲ್ಲಿ ಮನವಿ ಕಳಕಳಿಯಿಂದ ಮಾಡುತ್ತಿದ್ದೇವೆ.
ಇವೆಲ್ಲವೂ ನಮ್ಮ ಸಂವಿಧಾನದ ಹಿತದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾದಂತವು ಎಂದು ಹೇಳುತ್ತಾ ಸಂವಿಧಾನ ನೀಡಿರುವ ಭರವಸೆ ಏನೆಂಬುದನ್ನು ಅತ್ಯುತ್ತಮವಾಗಿ ಹೇಳುವ ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರ ಈ ಮಾತುಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.
“ಎಲ್ಲಿ ಮನಸ್ಸು ಭೀತಿಯಲ್ಲದೇ ಇರುವುದೋ,
ತಲೆ ಎತ್ತಿ ಮೇಲೆ ನೋಟ ನೋಡುತಿರುವುದೋ
ಎಲ್ಲಿ ತಿಳಿವು ಮುಕ್ತವಾಗಿರುವುದೋ
ಎಲ್ಲಿ ಜಗವು ಸಂಕುಚಿತ ಗೋಡೆಗಳಿಂದ ಛಿದ್ರವಾಗದಿರುವುದೋ
ಎಲ್ಲಿ ಸತ್ಯದ ಅಂತರಾಳದಿಂದ ನುಡಿಯು ಹೊಮ್ಮುವುದೋ
ಎಲ್ಲಿ ಅವಿಶ್ರಾಂತ ದುಡಿಮೆ ಪರಿಪೂರ್ಣತೆಯೆಡೆ ತೋಳು ಚಾಚಿರುವುದೋ
ಎಲ್ಲಿ ವಿಚಾರಶೀಲತೆಯ ತೊರೆಯು
ದಾರಿ ತಪ್ಪಿ ಮೌಢ್ಯದ ಮರಳುಗಾಡಿನಲ್ಲಿ ಮರೆಯಾಗದೇ ತನ್ನ ದಾರಿಯಲ್ಲೇ ಸಾಗುವುದೋ
ಎಲ್ಲಿ ಚಿತ್ತವೆಲ್ಲಾ ಇದರಿಂದಲೇ ಮುನ್ನಡೆವುದೋ
ಅನಂತ ವಿಶಾಲ ಚಿಂತನೆ – ಕ್ರಿಯೆಗಳನು ಕೂಡಿಕೊಳುವುದೋ
ಅಂತಹ ಸ್ವಾತಂತ್ರ್ಯದ ಸಗ್ಗದೊಳು,
ಓ ನನ್ನ ತಂದೆಯೇ
ನನ್ನೀ ದೇಶವನು ಎಚ್ಚರಿಸು.
-
ಗುರುದೇವ ರವೀಂದ್ರನಾಥ ಟ್ಯಾಗೋರ್
1 |
A. Mani |
70 |
Madan Rao |
139 |
Sumeet Agarwal |
2 |
Aaloka Kanhere |
71 |
Madhavi Reddy |
140 |
Sumilan Banerjee |
3 |
Abha Dev Habib |
72 |
Madhulika Srivastava |
141 |
Surendra Ghaskadbi |
4 |
Abhijit Majumder |
73 |
Manisha Gupte |
142 |
Swapan Chakrabarti |
5 |
Adish Dani |
74 |
Mayank Vahia |
143 |
Tapan Ghosh |
6 |
Ajit M. Srivastava |
75 |
Mayurika Lahiri |
144 |
Tapan Saha |
7 |
Akash Gautam |
76 |
Medha S. Rajadhyaksha |
145 |
Tejal Kanitkar |
8 |
Amala Bhave |
77 |
Mercy J. Raman |
146 |
Tushar Vaidya |
9 |
Amit Apte |
78 |
Mihir Arjunwadkar |
147 |
V. S. Sunder |
10 |
Amit Bhaya |
79 |
Mohan Rao |
148 |
Vidita Vaidya |
11 |
Amit Misra |
80 |
Mrinal K Ghosh |
149 |
Vijay Chandru |
12 |
Amitabh Joshi |
81 |
Mugdha Karnik |
150 |
Vineeta Bal |
13 |
Amitabha Bandyopadhyay |
82 |
Mundur V. N. Murthy |
151 |
Vivek Borkar |
14 |
Amites Dasgupta |
83 |
Nandita Narain |
152 |
Vivek Monteiro |
15 |
Aniket Sule |
84 |
Naresh Dadhich |
153 |
S. G. Dani |
16 |
Anindita Bhadra |
85 |
Nisha Biswas |
154 |
Mangala Narlikar |
17 |
Anirban Mukherjee |
86 |
Niti Kumar |
155 |
Yashoda Ghanekar |
18 |
Ankan Paul |
87 |
Nixon Abraham |
156 |
Abhijit Mitra |
19 |
Anna George |
88 |
Pallavi Vibhuti |
157 |
Manojendu Choudhury |
20 |
Anup Padmanabhan |
89 |
Partho Sarothi Ray |
158 |
D. P. Kasbekar |
21 |
Argha Banerjee |
90 |
Prabhakar Rajagopal |
159 |
Roop Mallik |
22 |
Arjun Guha |
91 |
Prabir Purkayastha |
160 |
Vijay Lale |
23 |
Arnab Bhattacharya |
92 |
Pradip Dasgupta |
161 |
Aneeshkumar Arimbasseri |
24 |
Asha Gopinathan |
93 |
Pradipta Bandyopadhyay |
162 |
Gitanjali Yadav |
25 |
Atindra N. Pal |
94 |
Prajval Shastri |
163 |
Bhavtosh Bansal |
26 |
Aurnab Ghose |
95 |
Prakash Burte |
164 |
Priya Hasan |
27 |
Avinash Dhar |
96 |
Pranay Goel |
165 |
S. N. Hasan |
28 |
Ayalvadi Ganesh |
97 |
Prasad Subramanian |
166 |
Dhruba Mukhopadhyay |
29 |
Ayan Banerjee |
98 |
R. Ramanujam |
167 |
Resmi Lekshmi |
30 |
Bidisa Das |
99 |
Raghav Rajan |
168 |
B. Ravindran |
31 |
Chayanika Shah |
100 |
Raghunath Chelakkot |
169 |
Jayant Murthy |
32 |
Chetana Sachidanandan |
101 |
Rahul Roy |
170 |
Ashis Kumar Nandy |
33 |
Chinmayee Mishra |
102 |
Rahul Siddharthan |
171 |
Niruj Mohan Ramanujam |
34 |
Chinmoy Chatterjee |
103 |
Rajiva Raman |
172 |
M. C. Arunan |
35 |
Debabrata Ghosh |
104 |
Rama Govindarajan |
173 |
Sandeep K. Shukla |
36 |
Debashis Ghoshal |
105 |
Ramesh Awasthi |
174 |
Nissim Kanekar |
37 |
Debashis Mukherjee |
106 |
Ramkumar Sambasivan |
175 |
Nirupam Roy |
38 |
Debashish Goswami |
107 |
Ramya T. N. C. |
176 |
Manoj Purvankara |
39 |
Deepak Barua |
108 |
Riddhi Shah |
177 |
Rahul Nigam |
40 |
Deepika Choubey |
109 |
Rohini Karandikar |
178 |
Chinmay Mukhopadhyay |
41 |
Devaki Kelkar |
110 |
Rohini Muthuswami |
179 |
Vidyanand Nanjundiah |
42 |
Dibyendu Nandi |
111 |
Rupali Gangopadhyay |
180 |
Jonaki Sen |
43 |
Dinesh Abrol |
112 |
Sabyasachi Chatterjee |
181 |
Nagaraj Balasubramanian |
44 |
Dinu Chandran |
113 |
Saman Habib |
182 |
Collins Assisi |
45 |
Dipshikha Chakravortty |
114 |
Samriddhi Sankar Ray |
183 |
Suhita Nadkarni |
46 |
Dipti Jadhav |
115 |
Samudrala Gourinath |
184 |
Partha P. Majumder |
47 |
Divya Oberoi |
116 |
Saroj Ghaskadbi |
185 |
Soumitro Banerjee |
48 |
Gagandeep Kang |
117 |
Satyajit Mayor |
186 |
Parthiba Basu |
49 |
Gaiti Hasan |
118 |
Satyajit Rath |
187 |
Imroze Khan |
50 |
Gauhar Raza |
119 |
Shailaja Sopory |
188 |
Narmada Khare |
51 |
Gautam Menon |
120 |
Shanta Laishram |
189 |
Kazi Rajibul Islam |
52 |
Geeta Mahashabde |
121 |
Shivprasad Patil |
190 |
Ushak Rahaman |
53 |
Geetha Venkataraman |
122 |
Shobha Madan |
191 |
Koel Das |
54 |
Gyan Prakash |
123 |
Shraddha Kumbhojkar |
192 |
Abhishek Dhar |
55 |
Harita Raval |
124 |
Shubhi Parolia |
193 |
Savita Ladage |
56 |
Harjinder (Laltu) Singh |
125 |
Sitabhra Sinha |
194 |
Kunal Chakraborty |
57 |
Imrana Qadeer |
126 |
Smita Krishnan |
195 |
Mahendra Nadkarni |
58 |
J. G. Krishnayya |
127 |
Sorab Dalal |
196 |
Ashish Asgekar |
59 |
Jagat K Roy |
128 |
Spenta Wadia |
197 |
Supratim Sengupta |
60 |
Jayashree Ramadas |
129 |
Srikanth Sastry |
198 |
Malancha Ta |
61 |
Jayashree Sen Gupta |
130 |
Sriram Ramaswamy |
199 |
U. K. Anandavardhanan |
62 |
Joby Joseph |
131 |
Subhadip Ghosh |
|
|
63 |
Jyotishman Bhowmick |
132 |
Subhadip Mitra |
|
|
64 |
Jyotsna Dhawan |
133 |
Subhash C. Lakhotia |
|
|
65 |
Kapil Paranjape |
134 |
Suchitra Gopinath |
|
|
66 |
Karthikeyan Vasudevan |
135 |
Sudeshna Sinha |
|
|
67 |
Kartik Shanker |
136 |
Sudipto Muhuri |
|
|
68 |
Kumarjit Saha |
137 |
Sugata Ray |
|
|
69 |
L. S. Shashidhara |
138 |
Sugra Chunawala |
|
ಇದನ್ನೂ ಓದಿ
More Articles
By the same author
Related Articles
From the same category