ಆರ್ ಬಿ ಐ ರೆಪೊ ದರ ಕಡಿತ ಮಾಡಿದ ‘ಕ್ರೆಡಿಟ್’ ಪಡೆಯದೇ ಬಿಟ್ಟಾರೆಯೇ ಪ್ರಧಾನಿ ಮೋದಿ?
ಆರ್ ಬಿ ಐ ರೆಪೊದರ ಕಡಿತ ಮಾಡಿದ್ದರಿಂದ ಗ್ರಾಹಕರಿಗೆ ನೆರವಾಗಲಿದೆಯೇ? ಮೇಲ್ನೋಟಕ್ಕೆ ಹೌದು. ಆದರೆ, ರೆಪೊದರ ಕಡಿತದ ಫಲಾನುಭವವನ್ನು ಬ್ಯಾಂಕುಗಳು ತಕ್ಷಣವೇ ಗ್ರಾಹಕರಿಗೆ ವರ್ಗಾಯಿಸುವುದಿಲ್ಲ. ಹೀಗಾಗಿ ತಕ್ಷಣವೇ ಬ್ಯಾಂಕುಗಳ ಬಡ್ಡಿದರ ಇಳಿಯುತ್ತದೆಂದು ಹೇಳಲಾಗದು.
ಭಾರತೀಯ ರಿಸರ್ವ್ ಬ್ಯಾಂಕ್ ರೆಪೊ ದರವನ್ನು 25 ಅಂಶ ಅಂದರೆ, ಶೇ.0.25ರಷ್ಟು ಕಡಿತ ಮಾಡಿದೆ. ರೆಪೊದರ ಈಗ ಶೇ.6ಕ್ಕೆ ಇಳಿದಿದೆ. ಪ್ರಧಾನಿ ನರೇಂದ್ರ ಮೋದಿಯ ಆಪ್ತ ಶಕ್ತಿಕಾಂತ ದಾಸ್ ಅವರು ಆರ್ ಬಿ ಐ ಗವರ್ನರ್ ಆದ ನಂತರ ಸತತವಾಗಿ ಎರಡನೇ ಬಾರಿಗೆ ರೆಪೊದರ ಕಡಿತ ಮಾಡಲಾಗಿದೆ. ಶಕ್ತಿಕಾಂತ ದಾಸ್ ಗವರ್ನರ್ ಹುದ್ದೆ ವಹಿಸಿಕೊಂಡಾಗ ರೆಪೊದರ ಶೇ.6.50ರಷ್ಟಿತ್ತು. ಫೆಬ್ರವರಿ ತಿಂಗಳ ಹಣಕಾಸು ನೀತಿ ಪರಾಮರ್ಶೆ ವೇಳೆ ಶೇ.0.25ರಷ್ಟು ಕಡಿತ ಮಾಡಲಾಗಿತ್ತು. ಪ್ರಸಕ್ತ ವಿತ್ತೀಯ ವರ್ಷದ (2019-20)ಮೊದಲ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆಯು ಶೇ.0.25ರಷ್ಟು ರೆಪೊದರ ಕಡಿತ ಮಾಡಲು ನಿರ್ಧರಿಸಿದೆ.
ಬ್ಯಾಂಕುಗಳು ಅಲ್ಪಾವಧಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಪಡೆಯುವ ಸಾಲದ ಮೇಲಿನ ಬಡ್ಡಿದರಕ್ಕೆ ರೆಪೊದರ ಎನ್ನುತ್ತಾರೆ. ಹಾಗೆಯೇ ಬ್ಯಾಂಕುಗಳು ಆರ್ ಬಿ ಐ ನಲ್ಲಿ ಇಡುವ ಠೇವಣಿಗೆ ನೀಡುವ ಬಡ್ಡಿದರವೇ ರಿವರ್ಸ್ ರೆಪೊ ದರ. ಪ್ರಸ್ತುತ ರಿವರ್ಸ್ ರೆಪೊದರವನ್ನು ಶೇ.0.25ರಷ್ಟು ಕಡಿತ ಮಾಡಲಾಗಿದ್ದು ಶೇ.6.25ಕ್ಕೆ ಇಳಿದಿದೆ.
2019-20ನೇ ಸಾಲಿನ ಮೊದಲ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆ ನಂತರ ಆರ್ ಬಿ ಐ ಗವರ್ನರ್ ಶಕ್ತಿಕಾಂತ ದಾಸ್ ರೆಪೊದರ ಕಡಿತ ಮಾಡಿರುವ ನಿರ್ಧಾರ ಪ್ರಕಟಿಸಿದರು. ಹಣಕಾಸುನೀತಿಸಮಿತಿಯಆರುಸದಸ್ಯರಪೈಕಿನಾಲ್ವರುದರಕಡಿತದಪರವಾಗಿ, ಇಬ್ಬರವಿರೋಧವಾಗಿಮತಹಾಕಿದ್ದಾರೆ.
ಜಿಡಿಪಿಅಭಿವೃದ್ಧಿದರಕಡಿತ
ಹಣಕಾಸು ನೀತಿ ಸಮಿತಿಯು ಪ್ರಸಕ್ತ ವಿತ್ತೀಯ ವರ್ಷದ ಜಿಡಿಪಿ ಅಭಿವೃದ್ಧಿ ಮುನ್ನೋಟ ದರವನ್ನು ಶೇ.7.4ರಿಂದ ಶೇ.7.2ಕ್ಕೆ ತಗ್ಗಿಸಿದೆ. ವಿತ್ತೀಯ ವರ್ಷದ ಪೂರ್ವಾರ್ಧದಲ್ಲಿ ಜಿಡಿಪಿ ದರವು ಶೇ.6.7-7.1ರಷ್ಟಾಗಲಿದ್ದು, ಉತ್ತರಾರ್ಧದಲ್ಲಿ ಶೇ.7.3-7.4ಕ್ಕೆ ಜಿಗಿಯುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ. ಅತ್ತ ಚುನಾವಣಾ ಪ್ರಚಾರ ಸಭೆಗಳಲ್ಲಿ ಭಾರತ ಶೇ.8ರಷ್ಟು ಅಭಿವೃದ್ಧಿ ದಾಖಲಿಸುತ್ತಿದೆ ಎಂದು ಪ್ರಧಾನಿ ಮೋದಿ ಮತ್ತವರ ಹಿಂಬಾಲಕರು ಹೇಳುತ್ತಿದ್ದರೆ, ಇತ್ತ, ಆರ್ ಬಿ ಐ ಜಿಡಿಪಿ ಮುನ್ನೋಟವನ್ನು ತಗ್ಗಿಸಿರುವುದು ಗಮನಾರ್ಹ. ಮೋದಿ ಜಾರಿಗೆ ತಂದ ಅಪನಗದೀಕರಣದ ಕಾರ್ಮೋಡಗಳ ಕರಿನೆರಳು ಭಾರತದ ಆರ್ಥಿಕತೆಯ ಮೇಲೆ ಇನ್ನೂ ದಟ್ಟವಾಗಿವೆ ಎಂದೇ ಅರ್ಥ.
2019-20 ನೇ ಸಾಲಿನಲ್ಲಿ ಚಿಲ್ಲರೆ ದರ ಹಣದುಬ್ಬರ ಸೂಚ್ಯಂಕ (ಸಿಪಿಐ)ದ ಗುರಿಯನ್ನು ಶೇ.3ರಿಂದ ಶೇ.2.4ಕ್ಕೆ ಪರಿಷ್ಕರಿಸಲಾಗಿದೆ. ಬರುವದಿನಗಳಲ್ಲಿಭಾರತದಆರ್ಥಿಕತೆಯುಸಾಕಷ್ಟುಅಡೆತಡೆಗಳನ್ನುಎದುರಿಸಲಿದೆಎಂದುಹಣಕಾಸುನೀತಿಸಮಿತಿಹೇಳಿದೆ. ಆರ್ ಬಿ ಐ ಪ್ರಸಕ್ತದ್ವೈಮಾಸಿಕದಲ್ಲೂತಟಸ್ಥನಿಲುವನ್ನುಮುಂದುವರೆಸಲಿದೆ. ಅಂತಾರಷ್ಟ್ರೀಯಮಾರುಕಟ್ಟೆಯಲ್ಲಿನಇಂಧನದರಮುನ್ನೋಟವುಅಸ್ಪಷ್ಟವಾಗಿದೆ. ಸರ್ಕಾರದಮಟ್ಟದಲ್ಲಿವಿತ್ತೀಯಪರಿಸ್ಥಿತಿಯಮೇಲೆನಿಗಾಇಡುವುದುಅತ್ಯಗತ್ಯ. ಖಾಸಗಿವಲಯದಲ್ಲಿನಹೂಡಿಕೆಗೆಆದ್ಯತೆನೀಡಬೇಕುಎಂದುಸಭೆನಂತರಗವರ್ನರ್ಹೇಳಿದರು.
ಶಕ್ತಿಕಾಂತ್ ದಾಸ್
ಗ್ರಾಹಕರಿಗೆನೆರವಾಗಲಿದೆಯೇ?
ಆರ್ ಬಿ ಐ ರೆಪೊದರ ಕಡಿತ ಮಾಡಿದ್ದರಿಂದ ಗ್ರಾಹಕರಿಗೆ ನೆರವಾಗಲಿದೆಯೇ? ಮೇಲ್ನೋಟಕ್ಕೆ ಹೌದು. ಆದರೆ, ರೆಪೊದರ ಕಡಿತದ ಫಲಾನುಭವವನ್ನು ಬ್ಯಾಂಕುಗಳು ತಕ್ಷಣವೇ ಗ್ರಾಹಕರಿಗೆ ವರ್ಗಾಯಿಸುವುದಿಲ್ಲ. ಹೀಗಾಗಿ ತಕ್ಷಣವೇ ಬ್ಯಾಂಕುಗಳ ಬಡ್ಡಿದರ ಇಳಿಯುತ್ತದೆಂದು ಹೇಳಲಾಗದು. ಆದರೆ, ಹಿಂದಿನಿಂದಲೂ ರೆಪೊದರ ಕಡಿತಕ್ಕೆ ಅನುಗುಣವಾಗಿ ಬಡ್ಡಿದರವನ್ನು ಕಡಿತ ಮಾಡಬೇಕು ಎಂದು ಆರ್ ಬಿ ಐ ಬ್ಯಾಂಕುಗಳಿಗೆ ನಿರ್ದೇಶನ ನೀಡುತ್ತಲೇ ಬಂದಿದೆ. ಆದರೆ, ಬ್ಯಾಂಕುಗಳು ನಿಧಾನವಾಗಿ ಬಡ್ಡಿದರ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಹಿಸುತ್ತವೆ. ಆದರೆ, ಗ್ರಾಹಕರು ಬ್ಯಾಂಕುಗಳಲ್ಲಿ ಇಟ್ಟ ಠೇವಣಿಗಳ ಮೇಲಿನ ಬಡ್ಡಿದರವನ್ನು ತ್ವರಿತವಾಗಿ ಕಡಿತ ಮಾಡುತ್ತವೆ.
ರೆಪೊದರ ಕಡಿತದಿಂದ ಬರುವ ದಿನಗಳಲ್ಲಿ ಗೃಹ ಸಾಲ, ವಾಹನಸಾಲ, ಗೃಹೋಪಯೋಗಿ ವಸ್ತುಗಳ ಸಾಲ, ವೈಯಕ್ತಿಕ ಸಾಲದ ಮೇಲಿನ ಬಡ್ಡಿದರ ಕೊಂಚ ಇಳಿಯಲಿದೆ. ಇದೇ ವೇಳೆ, ಗ್ರಾಹಕರು ಠೇವಣಿ ಮೇಲಿನ ಬಡ್ಡಿದರವೂ ತಗ್ಗುತ್ತದೆ. ಹೀಗಾಗಿ ರೆಪೊದರ ಕಡಿತ ಸಾಲ ಪಡೆಯುವವರಿಗೆ ಎಷ್ಟು ಅನುಕೂಲವೋ, ಠೇವಣಿ ಇಟ್ಟು ಬರುವ ಬಡ್ಡಿಯಿಂದ ಜೀವನ ನಡೆಸುವವರಿಗೆ ಅಷ್ಟೇ ಅನನುಕೂಲ.
ಆದರೆ, ಬಡ್ಡಿದರ ಕಡಿತ ಮಾಡುವುದರಿಂದ ಈಗಾಗಲೇ ಹಿಂಜರಿತ ಅನುಭವಿಸುತ್ತಿರುವ ರಿಯಲ್ ಎಸ್ಟೇಟ್ ವಲಯ, ಆಟೋಮೊಬೈಲ್ ವಲಯ, ತ್ವರಿತ ಮಾರಾಟವಾಗುವ ಗೃಹೋಪಯೋಗಿ, ಗೃಹಬಳಕೆ ವಸ್ತುಗಳ ವಲಯಕ್ಕೆ ಚೇತರಿಕೆ ಬರುತ್ತದೆ. ಸಿದ್ದವಾಗಿರುವ ಲಕ್ಷಾಂತರ ಫ್ಲ್ಯಾಟ್ ಮಾರಾಟವಾಗದೇಮತ್ತುಹಣವಿಲ್ಲದೇಅರ್ಧಕ್ಕೆನಿಂತಯೋಜನೆಗಳನ್ನುಪೂರ್ಣಗೊಳಿಸಲಾಗದಕಾರಣಕ್ಕೆರಿಯಲ್ಎಸ್ಟೇಟ್ಉದ್ಯಮತೀವ್ರಹಿಂಜರಿತಅನುಭವಿಸಿದೆ. ಬಡ್ಡಿದರಕಡಿತದಿಂದಗ್ರಾಹಕರುಫ್ಲ್ಯಾಟ್ಖರೀದಿಗೆಮುಂದಾಗುವುದರಿಂದಇಡೀಉದ್ಯಮಕ್ಕೆಚೇತರಿಕೆದಕ್ಕುತ್ತದೆ. ಕೆಲವುತಿಂಗಳಿಂದಕಾರು, ಬೈಕು, ಸರಕುಸಾಗಣೆವಾಹನಗಳಮಾರಾಟದಲ್ಲೂಹಿಂಜರಿತಕಂಡಿದೆ. ಈಗಬಡ್ಡಿದರಕಡಿತಮಾಡಿರುವುದುಆಟೋಮೊಬೈಲ್ಉದ್ಯಮಕ್ಕೆಚೇತರಿಕೆನೀಡಲಿದೆ. ಬಡ್ಡಿದರಕಡಿತಮಾಡುವುದರಿಂದಮಾರುಕಟ್ಟೆಯಲ್ಲಿನಗದುಹರಿವುಹೆಚ್ಚಿಆರ್ಥಿಕತೆಗೆಉತ್ತೇಜನಸಿಗುತ್ತದೆ.
ಬಡ್ಡಿದರಕಡಿತದಕ್ರೆಡಿಟ್ಪಡೆಯುವರೇಪ್ರಧಾನಿನರೇಂದ್ರಮೋದಿ?
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಾಲಕೋಟ್ ಏರ್ ಸ್ಟ್ರೈಕ್, ಎ-ಸ್ಯಾಟ್ ಸೇರಿದಂತೆ ಎಲ್ಲರದಲ್ಲೂ ‘ಕ್ರೆಡಿಟ್’ ಪಡೆಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಬಡ್ಡಿದರ ಕಡಿತದ ಕ್ರೆಡಿಟ್ ಪಡೆದರೂ ಅಚ್ಚರಿಯಿಲ್ಲ. ಮುಂದಿನ ಎರಡು ಮೂರು ದಿನಗಳಲ್ಲಿ ಅವರ ಚುನಾವಣಾ ಪ್ರಚಾರ ಭಾಷಣದಲ್ಲಿ ಬಡ್ಡಿದರ ಕಡಿತವನ್ನೂ ತಾವೇ ಮಾಡಿದ್ದಾಗಿ ಹೇಳಿಕೊಳ್ಳಲೂಬಹುದು.
ನರೇಂದ್ರ ಮೋದಿ ಆಡಳಿತದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮೂರು ಮಂದಿ ಗವರ್ನರ್ ಗಳನ್ನು ಕಂಡಿದೆ. ಮೋದಿ ಸರ್ಕಾರದ ಅಸಹಿಷ್ಣತೆ ಬಗ್ಗೆ ದನಿ ಎತ್ತಿದ್ದ ರಘುರಾಮ್ ರಾಜನ್ ಅವರಿಗೆ ಎರಡು ವರ್ಷಗಳ ವಿಸ್ತರಣೆ ನೀಡಿರಲಿಲ್ಲ. ಹಿಂದಿನ ಐದು ಮಂದಿ ಗವರ್ನರ್ ಗಳೂ ಮೂರು ವರ್ಷ ಪೂರೈಸಿದ ನಂತರ ಎರಡು ವರ್ಷಗಳ ವಿಸ್ತರಣೆ ಪಡೆದಿದ್ದರು. ಕಳೆದ ಇಪ್ಪತ್ತೈದು ವರ್ಷಗಳಲ್ಲಿ ವಿಸ್ತರಣೆ ನಿರಾಕರಿಸಿದ್ದು ರಘುರಾಮ್ ರಾಜನ್ ಅವರಿಗೆ ಮಾತ್ರ.
ರಾಜನ್ ಅವರ ಉತ್ತರಾಧಿಕಾರಿಯಾಗಿ ಬಂದಿದ್ದು ಗುಜರಾತ್ ಮೂಲದ ಊರ್ಜಿತ್ ಪಟೇಲ್. ಅಪನಗದೀಕರಣ ಯೋಜನೆ ಜಾರಿ ಸೇರಿದಂತೆ ಊರ್ಜಿತ್ ಪಟೇಲ್ ಸಹ ಮೋದಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ನಿಷ್ಕ್ರಿಯ ಸಾಲದ ಪ್ರಮಾಣ ಗರಿಷ್ಠ ಮಟ್ಟಕ್ಕೆ ಮುಟ್ಟಿದ್ದರಿಂದ 11 ಸಾರ್ವಜನಿಕ ವಲಯದ ಬ್ಯಾಂಕುಗಳ ಮೇಲೆ ಆರ್ ಬಿ ಐ ಹೇರಿದ ತ್ವರಿತ ಸುಧಾರಣಾ ಕ್ರಮಗಳನ್ನು (ಪಿಸಿಎ) ಸಡಿಲಿಸುವಂತೆ ಕೇಂದ್ರ ಸರ್ಕಾರ ಒತ್ತಡ ಹೇರಿತ್ತು. ನಂತರ ಸೆಕ್ಷನ್ 7 ಅನ್ನು ಜಾರಿ ಮಾಡುವುದಾಗಿ ಪರೋಕ್ಷ ಬೆದರಿಕೆ ಹಾಕಿದ್ದು ಊರ್ಜಿತ್ ಮತ್ತು ಮೋದಿ ಸರ್ಕಾರದ ನಡುವೆ ಮತ್ತಷ್ಟು ಕಂದಕ ಸೃಷ್ಟಿಸಿತ್ತು. ಆರ್ ಬಿ ಐ ಕಾಯ್ದೆ ಅಡಿಯಲ್ಲಿ ಸೆಕ್ಷನ್ 7ರಡಿ ಕೇಂದ್ರ ಸರ್ಕಾರವು ನಿರ್ಧಿಷ್ಟ ಸಂದರ್ಭಗಳಲ್ಲಿ ಆರ್ ಬಿ ಐಗೆ ನಿರ್ದೇಶನ ನೀಡಲು ಅವಕಾಶ ಇದೆ. ಆದರೆ, ಇದುವರೆಗೆ ಸೆಕ್ಷನ್ 7 ಬಳಕೆಯಾಗಿರಲಿಲ್ಲ ಎಂಬುದು ಗಮನಾರ್ಹ. ಆರ್ ಬಿ ಐ ಆಡಳಿತ ಮಂಡಳಿಗೆ ಸಂಘಪರಿವಾರದ ಎಸ್ ಗುರುಮೂರ್ತಿ ನಿಯೋಜಿಸಿದ್ದೂ ಅಸಮಾಧಾನಕ್ಕೆ ಕಾರಣವಾಗಿತ್ತು. ಊರ್ಜಿತ್ ಪಟೇಲ್ ತಮ್ಮ ಹುದ್ದೆ ತೊರೆಯುವ ಮುನ್ನ ಡಿಸೆಂಬರ್ ತಿಂಗಳಲ್ಲಿ ನಡೆಸಿದ ದ್ವೈಮಾಷಿಕ ಹಣಕಾಸು ನೀತಿ ಸಭೆಯಲ್ಲಿ ಬಡ್ಡಿದರ ಕಡಿತ ಮಾಡಲಿಲ್ಲ.
ಊರ್ಜಿತ್ ಹಠಾತ್ ನಿರ್ಗಮನದಿಂದ ತೆರವಾದ ಸ್ಥಾನಕ್ಕೆ ಬಂದವರು ಹಣಕಾಸು ಇಲಾಖೆಯಲ್ಲಿ ಕಾರ್ಯದರ್ಶಿಯಾಗಿದ್ದ ಶಕ್ತಿಕಾಂತ ದಾಸ್. ಅವರು ಗವರ್ನರ್ ಆದ ನಂತರ ನಡೆದ ಎರಡು ದ್ವೈಮಾಸಿಕ ಹಣಕಾಸು ನೀತಿ ಸಭೆಯಲ್ಲೂ ಸತತವಾಗಿ ಬಡ್ಡಿದರ ಇಳಿಸಿದ್ದಾರೆ. ಜೂನ್ ತಿಂಗಳಲ್ಲೂ ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಚುನಾವಣಾ ಸಂದರ್ಭದಲ್ಲಿ ಬಡ್ಡಿದರ ಕಡಿತ ಮಾಡಿದರೆ ಆಡಳಿತಾರೂಢ ಪಕ್ಷಕ್ಕೆ ಅನುಕೂಲ. ಶಕ್ತಿಕಾಂತ್ ದಾಸ್ ಸತತ ಎರಡು ಬಾರಿ ಬಡ್ಡಿದರ ಕಡಿತ ಮಾಡಿ ಪರೋಕ್ಷವಾಗಿ ಮೋದಿಗೆ ನೆರವಾಗಿದ್ದಾರೆ. ಪ್ರಧಾನಿ ಮೋದಿ ಇದರ ಕ್ರೆಡಿಟ್ ಪಡೆಯದೇ ಬಿಟ್ಟಾರೆಯೇ?