ನವದೆಹಲಿ: ಐಐಟಿ ಬಾಂಬೆಯ ಬಿಟೆಕ್ ವಿದ್ಯಾರ್ಥಿ ಕಾನಿಷ್ಕ್ ಕಟಾರಿಯಾ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಸೃಷ್ಠಿ ಜಯಂತ್ ದೇಶಮುಖ್ 5ನೇ ರ್ಯಾಂಕ್ ಪಡೆದು ಮಹಿಳಾ ಟಾಪರ್ ಎನಿಸಿಕೊಂಡಿದ್ದಾರೆ. ಕರ್ನಾಟಕದ ಅಭ್ಯರ್ಥಿ ರಾಹುಲ್ ಶರಣಪ್ಪ ಸಂಕನೂರ್ 17ನೇ ರ್ಯಾಂಕ್ ಪಡೆಯುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಯುಪಿಎಸ್ ಸಿ ಪಾಸಾದ ಅಭ್ಯರ್ಥಿಗಳ ಪೈಕಿ ಕರ್ನಾಟಕದ 23 ಅಭ್ಯರ್ಥಿಗಳಿದ್ದು ಅವರಲ್ಲಿ 17ನೇ ರ್ಯಾಂಕ್c ಪಡೆದಿರುವ ಹುಬ್ಬಳ್ಳಿಯ ರಾಹುಲ್ ಶರಣಪ್ಪ ಶಂಕನೂರ ಮೊದಲಿಗರಾಗಿದ್ದಾರೆ. ನಂತರದಲ್ಲಿ ಲಕ್ಷ್ಮೀ ಎನ್ (45ನೇ ರ್ಯಾಂಕ್), ಆಕಾಶ್ (78ನೇ ರ್ಯಾಂಕ್) ಮತ್ತು ಕೃತಿಕಾ (78ನೇ ರ್ಯಾಂಕ್) ಇದ್ದಾರೆ.
ದೇಶದ ಅತ್ಯುನ್ನತ ನಾಗರಿಕ ಸೇವೆಗಳಾದ ಐಎಎಸ್, ಐಎಫ್ ಎಸ್, ಐಪಿಎಸ್, ಮತ್ತು ಎ ಹಾಗೂ ಬಿ ವೃಂದದ ಕೇಂದ್ರ ಸೇವೆಗಳಿಗೆ ಕೇಂದ್ರ ಲೋಕ ಸೇವಾ ಆಯೋಗ (ಯುಪಿಎಸ್ಸಿ) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ 2018ನೇ ಸಾಲಿನ ಅಂತಿಮ ಫಲಿತಾಂಶವನ್ನು ಯುಪಿಎಸ್ ಸಿ ಪ್ರಕಟಿಸಿದ್ದು ಒಟ್ಟು 759 ಅಭ್ಯರ್ಥಿಗಳನ್ನು (577 ಪುರುಷರು, 181 ಮಹಿಳೆಯರು) ಆಯ್ಕೆ ಮಾಡಿರುವ ಯುಪಿಎಸ್ಸಿ ವಿವಿಧ ಹುದ್ದೆಗಳಿಗೆ ಶಿಫಾರಸು ಮಾಡಿದೆ.
ಟಾಪರ್ ಆಗಿ ಆಯ್ಕೆ ಆಗಿರುವ ಕಾನಿಷ್ಕ್ ಕಟಾರಿಯಾ ರಾಜಾಸ್ತಾನದ ಪರಿಶಿಷ್ಟ ಜಾತಿಯ ದಲಿತ ಕುಟುಂಬವೊಂದರಿಂದ ಬಂದಿದ್ದು ಐಐಟಿ ಬಾಂಬೆಯಲ್ಲಿ ಬಿ.ಟೆಕ್ ಬಿ.ಟೆಕ್ (ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್) ಪದವಿ ಪಡೆದಿದ್ದಾರೆ. ಪ್ರಥಮ ಪ್ರಯತ್ನದಲ್ಲೇ ಐಎಎಸ್ ಪ್ರಥಮ ರ್ಯಾಂಕ್ ಪಡೆದು ಸಾಧನೆಗೈದಿರುವ ಕಾನಿಷ್ಕ್ ಯುಪಿಎಸ್ ಸಿಯಲ್ಲಿ ಗಣಿತಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆರಿಸಿಕೊಂಡಿದ್ದರು. ಐಐಟಿ ಪದವಿಯ ನಂತರ ಕಾನಿಷ್ಕ್ ಒಂದೆರಡು ವರ್ಷ ಕೊರಿಯಾದಲ್ಲಿ ವೈಜ್ಞಾನಿಕ ವಿಶ್ಲೇಶಕನಾಗಿ ವೃತ್ತಿ ಅನುಭವ ಪಡೆದಿದ್ದರು.
ಫಲಿತಾಂಶದ ಕುರಿತು ಎಎನ್ ಐ ಗೆ ಪ್ರತಿಕ್ರಿಯಿಸಿರುವ ಕಾನಿಷ್ಕ್ ಕಟಾರಿಯಾ, “ಇದು ನನಗೆ ನಿಜಕ್ಕೂ ಆಶ್ಚರ್ಯವುಂಟು ಮಾಡಿದೆ. ಮೊದಲ ರ್ಯಾಂಕ್ ಪಡೆಯುತ್ತೇನೆಂದು ನಾನು ನಿರೀಕ್ಷಿಸಿಯೇ ಇರಲಿಲ್ಲ. ನಮ್ಮ ತಂದೆ ತಾಯಿ, ಸೋದರಿ ಮತ್ತು ನನ್ನ ಗರ್ಲ್ ಫ್ರೆಂಡ್ ಗೆ ನಾನು ಅವರೆಲ್ಲಾ ನೀಡಿರುವ ಸಹಾಯ ಮತ್ತು ನೈತಿಕ ಬೆಂಬಲಕ್ಕಾಗಿ ವಂದಿಸುತ್ತೇನೆ” ಹೇಳಿದ್ದಾರೆ. “ಜನರು ನಾನೊಬ್ಬ ಉತ್ತಮ ಆಡಳಿತಗಾರನಾಗಬೇಕೆಂದು ಬಯಸುತ್ತಾರೆ ಮತ್ತು ನನ್ನ ಉದ್ದೇಶವೂ ಅದೇ ಆಗಿದೆ” ಎಂದು ಕಾನಿಷ್ಕ್ ಹೇಳಿದ್ದಾರೆ.
Kanishak Kataria, AIR 1 in #UPSC final exam: It's a very surprising moment. I never expected to get the 1st rank. I thank my parents, sister & my girlfriend for the help & moral support. People will expect me to be a good administrator & that's exactly my intention. #Rajasthan pic.twitter.com/IBwhW8TJUs
— ANI (@ANI) April 5, 2019
2018ರ ಸಾಲಿನ ಸಿವಿಲ್ ಸರ್ವಿಸ್ ಹುದ್ದೆಗಳ ಆಯ್ಕೆಗೆ 2018ರ ಸೆಪ್ಟೆಂಬರ್-ಅಕ್ಟೋಬರ್ ನಲ್ಲಿ ಮುಖ್ಯ ಲಿಖಿತ ಪರೀಕ್ಷೆ ನಡೆದಿತ್ತಲ್ಲದೇ, ಕಳೆದ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಸಂದರ್ಶನ ನಡೆಸಲಾಗಿತ್ತು.
ಅಕ್ಷತ್ ಜೈನ್, ಜುನೈದ್ ಅಹಮದ್, ಶ್ರೇಯಾಂಸ್ ಕುಮಟ್ ಕ್ರಮವಾಗಿ 2,3 ಮತ್ತು 4ನೇ ರ್ಯಾಂಕ್ ಪಡೆದಿದ್ದಾರೆ. 5ನೇ ರ್ಯಾಂಕ್ ಪಡೆದಿರುವ ಸೃಷ್ಠಿ ದೇಶಮುಖ್ ಮಧ್ಯಪ್ರದೇಶ ಭೂಪಾಲ್ ನವರಾಗಿದ್ದು ಬಿ.ಇ. ಪದವಿ ಪಡೆದಿದ್ದಾರೆ.
ಕರ್ನಾಟಕದ 23 ಪಟ್ಟಿಗಳ ಪಟ್ಟಿ ಇಲ್ಲಿದೆ
-
ರಾಹುಲ್ ಶರಣಪ್ಪ ಶಂಕನೂರ -17ನೇ ರ್ಯಾಂಕ್
-
ಲಕ್ಷ್ಮೀ ಎನ್ -45ನೇ ರ್ಯಾಂಕ್
-
ಆಕಾಶ್ ಎಸ್ -78ನೇ ರ್ಯಾಂಕ್
-
ಕೃತಿಕಾ -100ನೇ ರ್ಯಾಂಕ್
-
ಕೌಶಿಕ್ ಎಚ್ಆರ್ -240ನೇ ರ್ಯಾಂಕ್
-
ವಿವೇಕ್ ಎಚ್ ಬಿ -257ನೇ ರ್ಯಾಂಕ್
-
ನಿವೇದಿತಾ -303ನೇ ರ್ಯಾಂಕ್
-
ಗಿರೀಶ್ ಧರ್ಮರಾಜ್ ಕಲಗೊಂಡ್ -307ನೇ ರ್ಯಾಂಕ್
-
ಮಿರ್ಜಾ ಖಾದರ್ ಬೈಗಿ -336ನೇ ರ್ಯಾಂಕ್
-
ತೇಜಸ್ ಯುಪಿ -338ನೇ ರ್ಯಾಂಕ್
-
ಹರ್ಷವರ್ಧನ್ ಬಿಜೆ -352ನೇ ರ್ಯಾಂಕ್
-
ಫಕೀರೇಶ್ ಕಲ್ಲಪ್ಪ ಬಾದಾಮಿ -372ನೇ ರ್ಯಾಂಕ್
-
ಡಾ. ನಾಗಾರ್ಜುನ ಗೌಡ -418ನೇ ರ್ಯಾಂಕ್
-
ಅಶ್ವಿಜಾ ಬಿವಿ -423ನೇ ರ್ಯಾಂಕ್
-
ಮಂಜುನಾಥ್ ಆರ್ -495ನೇ ರ್ಯಾಂಕ್
-
ಬೃಂದಾ ಎಸ್ -496ನೇ ರ್ಯಾಂಕ್
-
ಹೇಮಂತ್ -612ನೇ ರ್ಯಾಂಕ್
-
ಶೃತಿ ಎಂಕೆ -637ನೇ ರ್ಯಾಂಕ್
-
ವೆಂಕಟ್ ರಾಮ್ -694ನೇ ರ್ಯಾಂಕ್
-
ಸಂತೋಷ ಹೆಚ್ -753ನೇ ರ್ಯಾಂಕ್
-
ಅಶೋಕ್ ಕುಮಾರ್ ಎಸ್ -711ನೇ ¾ಂಕ್
-
ರಾಘವೇಂದ್ರ ಎನ್ -739ನೇ ರ್ಯಾಂಕ್
-
ಶಶಿಕಿರಣ್ -754ನೇ ರ್ಯಾಂಕ್