ನಾನು ಕಳೆದ ತಿಂಗಳು ಮಂಗಳೂರಿನ ಒಂದು ಪುಸ್ತಕದ ಮಳಿಗೆಯಲ್ಲಿ ನನಗೆ ಬೇಕಾಗಿದ್ದ ಒಂದು ಪುಸ್ತಕ ಹುಡುಕುತ್ತಿದ್ದೆ. ಅಲ್ಲಿ ನನಗೆ ಒಬ್ಬ ಹಳೆಯ ಪರಿಚಿತರು ಸಿಕ್ಕಿದರು. ಅವರು ನನ್ನ ಜತೆ ಮಾತನಾಡುತ್ತಾ- ನಿಮ್ಮ ಹತ್ತಿರ ಯಾವುದಾದರೂ ಉತ್ತಮ ಸರ್ದಾರ್ಜಿ ಜೋಕ್ ಪುಸ್ತಕಗಳು ಇದ್ದರೆ ಕೊಡಿ ಎಂದು ಹೇಳಿದರು. 55 ವರ್ಷ ದಾಟಿದ ಅವರಿಗೆ ಸರ್ದಾರ್ಜಿ ಜೋಕ್ ಪುಸ್ತಕಗಳ ಬಗ್ಗೆ ಯಾಕೆ ಒಮ್ಮೆಲೇ ಆಸಕ್ತಿ ಹುಟ್ಟಿತು ಎಂದು ನನಗೆ ಆಶ್ಚರ್ಯವಾಯಿತು. ಹಾಗಾಗಿ ನಾನು ಅವರಲ್ಲಿ ಕೇಳಿದೆ- ನಿಮಗೆ ಈ ಇಳಿ ವಯಸ್ಸಿನಲ್ಲಿ ಸರ್ದಾರ್ಜಿ ಜೋಕುಗಳ ಪುಸ್ತಕ ಯಾಕೆ ಬೇಕಾಯಿತು ಎಂದು. ಅವರು ಮುಜುಗರ ಪಡುತ್ತಾ -ನಾನು ಬಿಜೆಪಿ ಐಟಿ ಸೆಲ್ ನಲ್ಲಿ ಕೆಲಸ ಮಾಡುತ್ತಿದ್ದೇನೆ, ಅವರು ಕಳುಹಿಸುವ ಪೋಸ್ಟ್ ಗಳನ್ನು ಸಾಮಾಜಿಕ ಮೀಡಿಯಾದಲ್ಲಿ ಯಥಾವತ್ ಕಾಪಿ ಪೇಸ್ಟ್ ಫಾರ್ವರ್ಡ್ ಮಾಡುವುದೇ ನನ್ನ ಕೆಲಸ. ಒಂದು ಪೋಸ್ಟ್ ಗೆ ರೂ. 5/- ಕೊಡುತ್ತಾರೆ. ಯೂಟೂಬ್ ನಲ್ಲಿ ರಾಜಕೀಯ ವಿಡಿಯೋಗಳ ಕೆಳಗೆ ಹಾಕುವ ಹೊಲಸು ಬೈಗುಳಗಳ ಕಾಮೆಂಟಿಗೂ ನಮಗೆ ಹಣ ಸಿಗುತ್ತದೆ. ಮೋದಿಗೆ ಹೊಲಸು ಬೈಗುಳ ಓದುವುದೆಂದರೆ ತುಂಬಾ ಇಷ್ಟವಂತೆ, ಅವರ ಹುಟ್ಟು ಸಂಸ್ಕಾರ ಅಂತಹದ್ದು! ಅವರು ದಿನದ 12 ಗಂಟೆ ಸಾಮಾಜಿಕ ಮೀಡಿಯಾ ಜಾಲಾಡುವುದರಲ್ಲಿಯೇ ಕಳೆಯುತ್ತಾರೆ ಎಂದು ಆ ಗ್ರಹಸ್ಥರು ನನಗೆ ಹೇಳಿದರು. (ಇದನ್ನೇ ಅವರ ಭಕ್ತರು ಮೋದಿ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ ಎಂದು ಬಡಾಯಿ ಕೊಚ್ಚುವುದು).
ಅವರಿಗೆ ಸರ್ದಾರ್ಜಿ ಜೋಕ್ ಪುಸ್ತಕಗಳು ಬೇಕಿರುವುದಕ್ಕೆ ಕಾರಣ ಅವುಗಳಲ್ಲಿಯ ಜೋಕುಗಳನ್ನು ಸ್ವಲ್ಪ ಬದಲಾವಣೆ ಮಾಡಿ ಅವು ರಾಹುಲ್ ಗಾಂಧಿಗೆ ಅನ್ವಯ ಆಗುವಂತೆ ತಿರುಚಿ ಬಿಜೆಪಿ ಐಟಿ ಸೆಲ್ ಗೆ ಕಳುಹಿಸಿದರೆ ಒಂದು ಒಳ್ಳೆಯ ಜೋಕಿಗೆ ಕನಿಷ್ಠ ರೂ.100/- ಕೊಡುತ್ತಾರೆ, ಹೊಸತರದ ಉತ್ತಮ ಜೋಕ್ ಆಗಿದ್ದರೆ ರೂ 200/- ಸಹಾ ಕೊಡುತ್ತಾರಂತೆ. ಅದಕ್ಕಾಗಿ ಅವರು ಸರ್ದಾರ್ಜಿ ಜೋಕ್ ಪುಸ್ತಕಗಳನ್ನು ಹುಡುಕುತ್ತಿದ್ದದ್ದು.
ರಾಹುಲ್ ಗಾಂಧಿ ಕ್ಯಾಂಬ್ರೀಡ್ಜ್ ನಲ್ಲಿ ಎಂ.ಫಿಲ್ ಮಾಡಿದ್ದಾರೆ, ಜತೆಗೆ ಬಿಜ್ನೆಸ್ ಮ್ಯಾನೇಜ್ಮೆಂಟ್ ಕೋರ್ಸ್ ಸಹಾ ಮಾಡಿದ್ದಾರೆ. ಲಂಡನ್ ನಲ್ಲಿ ಒಂದು ಟೆಕ್ ಕಂಪನಿಯಲ್ಲಿ ಡೈರೆಕ್ಟರ್ ಸಹಾ ಆಗಿದ್ದರು. ಅವರನ್ನು ಲೇವಡಿ ಮಾಡುವಷ್ಟು ಯೋಗ್ಯತೆ ಪಿಯೂಸಿಯಲ್ಲಿ ಮೂರು ಸಾರಿ ಫೇಲಾಗಿ ಶಾಲೆ ಅರ್ಧಕ್ಕೆ ಬಿಟ್ಟಿರುವ ಸ್ವತಃ ನಿಮಗೆ ಅಥವಾ ನಿಮ್ಮ ಅರೆಸಾಕ್ಷರ ಮೋದಿಗೆ ಇದೆಯೇ? ಗುಜರಾತಿ ಮಾಧ್ಯಮ ಶಾಲೆಯಲ್ಲಿ ಕೇವಲ ಎಂಟನೇ ಕ್ಲಾಸ್ ವರೆಗೆ ಮಾತ್ರ ಕಲಿತಿರುವ ಮೋದಿಗೆ ಸರಿಯಾಗಿ ಇಂಗ್ಲೀಷ್ ಸಹಾ ಮಾತನಾಡಲು ಬರುವುದಿಲ್ಲ, ಆದರೂ ನೀವು ಅವಿದ್ಯಾವಂತ ಮೋದಿಗಾಗಿ ವಿದ್ಯಾವಂತ ರಾಹುಲ್ ಗಾಂಧಿಯನ್ನು ಲೇವಡಿ ಮಾಡುವುದು ಸರಿಯೇ? ಎಂದು ನಾನು ಕೇಳಿದೆ. ಅದಕ್ಕೆ ಅವರು – ಹೌದು ನೀವು ಹೇಳುವುದು ಸರಿ. ರಾಹುಲ್ ಗಾಂಧಿ ಮೋದಿಗಿಂತ ಹೆಚ್ಚು ವಿದ್ಯಾವಂತ, ಬುದ್ದಿವಂತ ಮತ್ತು ಸಂಭಾವಿತ, ಆದರೆ ಸತತ ಲೇವಡಿ ಅಪಹಾಸ್ಯಗಳ ಮೂಲಕ ಅವರೊಬ್ಬ ಪೆದ್ದ ಮಂದಬುದ್ದಿಯವ ಎಂದು ಮಾಧ್ಯಮಗಳಲ್ಲಿ ಬಿಂಬಿಸುತ್ತಲೇ ಇರಬೇಕು, ಇದರಿಂದ ಹೊಸ ಪೀಳಿಗೆಯ ಯುವ ಮತದಾರರು ಅವರನ್ನು ಹಗುರವಾಗಿ ಪರಿಗಣಿಸುತ್ತಾರೆ ಹಾಗೂ ಅವರಿಗೆ ಹೆಚ್ಚು ಮಹತ್ವ ಮತ್ತು ಗೌರವ ಕೊಡುವುದಿಲ್ಲ, ಕೊನೆಗೆ ಇದು ಅವರಿಗೆ ನೆಗೆಟಿವ್ ವೋಟ್ ಆಗಿ ಪರಿಣಮಿಸುತ್ತದೆ ಎಂಬುದು ನಮ್ಮ ಬಿಜೆಪಿ ಪ್ರಚಾರ ವಿಭಾಗದವರ ಮನೋವೈಜ್ನಾನಿಕ ರಣತಂತ್ರವಾಗಿದೆ ಎಂದು ಅವರು ಗುಟ್ಟು ಬಿಟ್ಟುಕೊಟ್ಟರು. ಅದಕ್ಕಾಗಿ ಬಿಜೆಪಿ ಐಟಿ ಸೆಲ್ ನವರೇ ರಾಹುಲ್ ಗಾಂಧಿಗೆ ‘ಪಪ್ಪು’ ಚೋಟಾ ಭೀಮ್ ಎಂದು ಅಡ್ಡ ಹೆಸರಿಟ್ಟು ಲೇವಡಿ ಶುರು ಮಾಡಿದ್ದು, ಅದನ್ನೇ ನಾವೂ ಅನುಸರಿಸಬೇಕು ಎಂದು ನಮಗೆ ಆದೇಶವಿದೆ ಎಂದು ಹೇಳಿದರು ಆ ಸರ್ದಾರ್ಜಿ ಜೋಕುಪ್ರಿಯರು. ಇದು ವಿರೋಧಿಗಳನ್ನು ಹಣಿಯುವ ಬಿಜೆಪಿಯ ಕುತ್ಸಿತ ಮನೋವೈಜ್ನಾನಿಕ ತಂತ್ರ.
– ಪ್ರವೀಣ್ ಎಸ್ ಶೆಟ್ಟಿ
Disclaimer: The opinions expressed within this article are the personal opinions of the author. The facts and opinions appearing in the article do not reflect the views of TruthIndia and TruthIndia does not assume any responsibility or liability for the same.