ನವದೆಹಲಿ: ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ದೇಶದ 66 ಮಂದಿ ನಿವೃತ್ತ ಹಿರಿಯ ಸಿವಿಲ್ ಸರ್ವೀಸ್ ಅಧಿಕಾರಿಗಳು (IAS,IFS,IPS) ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ವಿವರವಾದ ದೂರು ಪತ್ರವೊಂದನ್ನು ಸೋಮವಾರ ಸಲ್ಲಿಸಿದ್ದಾರೆ. ಭಾರತದ ಚುನಾವಣಾ ಇತಿಹಾಸದಲ್ಲಿ ಹಿಂದೆಂದೂ ಇಲ್ಲದ ರೀತಿಯಲ್ಲಿ ಚುನಾವಣಾ ಆಯೋಗವು ತನ್ನ ವಿಶ್ವಾಸಾರ್ಹತೆಯನ್ನು ಇಂದು ಕಳೆದುಕೊಳ್ಳತೊಡಗಿದೆ, ಒಂದೊಮ್ಮೆ ಇದು ಹೀಗೇ ಮುಂದುವರಿದು ದೇಶದ ಪ್ರಜೆಗಳು ಆಯೋಗದಲ್ಲಿ ಸಂಪೂರ್ಣ ವಿಶ್ವಾಸ ಕಳೆದುಕೊಂಡರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮಗಳನ್ನು ಉಂಟು ಮಾಡಲಿದೆ ಎಂದು ಹಿರಿಯ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ದೂರು ಪತ್ರದಲ್ಲಿ ಸಹಿ ಹಾಕಿರುವ ಹಿರಿಯ ಅಧಿಕಾರಿಗಳಿಲ್ಲಿ ಮಾಜಿ ವಿದೇಶಾಂಗ ಕಾರ್ಯದರ್ಶಿ ಶಿವಶಂಕರ್ ಮೆನನ್, ಯೋಜನಾ ಆಯೋಗದ ಮಾಜಿ ಕಾರ್ಯದರ್ಶಿ ಎನ್ ಸಿ ಸಕ್ಸೆನಾ, ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್, ಟ್ರಾಯ್ ಮಾಜಿ ಚೇರ್ಮನ್ ರಾಹುಲ್ ಕುಲ್ಲಾರ್, ಮಾಹಿತಿ ತಂತ್ರಜ್ಞಾನ ಇಲಾಖೆಯ ಮಾಜಿ ಕಾರ್ಯದರ್ಶಿ ಬ್ರಜೇಶ್ ಕುಮಾರ್, ಪರಿಸರ ಮತ್ತು ಅರಣ್ಯ ಇಲಾಖೆ ಮಾಜಿ ಕಾರ್ಯದರ್ಶಿ ಮೀನಾ ಗುಪ್ತಾ ಮೊದಲಾದವರಿದ್ದಾರೆ. ಬಹುತೇಕ ಎಲ್ಲೂ ಕೇಂದ್ರ ಸರ್ಕಾರ ಮತ್ತು ನಾನಾ ರಾಜ್ಯ ಸರ್ಕಾರಗಳಲ್ಲಿ ಮುಖ್ಯ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಹಿರಿಯ ಐಎಎಸ್, ಐಪಿಎಸ್, ಐಎಫ್ ಎಸ್ ಅಧಿಕಾರಿಗಳೇ ಆಗಿದ್ದಾರೆ.
“ಭಾರತೀಯ ಚುನಾವಣಾ ಆಯೋಗವು ಸಾಕಷ್ಟು ಸಂಕೀರ್ಣ ಸವಾಲುಗಳಿದ್ದಗ್ಯೂ ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಚುನಾವಣೆ ನಡೆಸಿದ ದಾಖಲೆ ಇದೆ. ಆದರೆ ಆಯೋಗವು ಇಂದು ಗಂಭೀರ ವಿಶ್ವಾಸಾರ್ಹತೆಯ ಬಿಕ್ಕಟ್ಟಿನಿಂದ ನರಳುತ್ತಿದೆ. ಚುನಾವಣಾ ಆಯೋಗ ಈ ಹಿಂದೆ ಹೊಂದಿದ್ದ ನ್ಯಾಯಪರತೆ, ನಿಷ್ಪಕ್ಷಪಾತಿತನ ಹಾಗೂ ದಕ್ಷತೆಗಳ ವಿಷಯದಲ್ಲಿ ಅದು ಈಗ ರಾಜಿ ಮಾಡಿಕೊಂಡಿದೆ. ಇದರಿಂದಾಗಿ ಭಾರತ ಪ್ರಜಾಪ್ರಭುತ್ವದ ಬುನಾದಿಯಾಗಿರುವ ಚುನಾವಣಾ ಪ್ರಕ್ರಿಯೆಯ ಸಮಗ್ರತೆಯೇ ಅಪಾಯಕ್ಕೆ ಸಿಲುಕಿದೆ” ಎಂದು ದೂರಿನಲ್ಲಿ ವಿವರಿಸಲಾಗಿದೆ. “ದೂರು ಸಲ್ಲಿಸುತ್ತಿರುವ ನಾವು ಯಾವುದೇ ರಾಜಕೀಯ ಪಕ್ಷದ ಬೆಂಬಲಿಗರಾಗಲೀ, ವಿರೋಧಿಗಳಾಗಲೀ ಅಲ್ಲ, ಆದರೆ ಸಂವಿಧಾನವು ತಿಳಿಸಿರುವ ರೀತಿಯಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿ ಇಲ್ಲವಾಗಿರುವುದರ ಬಗ್ಗೆ ಕಾಳಜಿ ಹೊಂದಿ ಈ ಪತ್ರ ಬರೆಯುತ್ತಿದ್ದೇವೆ” ಎಂದು ಹೇಳಿದ್ದಾರೆ.
“ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವು ಮಾದರಿ ನೀತಿ ಸಂಹಿತೆಯನ್ನು ರಾಜಾರೋಷವಾಗಿ ಉಲ್ಲಂಘಿಸಿದೆ, ಸಂಹಿತಿಯನ್ನು ದುರ್ಬಳಕೆ ಮಾಡಿಕೊಂಡಿದೆ ಹಾಗೂ ಅದಕ್ಕೆ ಅಗೌರವ ತೋರಿಸಿದೆ. ಆದರೆ ಆಡಳಿತ ಪಕ್ಷದಿಂದ ನಡೆಯುತ್ತಿರುವ ನೀತಿ ಸಂಹಿತೆ ಉಲ್ಲಂಘನೆ ತಡೆಯುವಲ್ಲಿ ಕಠಿಣ ಕ್ರಮ ಕೈಗೊಳ್ಳುವ ಯಾವ ಕೆಲಸವನ್ನೂ ಚುನಾವಣಾ ಆಯೋಗವು ಮಾಡದೇ ಇರುವುದು ಆತಂಕದ ವಿಷಯ” ಎಂದು ರಾಷ್ಟ್ರಪತಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.
ದೂರು ಪತ್ರದಲ್ಲಿ ಚುನಾವಣಾ ಆಯೋಗವು ಪಕ್ಷಪಾತಿ ಧೋರಣೆ ತೋರಿರುವ ಹಲವಾರು ಘಟನೆಗಳನ್ನು ಪಟ್ಟಿ ಮಾಡಲಾಗಿದೆ. ಇದರಲ್ಲಿ ಮಾರ್ಚ್ 27ರಂದು ಎ-ಸ್ಯಾಟ್ ಕ್ಷಿಪಣಿ ಪರೀಕ್ಷೆಯನ್ನು ಪ್ರಧಾನಿ ಮೋದಿ ಘೋಷಣೆ ಮಾಡಿದ್ದು ಸ್ಪಷ್ಟವಾಗಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು ಇದರ ಬಗ್ಗೆ ನಿವೃತ್ತ ಐಎಎಸ್-ಐಪಿಎಸ್ ಅಧಿಕಾರಿಗಳು ದೂರು ಆಯೋಗಕ್ಕೆ ದೂರು ನೀಡಿದ್ದಾಗ್ಯೂ ಚುನಾವಣಾ ಆಯೋಗವು ಮೋದಿಯ ಮೇಲೆ ಕ್ರಮ ಕೈಗೊಳ್ಳದಿರುವುದನ್ನು ಉಲ್ಲೇಖಿಸಲಾಗಿದೆ. ಹಾಗೆಯೇ ನೀತಿ ಸಂಹಿತೆಯ ಎಲ್ಲಾ ಕಟ್ಟಳೆಗಳನ್ನು ಮೀರಿ ನಮೋ ಟಿವಿ ಆರಂಭವಾಗಿದ್ದನ್ನು ಆಯೋಗ ಪ್ರಶ್ನಿಸಿದ ಕುರಿತು, ನರೇಂದ್ರ ಮೋದಿ ಎಂಬ ಬಯೋಪಿಕ್ (ಜೀವನಕಥೆ ಆಧರಿಸಿದ ಸಿನಿಮಾ” ಸಿದ್ಧಪಡಿಸಿಕೊಂಡು ಮತದಾರರ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಚುನಾವಣೆಗೆ ಕೆಲವು ವಾರಗಳಿರುವಾಗ ಬಿಡುಗಡೆ ಮಾಡುತ್ತಿರುವುದನ್ನು ಚುನಾವಣಾ ಆಯೋಗ ಪ್ರಶ್ನಿಸಿಸದೇ ಇರುವುದು ಗಂಭೀರ ವಿಷಯಗಳಾಗಿವೆ, ಇಂತಹ ವಿಷಯಗಳ ಬಗ್ಗೆ ಚುನಾವಣಾ ಆಯೋಗ ಮೌನವಹಿಸಿಕೊಂಡಿರುವುದು ಆಯೋಗದ ವಿಶ್ವಾಸಾರ್ಹತೆಯೇ ನಾಶವಾಗುವ ಲಕ್ಷಣವಾಗಿದೆ ಎಂದು ದೂರು ಸಲ್ಲಿಸಿರುವ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಚುನಾವಣಾ ಆಯೋಗವು ನ್ಯಾಯಯುತವಾಗಿ, ನಿಷ್ಪಕ್ಷಪಾತವಾಗಿ ಹಾಗೂ ದಕ್ಷ ರೀತಿಯಲ್ಲಿ ಸಂವಿಧಾನದ 324ನೇ ವಿಧಿ ತನಗೆ ನೀಡಿರುವ ಅಧಿಕಾರವನ್ನು ಚಲಾಯಿಸಿ, ದೇಶದ ಜನತೆ ಚುನಾವಣಾ ಪ್ರಕ್ರಿಯೆಯಲ್ಲಿ ಮುಕ್ತವಾಗಿ, ಯಾವ ಭಯವಿಲ್ಲದೇ, ಯಾವುದೇ ಅನುಚಿತ ಪ್ರಭಾವವಿಲ್ಲದೇ ತಮ್ಮ ಆಯ್ಕೆಯ ಅಭ್ಯರ್ಥಿಗೆ ಮತ ಚಲಾಯಿಸುವಂತಹ ವಾತಾವರಣ ನಿರ್ಮಿಸಲು ಆಯೋಗ ಮುಂದಾಗಬೇಕು ಎಂದು ರಾಷ್ಟ್ರಪತಿಯವರ ಮೂಲಕ ಮನವಿ ಮಾಡಲಾಗಿದೆ.
ದೂರುಪತ್ರ
ರಾಷ್ಟ್ರಪತಿಗಳಿಗೆ ಸಲ್ಲಿಸಿರುವ ದೂರು ಪತ್ರದಲ್ಲಿ ಸಹಿ ಮಾಡಿರುವ ನಿವೃತ್ತ ಹಿರಿಯ ನಾಗರಿಕ ಸೇವಾ ಅಧಿಕಾರಿಗಳು
- Salahuddin AhmadI AS(Retd.)Former Chief Secretary, Govt. of Rajasthan.
- P. Ambrose IAS(Retd.) Former Additional Secretary, Ministry of Shipping &Transport, GoI
- Bala Baskar IAS(Retd.)Former Principal Adviser (Finance), Ministry of External Affairs, GoI
- Vappala Balachandran IPS(Retd.)Former Special Secretary, Cabinet Secretariat, GoI
- GopalanBalagopalIAS(Retd.)Former Special Secretary, Govt. of West Bengal
- ChandrashekharBalakrishnanIAS(Retd.)Former Secretary, Coal, GoI
- PradipBhattacharyaIAS(Retd.)Former Additional Chief Secretary, Development &Planning and Administrative Training Institute, Govt.of West Bengal
- Meeran CBorwankarIPS(Retd.)Former DGP, Bureau of Police Research andDevelopment, GoI
- Ravi Budhiraja IAS(Retd.)Former Chairman, Jawaharlal Nehru Port Trust, GoI
- Sundar Burra IAS(Retd.)Former Secretary, Govt. of Maharashtra
- Chandramohan IAS(Retd.)Former Principal Secretary, Transport and UrbanDevelopment, Govt. of NCT of Delhi
- Som Chaturvedi IRTS(Retd.)Former Additional Member, Railway Board, GoI
- Anna Dani IAS(Retd.)Former Additional Chief Secretary, Govt. ofMaharashtra.
- Vibha Puri Das IAS(Retd.)Former Secretary, Ministry of Tribal Affairs, GoI
- R. Dasgupta IAS(Retd.)Former Chairman, Food Corporation of India, GoI
- Nareshwar Dayal IFS(Retd.)Former Secretary, Ministry of External Affairs andformer High Commissioner to the United Kingdom
- Nitin Desai IES(Retd.)Former Secretary and Chief Economic Adviser,Ministry of Finance, GoI
- Keshav Desiraju IAS(Retd.)Former Health Secretary, GoI
- G.DevasahayamIAS(Retd.)Former Secretary, Govt. of Haryana
- Sushil Dubey IFS(Retd.)Former Ambassador to Sweden
- Arif Ghauri IRS(Retd.)Former Governance Adviser, DFID, Govt. of theUnited Kingdom (on deputation)
- Gourisankar GhoshIAS(Retd.)Former Mission Director, National Drinking WaterMission, GoI
- Tuktuk Ghosh IAS(Retd.)Former Special Secretary and Financial Adviser,Ministry of Road Transport & Highways, Shipping &Tourism, GoI
- K. Guha IAS(Retd.)Former Joint Secretary, Department of Women &Child Development, GoI
- Meena Gupta IAS(Retd.)Former Secretary, Ministry of Environment &Forests, GoI
- Sajjad Hassan IAS(Retd.)Former Commissioner (Planning), Govt. of Manipur
- Siraj Hussain IAS(Retd.)Former Secretary, Department of Agriculture, GoI
- Jagdish Joshi IAS(Retd.)Former Additional Chief Secretary (Planning), Govt.of Maharashtra
- Najeeb Jung IAS(Retd.)Former Lieutenant Governor, Delhi
- Rahul Khullar IAS(Retd.)Former Chairman, Telecom Regulatory Authority of India
- Ajai Kumar IndianForestService(Retd.)Former Director, Ministry of Agriculture, GoI
- Arun Kumar IAS(Retd.)Former Chairman, National Pharmaceutical PricingAuthority, GoI
- Brijesh Kumar IAS(Retd.)Former Secretary, Department of InformationTechnology, GoI
- Sudhir Kumar IAS(Retd.)Former Member, Central Administrative Tribunal
- Subodh Lal IPoS(Retd.)Former Deputy Director General, Ministry ofCommunications, GoI
- M.S. Malik IFS(Retd.)Former Ambassador to Myanmar & SpecialSecretary, MEA, GoI
- Harsh Mander IAS(Retd.) of Madhya Pradesh
- Lalit Mathur IAS(Retd.)Former Director General, National Institute of RuralDevelopment, GoI
- Aditi Mehta IAS(Retd.)Former Additional Chief Secretary, Govt. of Rajasthan.
- Shivshankar MenonIFS(Retd.)Former Foreign Secretary and Former National Security Adviser
- Sonalini Mirchandani IFS(Resigned)GoI
- Sunil Mitra IAS(Retd.)Former Secretary, Ministry of Finance, GoI
- Deb Mukharji IFS(Retd.)Former High Commissioner to Bangladesh andformer Ambassador to Nepal
- Nagalsamy IA&AS(Retd.)Former Principal Accountant General, Tamil Nadu &Kerala
- Sobha Nambisan IAS(Retd.)Former Principal Secretary (Planning), Govt. ofKarnataka
- G.J. NampoothiriIPS(Retd.)Former Director General of Police, Govt. of Gujarat
- Amitabha Pande IAS(Retd.)Former Secretary, Inter-State Council, GoI
- Niranjan Pant IA&AS(Retd.)Former Deputy Comptroller & Auditor General of India
- Alok Perti IAS(Retd.)Former Secretary, Ministry of Coal, GoI
- P. Raja IAS(Retd.)Former Chairman, Maharashtra Electricity Regulatory Commission
- Rajivan IAS(Resigned) Former Director, Prime Minister’s Office,
- Julio Ribeiro IPS (Retd.)Former Adviser to Governor of Punjab & former Ambassador to Romania
- Manabendra N.RoyIAS(Retd.)Former Additional Chief Secretary, Govt. of West Bengal
- Deepak Sanan IAS(Retd.)Former Principal Adviser (AR) to Chief Minister, of Himachal Pradesh
- C. Saxena IAS(Retd.)Former Secretary, Planning Commission, GoI
- Ardhendu Sen IAS(Retd.)Former Chief Secretary, Govt. of West Bengal
- Abhijit Sengupta IAS(Retd.)Former Secretary, Ministry of Culture, GoI
- Aftab Seth IFS(Retd.)Former Ambassador to Japan
- Navrekha Sharma IFS(Retd.)Former Ambassador to Indonesia
- Pravesh Sharma IAS(Retd.)Former Additional Chief Secretary, Govt. of MadhyaPradesh
- Raju Sharma IAS(Retd.)Former Member, Board of Revenue, Govt. of UttarPradesh
- Rashmi ShuklaSharmaIAS(Retd.)Former Additional Chief Secretary, Govt. of MadhyaPradesh
- Jawhar Sircar IAS(Retd.)Former Secretary, Ministry of Culture, GoI, & former CEO, Prasar Bharati
- S.S. Thomas IAS(Retd.)Former Secretary General, National Human Rights Commission
- Hindal Tyabji IAS(Retd.)Former Chief Secretary rank, Govt. of Jammu &Kashmir
- RamaniVenkatesanIAS(Retd.)Former Director General, YASHADA, Govt. of Maharastra