ನವದೆಹಲಿ: ಪ್ರಧಾನಿ ಮೋದಿ ಅವರಿಗೆ ಮೊದಲೇ ಸಿದ್ಧಪಡಿಸಿಕೊಂಡ ಭಾಷಣಗಳನ್ನು ಮಾಡಿ ಅಭ್ಯಾಸವೇ ಹೊರತು ಸ್ಥಳದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿ ಅಭ್ಯಾಸವಿಲ್ಲ, ಅಥವಾ ಅಂತಹ ಅಭ್ಯಾಸ ಅವರಿಗೆ ಬೇಕಿಲ್ಲ.
ಸೋಮವಾರ ನಡೆದ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮವೂ ಇದಕ್ಕೆ ಹೊರತಾಗಲಿಲ್ಲ.
90 ನಿಮಿಷಗಳ ಕಾಲ ನಡೆದ ಬಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಹಲವು ಮಾಧ್ಯಮಗಳ ಪತ್ರಕರ್ತರು ಪ್ರಧಾನಿ ಮೋದಿಗೆ ಪ್ರಶ್ನೆಗಳನ್ನು ಕೇಳಬೆಂಕೆಂದು ಕಾತುರರಾಗಿದ್ದರು. ಪ್ರಣಾಳಿಕೆ ಬಿಡುಗಡೆಯಾಗಿ 90 ಸೆಕೆಂಡ್ ಕೂಡಾ ಮೋದಿ ಸ್ಥಳದಲ್ಲಿರದೇ ಪಲಾಯನಗೈದದ್ದು ಮಾತ್ರ ಪತ್ರಕರ್ತರಿಗೆ ನಿರಾಸೆಯನ್ನುಂಟುಮಾಡಿದೆ.
ಸಾಮಾನ್ಯವಾಗಿ ಪಕ್ಷದ ಪ್ರಣಾಳಿಕೆ ಬಿಡುಗಡೆ ನಂತರ ಯಾವುದೇ ಪಕ್ಷದ ಮುಖಂಡರು ಸುದ್ದಿಗಾರರೊಂದಿಗೆ ಸಂವಾದ ನಡೆಸುತ್ತಾರೆ. ಇತ್ತೀಚೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆಯಾದಾಗ ಕಾಂಗ್ರೆಸ್ ಮುಖಂಡರೆಲ್ಲರೂ ಇದ್ದರು. ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ರಾಹುಲ್ ಗಾಂಧಿ ಸಮಾಧಾನದಿಂದಲೇ ಉತ್ತರಿಸಿದ್ದರು. ಆದರೆ ಮೋದಿ ಮತ್ತು ಇತರ ನಾಯಕರು ಮಾಧ್ಯಮಗಳಿಗೆ ಎದುರಾಗದೇ ನಾಪತ್ತೆಯಾಗಿರುವುದು ಪ್ರತಿಪಕ್ಷಗಳ ಟೀಕೆಗೂ ಗುರಿಯಾಗಿದೆ.
ಬಿಜೆಪಿ ಪ್ರಣಾಳಿಕೆಯಲ್ಲಿ ಹೊಸತೇನಿಲ್ಲ ಆದ್ದರಿಂದ ಮಾಧ್ಯಮಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ವಿಪಕ್ಷಗಳು ಟೀಕಿಸಿದೆ.
ಸಾಮಾನ್ಯವಾಗಿ ಪ್ರಧಾನಿ ನೇರಸಂವಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಾಗ ಗೊತ್ತು ಮಾಡಿದ ಪ್ರೇಕ್ಷಕರಷ್ಟೇ ಮಾತನಾಡುತ್ತಾರೆ. ಇಂತಹುದೇ ಪ್ರಶ್ನೆ ಕೇಳಬೇಕು ಎಂಬುದೂ ಸಂಪೂರ್ಣ ಪೂರ್ವನಿಯೋಜಿತವಾಗಿರುತ್ತದೆ. ಆದರೆ ಮುಕ್ತ ಸಂವಾದಗಳಿಗೆ ನರೇಂದ್ರ ಮೋದಿ ಬಹಳ ಹೆದರುತ್ತಾರೆ. ಯಾಕೆಂದರೆ ಪತ್ರಕರ್ತರು ಅವರಿಗೆ ಇಷ್ಟವಾಗದ ಪ್ರಶ್ನೆ ಕೇಳಿಬಿಡುತ್ತಾರೆ ಎಂದು.
ಪ್ರಧಾನಿ ಪ್ರಶ್ನೆಗಳನ್ನೆದುರಿಸದೇ ಕಾಲ್ಕಿತ್ತ ಬಗ್ಗೆ ಹಲವಾರು ರಾಷ್ಟ್ರ ಧುರೀಣರು ಪ್ರತಿಕ್ರಿಯಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ”ಮೋದಿ ಅವರು ಪ್ರಣಾಳಿಕೆ ಬಿಡುಗಡೆ ನಂತರ ಸುದ್ದಿಗಾರೊಂದಿಗೆ ಚರ್ಚಿಸಬೇಕಿತ್ತು. ಆದರೆ ಮಾಧ್ಯಗಳ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವಿಲ್ಲದೆ ಮೋದಿ ಪಲಾಯನವಾಗಿದ್ದಾರೆ,’’ ಎಂದು ಟೀಕಿಸಿದ್ದಾರೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ,“ಇದರಲ್ಲೇನು ವಿಶೇಷವಿಲ್ಲ. ಪ್ರಶ್ನೆಗಳಿಗೆ ಉತ್ತರಿಸಲು ಅವರು ಹೆದರುತ್ತಾರೆ. ಇದು ನಿರಂಕುಶಾಧಿಕಾರತ್ವವೇ ಹೊರತು ಪ್ರಜಾಪ್ರಭುತ್ವವಾಗಲು ಸಾಧ್ಯವೇ ಇಲ್ಲ,’’ ಎಂದೂ ವ್ಯಂಗ್ಯವಾಡಿದ್ದಾರೆ.
ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ. ರಾಜಾ, “ಇದು ಸಂಭವನೀಯವೇ. ಮೋದಿಗೆ ಮಾಧ್ಯಗಳನ್ನು ಎದುರಿಸಲು ಧೈರ್ಯವಿಲ್ಲ. ಅವರು ಎಂದೂ ಯಾರ ಮಾತನ್ನೂ ಕೇಳಿಸಿಕೊಂಡಿಲ್ಲ. ಕೇವಲ ಬರುತ್ತಾರೆ ತಮ್ಮ ಮನದ ಮಾತನ್ನು (ಮನ್ ಕಿ ಬಾತ್) ಹೇಳುತ್ತಾರೆ, ಇದೇ ಅವರ ಶೈಲಿ,’’ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಖಜಾಂಚಿ ಅಹಮದ್ ಪಟೇಲ್, “ನಮ್ಮ ಪಕ್ಷದ ಪ್ರಣಾಳಿಕೆ ಬಿಡುಗಡೆ ನಂತರ ವಿವರವಾದ ಪ್ರಶ್ನೋತ್ತರ ಸಭೆಯನ್ನು ನಡೆಸಿದೆವು. ನಮ್ಮ ನಂತರ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ, ಯಾವೊಬ್ಬ ಬಿಜೆಪಿ ನಾಯಕರೂ ಒಂದೇ ಒಂದು ಪ್ರಶ್ನೆಗೂ ಉತ್ತರಿಸಿಲ್ಲ. ತಮ್ಮ ಐದು ವರ್ಷದ ಆಡಳಿತಕ್ಕೆ ಅವರ ಬಳಿ ಉತ್ತರವಿಲ್ಲ. ಅವರ ಇಂತಹ ನಡೆ ಅವರನ್ನು ಮೇ23ರಂದು ಆಡಳಿತದಿಂದ ಕೆಳಗಿಳಿಯುವಂತೆ ಮಾಡುತ್ತದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅಮಿತ್ ಶಾ, ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಸುಷ್ಮ ಸ್ವರಾಜ್ ನಂತರ ಅಂತಿಮವಾಗಿ ಮೋದಿ ಮಾತನಾಡಿದರು. ಅವರ ಭಾಷಣ ಅಂತ್ಯವಾಗುತ್ತಿದ್ದಂತೆ ಹಿರಿಯ ನಾಯಕ ಭುಪೀಂದ್ರ ಯಾದವ್ ವಂದನಾರ್ಪಣೆ ಮಾಡಿ ಕಾರ್ಯಕ್ರಮವನ್ನು ಮುಗಿಸಿಯೇಬಿಟ್ಟರು.
ಯಾವೊಬ್ಬ ನಾಯಕರೂ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧರಿರಲಿಲ್ಲ. ಪ್ರಣಾಳಿಕೆ ಕಮಿಟಿಯ ಅಧಕ್ಷ ರಾಜನಾಥ್ ಸಿಂಗ್ ಅವರು “ಚುನಾವಣಾ ಪ್ರಚಾರಕ್ಕಾಗಿ ಜಮ್ಮುವಿಗೆ ತೆರಳುತ್ತಿದ್ದೇವೆ. ಜಮ್ಮು ಮತ್ತು ಉದಂಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಸಭೆಗಳಲ್ಲಿ ಭಾಗಿಯಾಗುತ್ತಿದ್ದೇನೆ,’’ ಎಂದು ಕಾರ್ಯಕ್ರಮದ ನಂತರ ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾದ ಸಿಪಿಐ (ಎಂ) ಪ್ರಧಾನ ಅಧ್ಯಕ್ಷ ಸೀತಾರಾಂ ಯೆಚೂರಿ, ಸಿಪಿಐ ರಾಷ್ಟ್ರೀಯ ಅಧ್ಯಕ್ಷ ಡಿ. ರಾಜಾ ಮತ್ತು ಇತರ ಪಕ್ಷಗಳ ಪ್ರಣಾಳಿಕೆ ಬಿಡುಗಡೆ ನಂತರ ಮಾಧ್ಯಮಗಳ ಜತೆ ಸಂವಾದ ನಡೆಸಿದ್ದರು.
ಇತ್ತೀಚೆಗೆ ಮೋದಿ ಅವರು ಕೆಲವು ವಾಹಿನಿಗಳಲ್ಲಿ ನೀಡಿದ್ದ ಸಂದರ್ಶನದಲ್ಲಿ ಸಾಮಾಜಿಕ ಜಾಲತಾಣ ಬಳಕೆದಾರರು ಮೋದಿಗೆ ನಕಾರಾತ್ಮಕ ಪ್ರಶ್ನೆಗಳು ಹಾಗೂ ಕಮೆಂಟ್ ಗಳ ಮೂಲಕ ಮೋದಿಗೆ ಮುಖಭಂಗವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
Modi has done only Foreign ministership not Prime Ministership he made waste the Indian people’s. tax amount in unlimited crores, he well known about weaknes Indian citizens so spent. People excepect Modi should not come again.